1.
ಏನಿರದ ಪಕೀರನಿಗೇನುಂಟು
ಕಳೆದುಕೊಳ್ಳುವ ಗಂಟು,
ಜಂಜಡದ ಜಂತುವಿಗೇ ಜಂಗು
ಹತ್ತುವದದು ಭರ್ಜರಿ ಭಂಗು!
- ಎಮ್ಮೆಚ್ಚೆ
ವಿಸ್ತೃತ
ಯಾವುದೇ ತರಹದ ಸ್ವಂತ ಸ್ವತ್ತು ಸಂಬಂಧಗಳಿಲ್ಲದ ರಾಗದ್ವೇಶಗಳನ್ನು ಅಳಿದ, ಪರಿತ್ಯಾಗಿ ಆದಂತಹ ವ್ಯಕ್ತಿ ಎಲ್ಲಿದ್ದರೇನು ಅವನದು ಒಂದೇ ತೆರನಾದ ಜೀವನವಾಗಿರುತ್ತದೆ. ಇಂದು ಇಲ್ಲಿ ನಾಳೆ ಎಲ್ಲೋ. ಇಂತಹ ವ್ಯಕ್ತಿಗೆ ಏನೊಂದೂ ತೊಂದರೆಯಾಗುವುದಿಲ್ಲ. ಏನೂ ಇಲ್ಲದಕ್ಕೇ ಸ್ಥಾನ ಪಲ್ಲಟ ಯಾವುದೇ ತೊಂದರೆ ಮಾಡುವದಿಲ್ಲ.
ಪರಿತ್ಯಾಗಿಗಳಂತೆ, ಸಂಸಾರಿಗಳಿಗೆ ನಡೆದುಕೊಳ್ಳುವುದು ಆಗುವದಿಲ್ಲ. ಸಂಸಾರಿ ಅನೇಕ ತರಹದ ಕೌಟುಂಬಿಕ ಸಮಸ್ಯೆಗಳಲ್ಲಿ ಸಿಲುಕಿಕೊಂಡಿರುತ್ತಾರೆ. ಈ ನಾನಾ ತರಹದ ಸಮಸ್ಯೆಗಳು ಅವನನ್ನು ಸ್ಥಾನ ಪಲ್ಲಟಗೊಳಿಸಲು ಬಿಡುವದಿಲ್ಲ. ಅವನು ಎಲ್ಲೇ ಹೋದರೂ ಅವನ ಮನಸ್ಸು ತನ್ನ ಜೀವನದತ್ತಲೆ ಜಗ್ಗುತ್ತಿರುತ್ತದೆ. ಇದರಿಂದಾಗಿ ಅವನು ಆಧ್ಯಾತ್ಮಿಕ ತಿಳುವಳಿಕೆಯಿಂದ ದೂರ ಸರಿಯುತ್ತಾ ಸ್ವಾರ್ಥದತ್ತಲೇ ಓಡುತ್ತಾ ಹೋಗುತ್ತಾನೆ. ಈ ಸ್ವಾರ್ಥತೆ ಹೆಚ್ಚಾಗುತ್ತ ಹೋಗಿ ಜನರು ಮೋಹ, ಭ್ರಷ್ಟಾಚಾರ, ಕಳ್ಳತನ ಇಂತಹ ಕೆಟ್ಟ ಕೆಲಸಗಳಲ್ಲಿ ಜನಗಳ ಸಹಾಯ ಮಾಡುತ್ತಾರೆ.
2.
ಒಮ್ಮತವೇ ಮೊದಲ ವೈರಿ
ತಾನೊಳ್ಳೆಯ ಕೆಲಸಕ್ಕೆ,
ಸಮ್ಮತವಲ್ಲ ಪರೀಕ್ಷಕ ತೊಂದರೆ
ನಿಜದ ಮೇಲನ ಸಂತಗೆ!
- ಎಮ್ಮೆಚ್ಚೆ
ವಿಸ್ತೃತ
ಒಮ್ಮೆಲೇ ಎಲ್ಲರಿಗೂ ಯಾವುದಾದರೂ ಸಮಾಜಮುಖಿ ಕಾರ್ಯಗಳನ್ನು ಚನ್ನಾಗಿಮಾಡುವ ಉಪಾಯಗಳು ಹೊಳೆಯುವದಿಲ್ಲ. ಒಂದೊಮ್ಮೆ ಯಾರಿಗಾದರೂ ಚನ್ನಾಗಿ ಸಾಧಿಸುವ ಒಳ್ಳೆಯ ಉಪಾಯ ತಿಳಿದಿದೆ ಎಂದರೆ ಎಲ್ಲರೂ ಅದನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದೇ ಇಲ್ಲ. ಹೊಳೆದ ವಿಚಾರವಿರಲಿ, ನೆರವೇರುವ ಉದ್ದೇಶವೂ ಇರಲಿ ಎಲ್ಲರೂ ಒಂದೇ ಮನಸ್ಕರಾಗಿ ಇರುವಂತಹದ್ದೇ ಸಾಧ್ಯವಾಗುವದಿಲ್ಲ ಎನ್ನುವಂತಹ ಮನಸ್ಥಿತಿಗೆ ಜನ ಬಂದವರಾಗಿದ್ದಾರೆ. ಒಂದಿಲ್ಲ ಒಂದು ತರಹದ ಇಲ್ಲ ಸಲ್ಲದ ನೆಪಗಳಿಂದ ವಿರೋಧ ವ್ಯಕ್ತಪಡಿಸುತ್ತಾರೆ. ಒಂಥೊಮ್ಮೆ ಅದೇ ಕೆಟ್ಟತನಗಳನ್ನು ಮಾಡುವದಿದ್ದಾಗ ತಾನೇ ಹೆಚ್ಚು, ತಾನೇ ಹೆಚ್ಚು ಎನ್ನುತ್ತ ಸಹಮತ ವ್ಯಕ್ತಪಡಿಸುತ್ತಾರೆ. ಕೆಟ್ಟತನಗಳಿಗೆ ಹೆಚ್ಚಿನ ಬೆಂಬಲ ಒದಗಿಸುವ ಮನಸ್ಥಿತಿಯುಳ್ಳವರಾಗಿರುತ್ತಾರೆ.
ಅನೇಕ ಜನ ಸಾದು, ಸಂತ, ಮುನಿ, ಭೈರಾಗಿ, ಧೂತಾವಧೂತರು ಮಾನವ ಸಮಾಜದ ಏಳಿಗೆಗಾಗಿ, ಪಾರಮಾರ್ಥ ಸಾಧನೆಯ ಸಿಧ್ಧಿಗಾಗಿ ಜಪ ತಪಗಳಲ್ಲಿ ಮುಳುಗಿದವರಾಗಿರುತ್ತಾರೆ. ಮಾನವ ಸಮಾಜದಿಂದ ದೂರವಿರುತ್ತ ತಮ್ಮಸಾಧನೆಯೊಂದಿಗೆ ವಿಕ್ಷಿಪ್ತ ರೀತಿಯ ವೇಷ ಭೂಷನ ಉಳ್ಳವರಾಗಿರುತ್ತಾರೆ. ಅತೀ ಶೀಘ್ರ ಕೋಪಿಷ್ಟರಾಗಿರುತ್ತಾರೆ. ಹಿಂದಿನ ಕಾಲದಲ್ಲಿ ಶಾಪ ಕೊಡುವಷ್ಟು ಶಕ್ತಿಯುಳ್ಳ ಸಾಧಕರಾಗಿದ್ದರಂತೆ. ಅದಕ್ಕೆ ಸಾಮಾನ್ಯ ಸಂಸಾರಿಕರಾದ ನಾವುಗಳು ಅವರಿಂದ ಅಂತರ ಕಾಯ್ಥುಕೊಂಡು, ಅವರಿಗೆ ಕೋಪಬರದ ರೀತಿಯಲ್ಲಿ ನೋಡಿಕೊಳ್ಳಬೇಕು. ಕೆಲ ಜನ ಕುಚೇಷ್ಟಿಗಳು ಅವರ ಪೂರ್ವಾಪರ ಕೆದಕುತ್ತ, ಅವರಿಗೆ ಆಗಿಬರದ ಮಾತುಗಳನ್ನಾಡುತ್ತ, ಹೀಯಾಳಿಸುತ್ತ ಮನನೋಯಿಸಿ ಅವರ ಕೋಪಕ್ಕೆ ಬಲಿಯಾಗುತ್ತಾರೆ. ಅವರು ತಮ್ಮತನಗಳನ್ನೇ ತ್ಯಜಿಸಿದ ಸತ್ಯದ ನೆಲೆಗಟ್ಟಿನಮೇಲೆ ಜೀವಿಸುವಂತವರಾಗಿರುತ್ತಾರೆ. ಆದ್ದರಿಂದ ನಾವುಗಳು ಅವರಿಗೆ ಏನಾದರೂ ಮೂಲ ಭೂತ ತುರ್ತು ಅವಶ್ಯಕತೆ ಪೂರೈಸುವದಿದ್ದರೆ ಪ್ರೀತಿಯಿಂದ ಪೂರೈಸಬೇಕು, ಇಲ್ಲವೆ ಅವರ ತಂಟೆಗೆ ಹೊಗದೇ ಇರಬೇಕು ಅದು ಶ್ರೇಷ್ಠವಾದುದು.
ಸಾದು, ಸನ್ಯಸಿಗಳಾಗಬೇಕೆಂದರೆ ಕೇವಲ ವೇಷದಾರಿ ಯಾಗುವದಲ್ಲ, ಅದಕ್ಕೇ ಅವರದೇ ಆದ ರೀತಿ ಪದ್ದತಿಗಳಿರುತ್ತವೆ. ಸಾಧನೆ ಬಹಳ ಕಷ್ಟಕರವಾದುದಾಗಿರುತ್ತದೆ. ಆದರೆ ಸಾಮಾನ್ಯರಿಗೆ ಏನೂ ಕೆಲಸಮಾಡದವರಾಗಿ ಕಾಣಿಸುತ್ತಾರೆ. ಅವರ ಸಾಧನೆಯ ಮಾರ್ಗಗಳು ಬೇರೆಯದ್ದೇ ಆಗಿರುತ್ತವೆ. ಆದ್ದರಿಂದ ಅವರ ತಂಟೆಗೆ ಹೋಗದೆದೂರ ಇರಬೇಕು.
3.
ಅವಘಡಕೆ ಮೂಲವದು ಅತ್ಯಾಸೆ
ಆಮಿಷಕೆ ಬೇಕಿಲ್ಲಾವುದೇ ಭಾಷೆ,
ಭಾಷೆಯ ನಿಯತ್ತು ಆಸೆಗಿಲ್ಲ
ತಿಂದುದು ಗೊತ್ತು ತಿಂದವಗೇ ಎಲ್ಲ!
. - ಎಮ್ಮೆಚ್ಚೆ
ವಿಸ್ತೃತ
ಅತಿಯಾಸೆ ಗತಿಗೇಡು ಎನ್ನುವಂತೆ ತನ್ನತನಕ್ಕೂ ಮಿಕ್ಕಿ ಪಡೆದುಕೊಳ್ಳುವ ಉಮೇದಿಗೆ ಬಿದ್ದಲ್ಲಿ ಇದ್ದುದನೆಲ್ಲವನ್ನೂ ಕಳೆದುಕೊಳ್ಳುವ ಪರೀಸ್ಥಿತಿ ಬರುತ್ತದೆ. ಇಂಥವುಗಳನ್ನು ಸಾಕಷ್ಟು ಉದಾಹರಣೆಗಳನ್ನು ದಿನಂಪ್ರತಿ ನೊಡುತ್ತೇವೆ. ಆದರೆ ಅವುಗಳಿಂದ ಜನರು ಪಾಠ ಕಲಿಯುತ್ತಿಲ್ಲ. ಪ್ರತಿಯೊಬ್ಬರಿಗೂ ಆಶೆಯ ಚಿಲುಮೆಗಳು ಉಕ್ಕುತ್ತಿರಬೇಕು. ಅಂದರೆ ಮಾತ್ರ ಜೀವನೊತ್ಸಾಹವಿರುತ್ತದೆ. ಆದರೆ ಅದು ಧನಾತ್ಮಕತೆಯದ್ದಾಗಿರಬೇಕು. ಈ ಸಂಸಾರಿಕ ಜೀವನಕ್ಕೆ ನಮ್ಮವುಗಳೇ ಆದ ಸ್ವಂತ ಸಕಾರಾತ್ಮಕ ಆಸೆಗಳಿರಬೇಕು ಅಂಥ ಆಸೆಗಳ ಈಡೇರಿಕೆ ಕೌಟುಂಬಿಕ ನೆಮ್ಮದಿಕಾಯುವಂತಹದ್ದು ಹಾಗೂ ಪರಪೀಡನದ್ದಲ್ಲದ್ದಾಗಿರಬೇಕು. ಒಟ್ಟಾರೆ ನಮ್ಮ ಯೋಗ್ಯತೆ ಮೀರಿಥುದಾದ ಆಸೆಗಳಾಗಿರಬಾರದು.
ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನುಆಸೆನಟ್ಟು ಒಪ್ಪಿಕೊಳ್ಳುವಂತೆ ಮಾಡುವಂತಹದ್ದುದಕ್ಕೆ ಯಾವುದೇ ತರಹದ ಬಾಷಾ ಪ್ರಬುದ್ಧತೆ ಹೊಂದುವ ಅವಶ್ಯಕತೆಯಿಲ್ಲ. ಯಾರನ್ನೇ ಆದರೂ ಪ್ರತಿಯೊಬ್ಬರೂ ಅವರವರ ಬಾಷೆ ಏನೊಂದೂ ಗೊತ್ತಿರದಿದ್ದರೂ ತಮ್ಮ ಆಮಿಷನದಿಂದ ಆಶಾಭರಿತರನ್ನಾಗಿಮಾಡಬಹುದು. ನಾನು ಈ ಭಾಷಿಕ ನೀನು ಆ ಭಾಷಿಕ ಅಂತ ನಾವುಗಳು ನಮ್ಮ ಭಾಷೆಗಳ ಬಗ್ಗೆ ಹೆಮ್ಮೆಪಡುತ್ತೇವೆ. ಯಾರಾದರೂ ಅನ್ಯಾಯ, ಅಪಮಾನಗಳನ್ನು ಮಾಡಲುಬಂದರೆ ಒಗ್ಗಟ್ಟಾಗಿ ಪ್ರಾಣಕೊಟ್ಟು ಹೊರಾಡುತ್ತೇವೆ. ಎಲ್ಲಿಲ್ಲದ ಅಭಿಮಾನ ಪಡುತ್ತೇವೆ. ಆದರೆ ನಮ್ಮಗಳ ಆಸೆ, ಮನೋಗತಗಳನ್ನು ಈಡೇರಿಸಿಕೊಳ್ಳಬೇಕೆಂದಾಗ ಯಾವ ಭಾಷೆ, ಪ್ರಾಂತಿಕನನ್ನೂ ತಿರಸ್ಕರಿಸುವದಿಲ್ಲ. ನಮ್ಮ ಭಾಷಿಕನಲ್ಲದ್ದಕ್ಕೆ ಬೇಡ ಅನ್ನುವಂತಹ ಮಡಿವಂತಿಕೆ ಆಸೆಗೆ ಇಲ್ಲ. ನಾವು ಪ್ರತಿದಿನ ಇಂಥವರು ಇಲ್ಲಿ ಬ್ರಷ್ಟಾಚಾರ ಎಸಗಿ ತಿಂದರು, ಅಲ್ಲಿ ಅವರು ಅಷ್ಟು ತಿಂದರು, ಇವರು ಜೈಲಿಗೆ ಹೋದರು, ಅವರು ಸಿಕ್ಕಿಬಿದ್ದರು ಅಂತ ಎಲ್ಲರೂ ತಮತಮಗೇ ಅನಿಸಿದಂತೆ ಖಾಲಿ ಸುಮ್ಮನೇ ಮಾತನಾಡುತ್ತಿರುತ್ತಾರೆ ಆದರೆ ಎಷ್ಷೆಷ್ಟು ,ಯಾವರೀತಿ, ಹೇಗೆಹೇಗೆ ತಿಂದೆ ಅನ್ನುವದು ತಿಂದವನಿಗೇ ಮಾತ್ರ ಚನ್ನಾಗಿ ತಿಳಿದಿರುತ್ತದೆ. ಬೇರೆಯವರಿಗೆ, ಕೇಳಿ ತಿಳಿದುಕೊಳ್ಳುವುದು ಮಾತ್ರ ಸಾಧ್ಯ.
Comments
Post a Comment
Liked the post? Don't forget to tell us, do comment.