1. 

ಓ ಪುಟ್ಟರಾಜ ನೀ ರವಿಗಿಂತಲು ತೇಜ,
 ಚಂದ್ರನ ತಂಪು, ಗಾನದ ಇಂಪು, 
ತಾಯಿಯ ಒಡಲು, ನಿನ್ನಯ ಮಡಿಲು, 
ಅಂಧರಿಗೆ ಆಧಾರ, ಧರ್ಮದ ಸೂತ್ರಧಾರ,
ದೇವರ ಸಾಕಾರ, ಈ ನಿನ್ನ ಆಕಾರ, 
ಬಾ ಮತ್ತೆ ಅವತರಿಸು, ಗದಗನ್ನು ಉದ್ಧರಿಸು,
ಅನಾಥರ ಬಾಳಿಗೆ ಬೆಳಕನ್ನು ಹರಿಸು!
                                                   - ಮದನ್ 


2.

ಮೋಡಗಳಾ ಮಧ್ಯ ಚಂದಿರ ಬಂದಿಯಾಗಿರುವ
ಗುಡುಗಿ ನನ್ನ ಸಹಾಯ ಕೇಳುತ್ತಿರುವ
ಮಿಂಚು ಚೆಲ್ಲಿ ತನ್ನ ಜಾಗ ತಿಳಿಸುತ್ತಿರುವ
ಮಳೆಯ ರೂಪದಲ್ಲಿ ಕಣ್ಣಿರು ಸುರಿಸುತ್ತಿರುವ
ಅವನನ್ನು ಬಿಡಿಸಲಾಗದ ನಾನು ಅಸಹಾಯಕ
ಈ ಕಾಲ್ಪನಿಕ ಘಟನೆಯ ಪ್ರೇಕ್ಷಕ!
                                                  - ಗಗನ್ 

3.


ಅನುಕರಣೆಯದು ಆತ್ಮಾವನತಿಗೆ ಮೂಲ
ಏರಬೇಕದು ಅನುಸರನೆಯ ಸಮೂಲ
ನಿನ್ನದೇ ಸ್ವಂತ ಗುರುತು ಅಳಿಸಿಹೋಗದಿರಲಿ
ಬಾಳ ಪೀಳಿಗೆಯ ದಾರಿ ಕತ್ತಲಾಗದಿರಲಿ.
                                                      - ಎಮ್ಮೆಚ್ಚೆ
ವಿಸ್ತೃತ
ಮನುಷ್ಯ ಜೀವಿಗಳ ಜೀವ ಎನ್ನುವುದು ಒಂದೇ ತೆರನಾಗಿರುವಂತಹದ್ದು.ಆದರೆ ಜೀವಿಸುವದು ಎಲ್ಲರೂ ವಯಕ್ತಿಕವಾಗಿ. ಅವರವರ ಆತ್ಮಗಳು ಅವರವರ ದೇಹದ ಸ್ಥಿತಿಗನುಗುಣವಾಗಿ ಅವರಲ್ಲಿ ಇರುತ್ತವೆಯಂತೆ, ದೇಹ ನಿಷ್ಕ್ರಿಯವಾದೊಡನೆ ಆತ್ಮ ಅದನ್ನುಬಿಟ್ಟುಹೋಗುವದಂತೆ. ಆತ್ಮಕ್ಕೆ ಸಾವಿಲ್ಲವಂತೆ. ಅಂದರೆ ಪ್ರತಿಯೊಬ್ಬರಿಗೂ ಅವರವರ ಆತ್ಮಗಳು ಬೇರೆಬೇರೆಯೇ. ಆತ್ಮಗಳ ಕ್ರಿಯಾ ಚಟುವಟಿಕೆಗಳೂ ಬೇರೆಬೇರೆಯವೇ. ಹಾಗಿದ್ದೂ ಹುಟ್ಟಿದ ಬಹುಜನರು ಹಾಗೆ ಆಗಬೇಕು,ಹೀಗೆ ಆಗಬೇಕು ಎಂದು ತಮಗೇ ತಿಳಿತಿಳಿದಂತೆ ವಿಚಾರಮಾಡುತ್ತಾರೆ. ಆದರೆ ತಮ್ಮದೇ ಅಂತರಾತ್ಮದಂತೆ, ತಮ್ಮ ಮನದ ಇಚ್ಚೆಯಂತೆ, ಸ್ವತಂತ್ರ ಮನೋಭಾವನೆಯಿಂದ ಬದಕುವ ಇಚ್ಛಾಶಕ್ತಿಯನ್ನು ಯಾಕೋ ಬಹಳ ಜನ ಕಳೆದುಕೊಂಡುಬಿಟ್ಟಿದ್ದಾರೆ. ಅದು, ಅನುಕರಣೆ ಮೆಟ್ಟಲುಗಳಲ್ಲಿ ಹೋದರೆ ಸುಲಭವಾಗಿ ಜೀವನದ ಗುರಿ ಮುಟ್ಟುವ ಹುಸಿ ಭರವಸೆಗಳನ್ನು ನಂಬಿದವರುಗಳುನರುಗಳೇ ಅಧಿಕವಾಗಿದ್ದಾರೆ. ಪ್ರತಿಯೊಬ್ಬರ ಆತ್ಮ, ತಿಳುವಳಿಕೆ, ಸಾಧನೆ, ಗುರಿಗಳು ಬೇರೆಯವೇ ಆಗಿರುತ್ತವೆ. ಆದ್ದರಿಂದ ಎಲ್ಲಾ ಆತ್ಮಗಳೂ ವಯಕ್ತಿಕವಾಗಿ ಬದುಕಬೇಕು ಹಾಗೂ ತಮ್ಮತನಗಳ ಸಮಾಜಮುಖಿ ಸಾಧನೆಗಳನ್ನು ಮಾಡಬೇಕು. ಅಂತಹ ಸಾಧನೆಗಳೆಲ್ಲ, ಮುಂದೆಬರುವ ಮಾನವ ಪೀಳಿಗೆಗಳಿಗೆಲ್ಲ ಜೀವನದ ದಾರಿದೀಪವಾಗಬೇಕು. ನಾವು ನಮ್ಮ ತನಗಳನ್ನು, ಮಾನವ ಸಮಾಜಕ್ಕೆ ತಿಳಿಸಿ ಅಭಿವ್ರೃದ್ಧಿಗೆ ಸಹಕರಿಸುವದು  ಕರ್ತವ್ಯದ ಜೊತೆ ನೆಮ್ಮದಿಯೂ ಹೌದು.

Comments

Popular Posts