1. ಭಾವನಾಭಿನಯ
ನಾಯಿಯ ಭಾವನಾಭಿನಯದ ಶಕ್ತಿಯದು
ಬಾಯಿಗಿಂತ ಬಾಲಕ್ಕೆ ಅತಿ ಹೆಚ್ಚು,
ಪರರ ಓಲೈಸುವ ವಂಚಿತ ಕಲೆಯದು
ನಿಷ್ಠನ ಕಪಾಳಕ್ಕೆ ಬಾರಿಸಿದ ಪೆಟ್ಟು !
-ಎಮ್ಮೆಚ್ಚೆ
ವಿಸ್ತೃತ
2. ಶೂನ್ಯ ಸಂಪಾದನೆ
ಕೊಟ್ಟು ಬಿಟ್ಟು ಬಚ್ಚಿಟ್ಟ ಒಯ್ಯಲಾರದ ವಸ್ತು
ಸಂಗ್ರಹಣೆಯ ಹುಸಿ ಭ್ರಮೆಯ ಭರವಸೆಗಸ್ತು
ಬಾಳಬೇಕಾದವರ ಬರಸೆಳೆದ ನೆಪತ್ತು
ಹೋದರಲ್ಲ ಮತ್ಸರದ ಮಿತ್ರರು ಒಯ್ಯದೇ ಸ್ವತ್ತು !
-ಎಮ್ಮೆಚ್ಚೆ
ವಿಸ್ತೃತ
ಮರಣಿಸಿದಮೇಲೆ ಯಾರೂ ಏನನ್ನೂ ಜೊತೆಗೆ ಒಯ್ಯಲು ಸಾಧ್ಯವಿಲ್ಲವಾದರೂ ಎಲ್ಲರೊಂದಿಗೆ ಹಂಚಿ ಖುಷಿಪಡದೆ ಬಚ್ಚಿಟ್ಟುಕೊಳ್ಳುತ್ತೇವೆ. ಜೀವನದಲ್ಲಿ ನೆಮ್ಮದಿಯಾಗಿ ಬದುಕಲು ಸಂಪಾದಿತ ಸಂಗ್ರಹಣೆ ಬಲುಮುಖ್ಯ, ಆದರೆ ಅವಶ್ಯಕತೆಗೂ ಮೀರಿ ಆಸೆಪಡುತ್ತೇವೆ. ಸಂಭಂದಗಳಲ್ಲೇ ಮೋಸ ಮಾಡಿದಂತಹ ಕೆಲ ಗೆಳೆಯರು ಏನೂ ಒಯ್ಯದೆ ಗತಿಸಿಹೋಗಿರುವುದು ವಿಪರ್ಯಾಸ.


Meaningful and it's a self evaluation time
ReplyDeleteSuitable for present situation
ReplyDelete