1. ಹೃದಯದ ರಾಯಭಾರಿ


ಕಟ್ಟುವೆ ಹೊಂಗನಸೊಂದ
ಕದಿಯುವೆ ಹೂ ಮನಸೊಂದ
ಹೃದಯವು ಬಯಸಿದೆ ನಿನ್ನನು
ಮನಸಿದು ನೆನೆಸಿದೆ ನಿನ್ನನು
ಬಾ ಬಾರೆ ನಲ್ಲೆ ನೀನೊಂದು ಬಾರಿ
ನೀನೆ ಈ ಹೃದಯದ ಒಲವಿನ ರಾಯಭಾರಿ!
                                                                          -ಅರ್ಕ 

2. ಪದಗಳ ಪ್ರೇಮಿ


ತೋಚಿದ್ದು  ಗೀಚಿದೆ, ಓದಿದ್ದು ಗೀಚಿದೆ
ಕೇಳಿದ್ದು ಗೀಚಿದೆ, ಕೊನೆಗೆ ಕಂಡದ್ದೂ ಗೀಚಿದೆ,
ಗೀಚಿ-ಗೀಚಿ ಪದಗಳ ಪ್ರೇಮಿಯಾದೆ!  
ಇಷ್ಟವಿರುವ ಎಲ್ಲವನ್ನೂ ನಾ ಗೀಚುವುದಿಲ್ಲ
ನಾ ಗೀಚಿದ್ದೆಲ್ಲವೂ ನಿಮಗೆ ಇಷ್ಟವಾಗಬೇಕಿಲ್ಲ!
ಹೀಗೆ ಗೀಚುವುದು ಹುಚ್ಚು ನನಗೆ
ಮೆಚ್ಚುವುದು ಬಿಡುವದು ಬಿಟ್ಟಿರುವೆ ನಿಮಗೆ!
                                                                              -ಅರ್ಕ

ಪರಿಚಯ 



ಅರುಣ್ ಕುಮಾರ್, ಅವರು ತಮ್ಮ ಇಂಜಿನಿಯರಿಂಗ್ ವ್ಯಾಸಂಗವನ್ನು 2019ರಲ್ಲಿ ಮುಗಿಸಿದ್ದು ಈಗ ಒಂದು ವರ್ಷದಿಂದ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾವನೆಗಳನ್ನು ಪದಗಳಲ್ಲಿ ಬಿಂಬಿಸುವುದು ಇವರ ಹವ್ಯಾಸ. ಇವರು ಕವನಗಳನ್ನು, ಕಥೆಗಳನ್ನು ಮತ್ತು ಲೇಖನಗಳನ್ನು ಬರೆಯುತ್ತಾರೆ. ಜೀವನ, ಸ್ನೇಹ, ಪ್ರೀತಿ ಮತ್ತು ಸಂಬಂಧಗಳ ಬಗ್ಗೆ ಹೆಚ್ಚಾಗಿ ಬರೆಯಲು ಇವರಿಗೆ ಆಸಕ್ತಿ. ಇವರು ಅತ್ಯುನ್ನತ ಬರಹಗಾರರಾಗಿ ಹೊರಹೊಮ್ಮಲಿ ಎಂದು ಆಶಿಸುತ್ತಾ, ಈ ಹೊಸ ಪ್ರತಿಭೆಗೆ ನಿಮ್ಮೆಲ್ಲರ ಪ್ರೀತಿ ಮತ್ತು ಪ್ರೋತ್ಸಾಹದೊಂದಿಗೆ ಹಾರೈಸಲು ಎಲ್ಲಾ ಓದುಗರಲ್ಲೂ ವಿನಂತಿಸುತ್ತಿದ್ದೇನೆ. 

Comments

Popular Posts