ವಿಶ್ವ ಮಾನವತ್ವ
ಕಾವಿ ತೊಟ್ಟ ಕಟಿಬದ್ದ ಮಹನೀಯರೆ
ಮಠ ಬಿಟ್ಟು ಹೊರತನ್ನಿ ನಿಮ್ಮ ಘಟವ.
ಸಾರಿ ಹೇಳುತಿದೆ ಬಸವ ಡಂಗುರ
ಕಾಯಕವೇ ಕೈಲಾಸ ಅದೆಂತ ಸುಂದರ!
ಎಲ್ಲ ವರ್ಣಗಳಲಿ ಮೇಲು ಅದೆ ಬಿಳಿಯಬಣ್ಣ
ಬಳೆದುಕೊ ವಿಭೂತಿ ಕಳೆದುಕೊ ಭವರೋಗವನ್ನ.
ಸರ್ವಸಮಾನತ್ವ ವಿಶ್ವಮಾನವತ್ವ ಅದೇಬಸವತತ್ವ
ಬೀಸಲಿ ಹೊಸಗಾಳಿ ಅತ್ಯಾಧುನಿಕ ಪಥದಲಿ!
ಮುಸುಕಿರುವ ವ್ಯಾಘ್ರತ್ವ ಹೊಡೆದೋಡಿಸಿ
ಮಾನವೀಯ ಬಸವತ್ವ ಮೆರೆಸಬನ್ನಿ.
ಕ್ರೂರಿ ನಾವಲ್ಲ ಕೊಟ್ಟ ಮಾತ ತಪ್ಪದವರೆಂದು
ಈ ಜಗಕೆ ಸಾರ ನೀತಿ ಸಾರಬನ್ನಿ!
- ಎಮ್ಮೆಚ್ಚೆ

Comments
Post a Comment
Liked the post? Don't forget to tell us, do comment.