1.
ನರನನಾ ನಂಬಿಕೆಯು
ಕೊಂಬು ತಾನಿದ್ದಂತೆ,
ಅಪನಂಬಿಕೆಯ ಅಧಮ
ಕರೆಯದವಗೂ ಕಳಸಗಿತ್ತಿಯಂತೆ!
- ಎಮ್ಮೆಚ್ಚೆ
ವಿಸ್ತೃತ
ನಂಬಿಕೆ, ಅಪನಂಬಿಕೆಗಳ ಅಂತರ ಬಹಳ ಸೂಕ್ಷ್ಮತೆಯನ್ನು ಪಡೆದುಕೊಂಡುದಾಗಿರುತ್ತದೆ. ನಂಬಿಕೆ ಎನ್ನುವದು ಅಳತೆಮಾಡುವದಲ್ಲ. ಇದು ಒಬ್ಬ ವ್ಯಕ್ತಿ ಇನ್ನೊಂದರ ಮೇಲೆ ಇಡುವ ಧನಾತ್ಮಕ ಮನಸಿನ ಭಾವನೆಯಾಗಿದೆ. ನಾವು ಎಷ್ಟೇ ಜನರನ್ನು ನಂಬಿಕೆಗೆ ಅರ್ಹರೆಂದು ಮನಪೂರ್ವಕವಾಗಿ ತಿಳಿದಿರುತ್ತೇವೆ. ಘಟನೆ ಘಟಿಸಿದ ನಂತರವೇ ನಾವು ಮೋಸಕ್ಕೆ ಒಳಗಾಗಿದ್ದೇವೆ ಎಂದು ತಿಳಿದುಕೊಳ್ಳುತ್ತೇವೆ. ಏಕೆಂದರೆ ವಂಚನೆ ಮಾಡಬೇಕೆನ್ನುವ ವ್ಯಕ್ತಿಗೆ ಯಾವ ರೀತಿ ಮನುಷ್ಯನ ಮನಸನ್ನು ಗೆದಿಯಬೇಕೆಂಬ ಕಲೆ ಕರಗತವಾಗಿರುತ್ತದೆ. ಕಾಗೆಯ ಬಾಯಲ್ಲಿಯ ರೊಟ್ಟಿ ಜಾರಿ ಬೀಳಿಸುವ ವಂಚಕ ನರಿಯಾಗಿ ಇರುತ್ತಾರೆ. ನಮಗೋ ನಂಬಿಕೆಯ ಜನ ಬೇಕೆಂದು ಹಪಹಪಿಸುತ್ತ ವಂಚಕರ ಬಲೆಗೆ ಬೀಳುತ್ತೇವೆ. ಇಂಥ ವಂಚಕರು ಮುಗ್ದ ಜನಗಳನ್ನು ತಮ್ಮ ಮುಖ್ಯ ಗುರಿಯಾಗಿಸಿಕೊಂಡಿರುತ್ತಾರೆ. ಮುಗ್ದರಿಗೆ ಒಳ್ಳೆಯವರು ನಂಬಿಕೆಯವರೆಂದು ಬಿಂಬಿಸುತ್ತಾ ಒಳಸೇರಿ ವಂಚನೆಯ ಕೆಲಸವನ್ನು ಹಂತ ಹಂತವಾಗಿ ಪ್ರಾರಂಭಿಸುತ್ತಾರೆ. ಇಂಥವರ ಬಗ್ಗೆ ಬಹಳ ಎಚ್ಚರದಿಂದಿರುವುದು ಬಹಳ ಮುಖ್ಯವಾಗಿರುತ್ತದೆ.
2.
ಕಡಿಮೆಯೆಂದರೆ ಕಮರೀತು ಮನ
ಹೆಚ್ಚೆಂದರೆ ಚಿಗತೀತು ತನ,
ಹೆಚ್ಚುಕಡಿಮೆಗಳ ಹುಚ್ಚುತನವೇಕೆ
ಒಂದೇ ಬಳ್ಳಿಯ ಹೂಗಳು ಜೊಕೆ!
- ಎಮ್ಮೆಚ್ಚೆ
ವಿಸ್ತೃತ
ಮಾನವ ಜೀವಿಗಳೆಲ್ಲ ಒಂದೇಯಾಗಿದ್ದು ಎಲ್ಲರ ಅಂಗ ರಚನೆ ಒಂದೇತೆರನಾಗಿರುತ್ತದೆ. ಎಲ್ಲರೂ ಒಂದೇ ಮೂಲದಿಂದ ಬಂದವರಾಗಿರುತ್ತಾರೆ ಆದರೂ ಸಹಿತ ನಾ ಹೆಚ್ಚು ತಾ ಹೆಚ್ಚು ಎನ್ನುವ ಬೇಧಭಾವ ಬೆಳೆಸಿಕೊಳ್ಳುತ್ತ ಹೋಗುತ್ತಾರೆ. ಈ ಮೇಲು ಕೀಳುಗಳ ರೋಗ ಹಿಂದಿನ ಕಾಲದಿಂದಲೂ ಒಂದಿಲ್ಲ ಒಂದು ರೀತಿಯಲ್ಲಿ ಬೆಳೆದುಬಂದಿದೆ. ಅದರಲ್ಲೂ ಇತ್ತಿತ್ತಲಾಗಿ ಆರ್ಥಿಕ ಸಬಲರು, ವಿಧ್ಯಾವಂತರುಗಳಲ್ಲಿಯೇ ಅತೀ ಹೆಚ್ಚಾಗಿ ಈ ರೋಗ ಬೆಳೆಯುತ್ತಿದ್ದುದು ಆತಂಕಕಾರಕ ವಿಚಾರವಾಗಿರುತ್ತದೆ. ಇದು ಎಲ್ಲಾ ರಾಜಕಾರಣಿಗಳಿಗೂ ಮಾನದಂಡವೇ ಆಗಿಬಿಟ್ಟಿದೆ. ಇವರುಗಳು ಒಡೆದು ಆಳುವ ನೀತಿಯ ಬ್ರಿಟೀಷ ಸಂಸ್ಕೃತಿಗಳ ವಕ್ತಾರರಾಗಿದ್ದಾರೆ. ಇಂಥವರೆಲ್ಲರುಗಳಿಗೆ ಬೇರೆಯವರ ಆತ್ಮ ಚೇತನಗಳನ್ನು ಅರಿತುಕೊಳ್ಳುವ ಮನಸ್ಥಿತಿ ಇರುವದಿಲ್ಲ. ಇಂಥಹ ಕ್ರೃತ್ಯಗಳಿಂದಾಗಿ ಅನೇಕ ಚೇತನಗಳು ಕಮರಿಹೊಗಿ ಒಟ್ಟಾರೆ ಸಮಾಜದ ಸರ್ವತೊಮುಖ ಅಭಿವ್ರೃದ್ಧಿಗೆ ಮಾರಕವಾಗುತ್ತದೆ. ಇಂಥ ಪರೀಸ್ಥಿತಿ ಅನುಭವಿಸಿಯೂ ಸಂವಿಧಾನ ಶಿಲ್ಪಿ ಅನ್ನಿಸಿಕೊಂಡ ಅಂಬೇಡಕರರವರನ್ನು ಮರೆಯುವದುಂಟೆ. ಆದ್ದರಿಂದ ಭೇಧಭಾವ ಮಾಡುವಕಿಂತ ಎಲ್ಲರ ಮಾನವ ಜೀವಾತ್ಮಕ್ಕೆ ಗೌರವ ಕೊಡುವ ಕ್ರಿಯೆ ಜರುಗಬೇಕಿದೆಎಲ್ಲಾ ರಂಗದಲ್ಲೂ ಎಲ್ಲರೂ ಸರಿ ಸಮಾನರು ಎಂದು ತಿಳಿದುಕೊಳ್ಳುವುದು ಅವಶ್ಯವಾಗಿರುತ್ತದೆ.
ಅದೇರೀತಿ ಇನ್ನೊಂದು ಸಮಾಜಿಕ ಪಿಡುಗಾದ ಲಿಂಗಭೇದ ಹೆಚ್ಚಾಗಿ ಸಮಾಜದಲ್ಲಿ ಬೆಳೆದುನಿಂತಿದೆ. ಹೆಣ್ಣು ಮಕ್ಕಳಿಗಿಂತ ಗಂಡುಮಕ್ಕಳೇ ಹೆಚ್ಚು, ಅವರೆ ಮನೆದೀಪ ಬೆಳಗುವವರು ಹೀಗೆ ಏನೇನೋ ಹುಚ್ಚು ಕಲ್ಪನೆಯುಳ್ಳವರಾಗಿರುತ್ತಾರೆ. ಆದರೆ ವೈದ್ಯಕೀಯದ ಪ್ರಕಾರವೂ ಚುರುಕುಮತಿಗಳಾದ ಹೆಣ್ಣುಮಕ್ಕಳ ಆತ್ಮಗಳನ್ನು ಗಣನೆಗೆ ತೆಗೆದುಕೊಳ್ಳದೆ ಅವಕಾಶ ವಂಚಿತರನ್ನಾಗಿಸಿಬಿಡುತ್ತಾರೆ. ಅದೇ ಗಂಡಾಗಿದ್ದರೆ, ಅವನು ಏನು ಮಾಡಿದರೂ ಸಹಿಸಿಕೊಂಡು ಎಲ್ಲಾ ಸ್ವಾತಂತ್ರ ಕೊಟ್ಟು ಅವನು ಹಾಳಾಗಿಹೊಗುವ ಹಾಗೆ ಮಾಡುತ್ತಾರೆ. ಆದ್ದರಿಂದ ಹೆಣ್ಣಿರಲಿ ಗಂಡಿರಲಿ ಎಲ್ಲರೂ ಮನುಷ್ಯ ಜೀವಿಗಳೇ ಎಂದು ಮೊದಲು ತಿಳಿದಿರಬೇಕು. ನಂತರ ಸಮಾನ ಅವಕಾಶ ಒದಗಿಸಿ ಕೊಡಬೇಕು.
3.
ಅಭಿಮಾನ ಅಳೆವ ಅಡ್ಡೆಯಲ್ಲ
ಆ ಆತ್ಮೀಯ ಮಿತ್ರತ್ವ,
ಅವಸಾನದ ಅಂತ್ಯದ ಕಂತೆಎಲ್ಲ
ಕಾಣುವ ಆರ್ಭಟದ ವೈರತ್ವ!
- ಎಮ್ಮೆಚ್ಚೆ
ವಿಸ್ತೃತ
ಫ್ರೆಂಡ್ ಇಸ್ ಸೆಕೆಂಡ್ ವೈಫ್ ಅನ್ನುವಂತೆ ಗೆಳೆತನದ ಸಂಬಂಧ ಅಷ್ಟು ಅನ್ಯೊನ್ಯವಾಗಿರುತ್ತದೆ. ಪರಸ್ಪರ ಇಬ್ಬರಲ್ಲಿ ಆತ್ಮೀಯ ಗೆಳೆತನ ಕೂಡಿತೆಂದರೆ ದೇಹ ಎರಡು, ಜೀವ ಒಂದೇ ಎನ್ನುವ ತರಹ ಇರುತ್ತಾರೆ. ಗೆಳೆತನದ ಆತ್ಮೀಯತೆಯಲ್ಲಿ ಹೆಚ್ಚುಕಡಿಮೆಯ ಪ್ರಶ್ನೆ ಬರುವದಿಲ್ಲ ಅಲ್ಲಿ ಕೇವಲ ನಿಷ್ಕಲ್ಮಶ ಸಮಾನತೆ ಮಾತ್ರ ಇರುತ್ತದೆ. ನಿಜವಾದ ಸ್ನೇಹಕ್ಕೆ ಜಾತಿ, ಲಿಂಗ, ಬಣ್ಣ, ಅಂತಸ್ತು ಯಾವುದೂ ಅಡೆತಡೆ ಬರುವದಿಲ್ಲ. ಒಂದೊಮ್ಮೆ ಯಾವುದೇ ಅಡೆತಡೆ ಬಂದರೆ ಅದು ಆತ್ಮೀಯತೆಯ ಸ್ನೇಹ ಆಗಲಾರದು.ಗೆಳೆತನದ ಆತ್ಮೀಯತೆಯನ್ನು ನಾವು ಮಹಾಭಾರತದ ಕ್ರೃಷ್ಣ, ಕುಚೇಲರ ಸ್ನೇಹದಲ್ಲಿ ಕಾಣಬಹುದಾಗಿರುತ್ತದೆ. ಇಲ್ಲಿ ಸಕಲ ಐಶ್ವರ್ಯ ಭೂಷಿತನಾದ ದೇವ ಶ್ರೀಕ್ರೃಷ್ಣ ಪರಮಾತ್ಮನೆಲ್ಲಿ, ಕಡುಬಡವ ಕುಚೇಲನೆಲ್ಲಿ. ಆದರೂ ಅವರ ಗೆಳೆತನ ನಿಷ್ಕಲ್ಮಶವಾದುದು. ತ್ಯಾಗಾಭಿಮಾನ ಗೆಳೆತನದ ಜೀವಂತಿಕೆಯ ಕೊಂಡಿಯಾಗಿರುತ್ತದೆಯೇ ವಿನಹ ಸ್ವಾಭಿಮಾನವಲ್ಲ. ಗೆಳೆತನದ ಬಗ್ಗೆ ಅಭಿಮಾನ ಇರಬೆಕೇ ಹೊರತು ಗೆಳೆತನದಲ್ಲಿ ಅಭಿಮಾನ ಪಡುವಂತಾಗಬಾರದು.
ಎಷ್ಟೊ ಜನರಿಗೆ ಎಲ್ಲರೊಂದಿಗೆ ಚನ್ನಾಗಿರಲು ಬರುವದಿಲ್ಲ. ತಮ್ಮ ಸ್ವಾರ್ಥಾಭಿಮಾನದಿಂದ ಕೇವಲ ಪರಿಚಯದ ಹಂತಕ್ಕೇ ಕಂದರಗಳುಂಟಾಗುವಂತೆ ನೊಡಿಕೊಳ್ಳುತ್ತಾರೆ. ಸಹನೆಯರಹಿತ ಮನಸ್ಸು ಮುಂದುವರೆಯುತ್ತ ಹೋಗಿ ವೈರತ್ವ ಕಟ್ಟಿಕೊಳ್ಳುತ್ತಾ ಹೊಗುತ್ತದೆ. ಕೆಲವರಂತೂ ಸಮಾಜಿಕ ಪ್ರಜ್ಞೆಇಲ್ಲದಂತೆ , ಯಾವ ಕಾನೂನುಗಳಿಗೂ ಗೌರವಕೊಡದೆ ಬೇಕಾಬಿಟ್ಟಿಯಾಗಿ ಕ್ರೌರ್ಯದಿಂದ ನಡೆದುಕೊಳ್ಳುವದನ್ನು ನೋಡಿದ್ದೇವೆ. ಅಂಥವರುಗಳು ಬಹಳ ಜನರ ಕೋಪಕ್ಕೆ ಒಳಗಾದವರಾಗಿರುತ್ತಾರೆ, ಮತ್ತು ಕಾನೂನುಗಳ ನಿರ್ಧಿಷ್ಠ ಅನುಷ್ಠಾನದಿಂದ ಶಿಕ್ಷೆ ಅನುಭವಿಸಬೇಕಾಗುತ್ತದೆ. ವಿನಾಕಾರಣ ತಮ್ಮ ಜೀವಕ್ಕೆ ಆಪತ್ತು ತಂದುಕೊಳ್ಳುವದಾಗಿರುತ್ತದೆ. ಆದ್ದರಿಂದ ಮನುಷ್ಯ ಸಮಾಜದಲ್ಲಿ ಬದಕುವ ನಾವುಗಳು ಮನುಷ್ಯರಂತೆ ಬದುಕುವದನ್ನು ಮೊದಲು ಕಲಿತುಕೊಳ್ಳಬೇಕು. ನೆಲದ ಕಾನೂನು ಗೌರವಿಸುತ್ತ ಎಲ್ಲರೊಂದಿಗೂ ಚನ್ನಾಗಿರುವದು ಬಹಳ ಮಹತ್ವದ್ದಾಗಿರುತ್ತದೆ.


Comments
Post a Comment
Liked the post? Don't forget to tell us, do comment.