1.
                                   

ನಾ ಬರೆವೆ ಮೌನ
ಅವಳು ಬರೆವಳು ಮೌನ
ಮೌನ ವಿರಹದ ಯಾನ
ಸಾಗಿ ನಡೆದಿದೆ ತಾನ

ತನ್ನದೆಲ್ಲ ಹೇಳಲು ಅವಳಿಗೆ ಹಿಂಜರಿಕೆ
ಎಲ್ಲ ಕೇಳಿ ತಿಳಿಯಲು ನನಗೂ ಬೇಸರಿಕೆ
ಮಾತು ಹೊಮ್ಮಬೇಕು ಮನದಾಳದಿಂದ
ಮೌನವೇ ಆವರಿಸಿದೆ ಅವಳ ಕಾರಣದಿಂದ

ಹಲವು ಬಾರಿ ನಾನೇ ಸೋತು ಮೌನಮುರಿದೆ
ಮಾತಾಡಿದೆ, ನಕ್ಕಿದೆ, ಅವಳನೂ ನಗಿಸಿದೆ
ಈ ಅಂತರ್ಮುಖಿಯ ಮನದಾಳದ
ಮುಚ್ಚಿಟ್ಟ ಭಾವನೆಗಳ ಅರಿತೆ

'ಮೌನಾ'ಲೀಸಾ ಆಗಿಹಳು ಮೌನ ಧರಿಸಿ
ರೇಗಿಸಿದರೆ ತಿರುಗುವಳು ಮೂಗು-ಮೂತಿ
ಮೌನಕೆ ಮಾತನು ಮೀರಿಸುವ ಬಲವಿದೆ
ಅದಕಾಗಿ ಈ ಸ್ನೇಹ ಮೌನವನೇ ನಂಬಿದೆ
                                                         -ವಿ.ಬಿ.ಜಿ

2.

ನೀ ಬಂದೆ ಕಣ್ಣ ಮುಂದೆ ಪುಟ್ಟ ಮಗುವಂತೆ
ನಿನ್ನ ನೋಟ ಚುಚ್ಚಿ ಹೋಯಿತು ಬಾಣದಂತೆ
ಆ ನಗು ಸೆರೆ ಹಿಡಿಯಿತು ಮನಸ್ಸನ್ನು ಗಾಳದಂತೆ
ನನ್ನ ನಲ್ಲೆ, ಎಲ್ಲಿ ಮಾಯವಾದೆ ನೀ ನನಗೆ ಕಾಣದಂತೆ!
                                                                   -ಮನುಜ

Comments

Popular Posts