ತಿಳಿಯುತ್ತಿಲ್ಲ
ಹಿರಿಯರು ಕಟ್ಟಿದ ನಾಡಿನಲ್ಲಿ
ಕೆಟ್ಟವರೆಲ್ಲ ತುಂಬಿರುವಾಗ
ಬದುಕಿನ ಬೆಲೆಯೇ ನಶಿಸಿ ಹೊದಾಗ
ಹ್ಯಾಂಗ ಬದಕುವದೋ ತಿಳಿಯುತ್ತಿಲ್ಲ!
ಕೆಟ್ಟವರೆಲ್ಲ ತುಂಬಿರುವಾಗ
ಬದುಕಿನ ಬೆಲೆಯೇ ನಶಿಸಿ ಹೊದಾಗ
ಹ್ಯಾಂಗ ಬದಕುವದೋ ತಿಳಿಯುತ್ತಿಲ್ಲ!
ಬಿದ್ದ ಬೇಲಿಯೆ ಎದ್ದೆದ್ದು ಬಂದು
ಎಲ್ಲಾ ಬೆಳೆಯನು ತಾನ ತಿಂದು
ಮೊಳೆತ ಕನಸು ಮಣ್ಣು ಗೂಡೈತಿ
ಹ್ಯಾಂಗ ಮಾಡುವದೋ ಹೊಳೆಯುತ್ತಿಲ್ಲ!
ಎಲ್ಲಾ ಬೆಳೆಯನು ತಾನ ತಿಂದು
ಮೊಳೆತ ಕನಸು ಮಣ್ಣು ಗೂಡೈತಿ
ಹ್ಯಾಂಗ ಮಾಡುವದೋ ಹೊಳೆಯುತ್ತಿಲ್ಲ!
ಅಭಿಮಾನಿ ಹೆಸರಿನ ಕೂಟವ ಕಟ್ಟಿ
ಸಮಾಜ ಸೇವೆಯ ಚಾದರ ಹೊದ್ದಿ
ಸುಳ್ಳ ದೇಣಿಗೆ ಮೋಹರು ಒತ್ತಿ
ಬೆಳ್ಳಗ ಪುಡಾರಿ ಆದ್ಯಲ್ಲೋ ಅರಿವೇ ಇಲ್ಲ!
ಸಮಾಜ ಸೇವೆಯ ಚಾದರ ಹೊದ್ದಿ
ಸುಳ್ಳ ದೇಣಿಗೆ ಮೋಹರು ಒತ್ತಿ
ಬೆಳ್ಳಗ ಪುಡಾರಿ ಆದ್ಯಲ್ಲೋ ಅರಿವೇ ಇಲ್ಲ!
ಹೆಡ್ಡ ಮಾಸ್ತರ ವಿದ್ಯೆಯ ನೀಡಿ
ಎದೆಯನ ದೀಪ ನಂದಿಸಿಬಿಟ್ಟ
ಉಡಾಳ ಮಕ್ಕಳೆ ಆಳುವಾಗ
ಏಳಿಗೆ ಎಲ್ಲಿದೆಯೋ ನೋಡವರಿಲ್ಲ!
ಎದೆಯನ ದೀಪ ನಂದಿಸಿಬಿಟ್ಟ
ಉಡಾಳ ಮಕ್ಕಳೆ ಆಳುವಾಗ
ಏಳಿಗೆ ಎಲ್ಲಿದೆಯೋ ನೋಡವರಿಲ್ಲ!
ಕಾನೂನು ಪಾಲಿಸೊ ಪೊಲೀಸಿನವನು
ತನ್ನದೆ ಪುಂಡರ ಗ್ಯಾಂಗು ಕಟ್ಟಿ
ತನ್ನದೆ ಪುಂಡರ ಗ್ಯಾಂಗು ಕಟ್ಟಿ
ಕಳ್ಳರ ಖಾತೆ ಚನ್ನಾಗಿ ಬರೆದು
ಭರ್ಜರಿ ತನಿಖೆ ಮಾಡ್ಯಾನೋ ಕೇಳವರಿಲ್ಲ!
ನ್ಯಾಯಾ ಕೊಡಿಸೊ ವಕೀಲನವನು
ತನ್ನದೆ ವಂಚನೆ ಗ್ಯಾಂಗು ಕಟ್ಟಿ
ಎಲ್ಲಾಕೇಸೂ ತಾನ ನುಂಗಿ
ಮುದ್ದತು ಹೇಳ್ಯಾನೋ ಜನರಿಗೆ ಗೊತ್ತ ಇಲ್ಲ!
- ಎಮ್ಮೆಚ್ಚೆ.
ತನ್ನದೆ ವಂಚನೆ ಗ್ಯಾಂಗು ಕಟ್ಟಿ
ಎಲ್ಲಾಕೇಸೂ ತಾನ ನುಂಗಿ
ಮುದ್ದತು ಹೇಳ್ಯಾನೋ ಜನರಿಗೆ ಗೊತ್ತ ಇಲ್ಲ!
- ಎಮ್ಮೆಚ್ಚೆ.

👏👏👌
ReplyDeleteThank you !
DeleteGreat improvement
ReplyDeleteThank you !
DeleteNice
ReplyDeleteThank you!
DeleteI want to gain knowledge I hope it fullfill as its possible
ReplyDeleteSure, we will try our best to keep up our work to your expectations. If you want any guidance for writing please email us to dream.hustle.achieve.live@gmail.com
Delete