1. ಪ್ರೀತಿ 




 ಮನದಲಿ ಮೂಡಿದ ಮೊದಲ ಹೆಜ್ಜೆ
ಆ ಮೊದಲ ಹೆಜ್ಜೆಯ ಮರುಗಳಿಗೆಯೆ 
ಮನಸನ್ನು ಅರಮನೆಯಾಗಿಸಿ
ಅದರಲ್ಲಿ ನಿನ್ನ ಪಟ್ಟದರಸಿಯಾಗಿಸಿದೆ!

ಅಂದು ನಿನ್ನ ಆ ಮುದ್ದಾದ ನಗುವನ್ನು 
ನೋಡುತ ನಾ ಮೈ ಮರೆತೆ 
ಇಂದು ನೀ ಜೊತೆಗಿಲ್ಲದಿರಲು, ಆ
ನಿನ್ನ ನಗುವನೆ ನೆನೆಯುತ ಕುಳಿತೆ!

ಮತ್ತೊಮ್ಮೆ ನೀ ಆಗಮಿಸು
ಮನವಿಯೊಂದ ಸ್ವೀಕರಿಸು
ಮನಬಿಚ್ಚಿ ಮಾತನಾಡುವೆ ನಾ,
ನೀ ಒಪ್ಪಿದರೆ ಜೊತೆಯಾಗಿ ಕೈ ಹಿಡಿದು ನಡೆವೆ!

ಜೊತೆಯಾಗಿ ಸಾಗುವ ಪ್ರತಿ ಹೆಜ್ಜೆಯಲೂ
ನಾ ನಿನ್ನ ನಗುವ ಬಯಸುವೆ
ನೀ ಪಡೆಯೊ ಪ್ರತಿ ಶ್ವಾಸದಲೂ
ನನ್ನ ಪ್ರೀತಿಯ ಬೆರೆಸುವೆ!

ನಿನ್ನ ಆಗಮನಕ್ಕಾಗಿ ನಾ ಕಾದಿರುವೆ
ಕಳೆದುಹೋಗುತ್ತಿರುವ ಈ ದಿನಗಳಲ್ಲಿ 
ನಿನ್ನ ನೆನಪಿನಲ್ಲಿ ನಾ ಕಾಲ ಕಳೆವೆ
ಮತ್ತೆ ಬಾರದಿದ್ದರೆ ನೀ ನನ್ನ ಬದುಕಿನಲ್ಲಿ!
                                         
                                                            - ಅರ್ಕ

2. ಮಮತೆ 


ಪ್ರೀತಿಯ ಕೈತುತ್ತಿನ ಪದವಿದು 
ಅಮ್ಮ ಅನ್ನೋ ಅಧ್ಬುತದ ಒಲವಿದು
ಕಿಲ ಕಿಲ ನಗುತ, ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ
ಊಟ ಮಾಡದೆ, ಕಂದ ಆಟವಾಡಲು
ಒಲವಿನಿಂದ ಅಪ್ಪ ಗದರಲು
ಕಂದ ಅಳಲು ಶುರು ಮಾಡಿತು!

ಕಂದ ನಿನ್ನ ಅಳುವ ಕಂಡು
ಅಮ್ಮ ಬಂದಳು
ಕಥೆಯನೊಂದು ಹೇಳುವೆನೆಂದು
ಕೈತುತ್ತ ತಂದಳು!

ತಲೆಯ ಸವರುತಾ ಹಣೆಗೆ ಮುತ್ತನಿಡುತ 
ಕಥೆಯ ಹೇಳುತ ಕಂದ ನಿನಗೆ ಕೈತುತ್ತ ಕೊಟ್ಟಳು
ಕದ್ದು ಕದ್ದು ಇದ ಇಣುಕುತ್ತಿದ್ದ ಆ ಬಾನ ಚಂದಿರ
ಮುದ್ದು ಕಂದನ ನಗುವ ಕದಿಯಲು
ಪ್ರೀತಿ ಅಮ್ಮನ ಒಲವ ಪಡೆಯಲು
ಭೂಮಿಗೆ ಬರುವೆನೆಂದು ಹಠವ ಹಿಡಿದನು!

ಕಥೆಯ ಹೇಳುತ ಊಟ ಮುಗಿಯುತ  
ಮಮತೆಯ ಮಡಿಲಲ್ಲಿ ಕಂದ ನಿದ್ರೆಗೆ  ಜಾರಲು
ಬಾನ ಚಂದಿರ ಭೂಮಿಗೆ ಬಾರೆನೆಂದು ತಿಳಿದು 
ಪ್ರೀತಿ ಅಮ್ಮನ ಒಲವು ನೆನೆದು 
ಮುದ್ದು ಕಂದನ ನಗುವ ನೋಡಿ  
ತಾನು ಕಿಲಕಿಲ ನಕ್ಕನು!

                                                        - ಅರ್ಕ



Comments

Popular Posts