1. ವ್ಯಂಗ್ಯತೆ 


ಭಂಡನೆಯ ಜನರವರು
ಖಂಡನೆಯ ಮಾಡುವರು.
ಆಡಿಕೊಳ್ಳುವದಕರ್ಪಿತರು
ಮಂಡನೆಯನೇ ಮರೆತವರು!
                               - ಎಮ್ಮೆಚ್ಚೆ

ವಿಸ್ತೃತ

ಕೆಲವು ಜನರು ಬೇರೆಯವರ ಒಳ್ಳೆಯ ವಿಚಾರಗಳನ್ನು ವಿನಾಕಾರಣ ವಿರೋಧಿಸುತ್ತಾ ಹೋಗುತ್ತಾರೆ ಹೊರತು ತಮ್ಮ ವಿಚಾರಗಳನ್ನು ಸಮರ್ಪಕವಾಗಿ ತಿಳಿಸದೆ, ಚರ್ಚಿಸದೆ ಅಲ್ಲಿ ಇಲ್ಲಿ ವ್ಯಂಗ್ಯ ಮಾಡುತ್ತಲಿರುವುದೆ   ದೊಡ್ಡ ಕೆಲಸವೆಂದು ತಿಳಿದಿರುತ್ತಾರೆ.

2. ಸ್ವಚ್ಛತೆ

ತಟ್ಟಿದರೆ ಭರಣಿ, ಬಳಿದರೆ ಸಗಣಿ
ಸಾರಿಸಿದರೆ ಸುಣ್ಣ, ಹಚ್ಚಿದರೆ ಬಣ್ಣ.
ಮತ್ಯಾಕ ಬೇಕು ಇರದಿದ್ದರ ಮ್ಯಾಗ ಕಣ್ಣ
ಬೆಳಕು ಅನ್ನೋದು ಒಂದ ನೀ ಆಗಬೇಡ ಸಣ್ಣ!
                                                                           - ಎಮ್ಮೆಚ್ಚೆ

ವಿಸ್ತೃತ

ಭರಣಿ ತಯಾರಿಸುವ ಸಗಣಿಯನ್ನು ಮನೆ ಶುಚಿಗೊಳಿಸಲು ಬಳಿಯುತ್ತಾರೆ, ಸುಣ್ಣವನ್ನು ಸಾರಿಸುತ್ತಾರೆ, ಬಣ್ಣವನ್ನು ಹಚ್ಚುತ್ತಾರೆ. ಹೀಗೆ ಜನರು ತಮ್ಮ ಯೋಗ್ಯತೆಯ ಅನುಸಾರವಾಗಿ ಅನುಸರಿಸಬೇಕೇ ಹೊರತು ಬೇರೆಯವರ ನೋಡಿ ಮರಗಬಾರದು. ಏಕೆಂದರೆ ಮುಖ್ಯವಾಗಿ ಬೇಕಾಗಿರುವುದು ಸ್ವಚ್ಛತೆಯೇ ಹೊರತು ಆಡಂಬರವಲ್ಲ.

Comments

  1. ವ್ಯಂಗ್ಯತೇ ಕವನ ಸಾರ್ವಕಾಲಿಕ ಸತ್ಯ, ಕವಿಯು ಅದರ ಗಂಭೀರತೆಯನ್ನು ವ್ಯಂಗ್ಯತೆ ಮೂಲಕ ಸುಂದರವಾಗಿ ಹೇಳಿದ್ದಾರೆ. ಕವಿತೆಯ ಭಾವಾರ್ಥ (ವಿಸ್ತೃತ) ಕೊಡುತ್ತಿರುವುದು ತುಂಬ ಸಹಾಯ ಆಗುತ್ತದೆ. ತುಂಬ ಧನ್ಯವಾದಗಳು

    ReplyDelete

Post a Comment

Liked the post? Don't forget to tell us, do comment.

Popular Posts