1. 
 
ಬಂದುದೆಲ್ಲವ ಭಾಗ್ಯವೆಂದೆನದಿರು 
ಅದು ಬಾಳ ಬಹು ದೊಡ್ಡ ಪರೀಕ್ಷೆ,
ಕಳೆದುದು ಕೇವಲ ಕ್ಲೇಶವಲ್ಲವದು
ಜೀವ ರಕ್ಷಣೆಯ ದೊಡ್ಡ ನಿರೀಕ್ಷೆ!
                                                         - ಎಮ್ಮೆಚ್ಚೆ 

ವಿಸ್ತೃತ
ನಾವು ನಮ್ಮ ಭಾದ್ಯತೆಗಳನ್ನು ಅರ್ಥ ಮಾಡಿಕೊಳ್ಳದೆ ಮನಸ್ಸಿನ ಲೊಲುಪತೆಯಿಂದ ಅವಕಾಶ ಸಿಕ್ಕಲ್ಲೆಲ್ಲ, ಸಿಕ್ಕಿದೆಲ್ಲವನ್ನು ನನ್ನದೇ ಎನ್ನುವದನ್ನು ರೂಡಿಸಿಕೊಂಡಿದ್ದೇವೆ. ಇದು ಒಂದಲ್ಲ ಒಂದು ರೀತಿ ತೊಂದರೆಯೇ. ಅದರಂತೆ ಈ ಹಿಂದೆ, ಈಗಿರುವ ಒಳ್ಳೆಯ ಸ್ಥಾನಕ್ಕೆ ಬರಲು ಸಾಕಷ್ಟು ಅನ್ಯಾಯಗಳನ್ನು ಎದುರಿಸಿ ತೊಂದರೆ ಪಟ್ಟಿದ್ದೇವೆ. ಸಹನೆಯಿಂದ ಅನುಭವಿಸಿದ  ತೊಂದರೆಗಳು  ಅನುಭವಗಳಾಗಿ ಸುಂದರವಾದ ಬದುಕು ರೂಪಗೊಂಡಿದೆ. 

2.

ಪ್ರಸಿದ್ಧಗೊಂಡವರ  ಸುಂದರಗೊಳ್ಳುವ ರೂಪ 
ಪ್ರಸಿದ್ಧಿಗೆ ಬೆಳೆಯುವ ಬಣ್ಣದ ಸ್ವರೂಪ,
ನಿಶಿದ್ದರ ಬದುಕು ಬಹಳ ಕುರೂಪ
ನಿಶಿದ್ಧರುದ್ದೇಶವದೆ ಕಾಣುವದು ವಿರೂಪ!
                                                                         - ಎಮ್ಮೆಚ್ಚೆ 

ವಿಸ್ತೃತ
ಕೆಲವು ಜನ ಯಾವುದೂ ಒಂದು ಸಾಧನೆ ಮಾಡಿ ಪ್ರಸಿದ್ಧಿಗೆ ಬಂದೊಡನೆ ತಮ್ಮ ಸಾಧನೆ ಮೊಟಕುಗೊಳಿಸಿ ಸುಂದರವಾಗಿ ಕಾಣುವ ಗೀಳಿಗೆ ಬೀಳುತ್ತಾರೆ. ಇನ್ನು ಕೆಲ ಸಾಮಾಜಿಕ ಜೀವನದಿಂದ ದೂರವಿರುವ ಸಾದು, ಸಿದ್ದಿ, ಬೈರಾಗಿಗಳ ಜೀವನ ಬಹಳ ಕಷ್ಟದಾಯಕವಾಗಿರುತ್ತದೆ ಮತ್ತು ಅಂಥವರ ಉದ್ದೇಶಗಳು ಸಾಮಾಜಿಕ ಜೀವನದಿಂದ ದೂರ ಉಳಿಯುವ ಸಲುವಾಗಿಯೇ ಕೆಟ್ಟ ವೇಷಧಾರಿಯಾಗಿ ಕಾಣುವದು ಇರುತ್ತದೆ.

Comments

Popular Posts