1.

ಹುಟ್ಟಿದಾಗ ಮಲಗಿದ್ದ ತೊಟ್ಟಿಲು ಕಟ್ಟಿಗೆ 
ಬಾಲ್ಯದಲ್ಲಿ ಆಡಿದ ಆಟಿಕೆಯು ಕಟ್ಟಿಗೆ 
ಶಾಲೆಯಲ್ಲಿ ಪೆಟ್ಟು ತಿಂದ ಬೆತ್ತವೂ ಕಟ್ಟಿಗೆ 
ಸಾಹೇಬನಾಗಿ ಕೂತ ಕುರ್ಚಿಯೂ ಕಟ್ಟಿಗೆ 
ಕಟ್ಟಿದ ಹೊಸ ಮನೆಯಲ್ಲೂ ಇತ್ತು ಕಟ್ಟಿಗೆ 
ಕೊನೆಗೆ  ಹೊತ್ತು ಒಯ್ಯುವ ಚಟ್ಟವೂ ಅದೇ ಕಟ್ಟಿಗೆ!
                                                                                      - ಗಗನ್

ವಿಸ್ತೃತ 
ಹುಟ್ಟಿನಿಂದ ಸಾಯುವವರೆಗೂ ಕಟ್ಟೆಗೆಯೇ ನಮ್ಮ ಜೀವನ ಸಂಗಾತಿಯಾಗಿರುತ್ತದೆ. ನಮ್ಮೆಲ್ಲ ಕೆಲಸಗಳಿಗೂ ಅದರ ಮೇಲೆ ಅವಲಂಬಿತರಾಗಿದ್ದೇವೆ. ಆದ್ದರಿಂದ ಗಿಡಗಳನ್ನು ಬೆಳೆಸಿ ಪರಿಸರ ಉಳಿಸಿ ಅದರಿಂದ ಅಪಾರವಾದ ಲಾಭ ಪಡೆದುಕೊಳ್ಳುವದನ್ನು ಕಲಿಯಬೇಕು. 

2.

ಎಚ್ಚರಿರು ಸಮಯಗಳ್ಳರ ಬಗ್ಗೆ
ಸಮಯ ಕೊಲ್ಲುವ ಕಾಯಕ ಸೆಗ್ಗೆ?, 
ಬೇಕಿಹುದೇ ಮರಣಶೈಯ ಮನೋಧರ್ಮ 
ಅಭಿವೃದ್ಧಿ ಆಗದಿದ್ದುದು ನಿನ್ನ ಕರ್ಮ!
                                                                      - ಎಮ್ಮೆಚ್ಚೆ

ವಿಸ್ತೃತ 
ಎಲ್ಲದಕ್ಕಿಂತ ಮೊದಲು ನಾವು ಕ್ರಿಯಾಶೀಲ ಕೆಲಸಗಾರರಾಗಿರಬೇಕು. ಅಂದರೆ ಮಾತ್ರ ಸ್ವಂತ ಅಭಿವೃದ್ಧಿ ಸಾಧ್ಯ. ಬಹಳಷ್ಟು ಜನರು ಕೇವಲ ಬಾರದ ಹರಟೆ ಹೊಡಿಯುತ್ತ ಕಾಲ ಹರಣ ಮಾಡುತ್ತಾರೆ ಮತ್ತು ಏನೇನೋ ಧಾರ್ಮಿಕ ವೇದಾಂತ ಹೇಳುತ್ತಾ ಜೀವನೋತ್ಸಾಹ ಕುಂದಿಸುತ್ತಾರೆ. ಮನೋರಂಜನೆಯತ್ತ ಮನಸ್ಸು ಹೆಚ್ಚು ಆಕರ್ಷಿಸುವುದರಿಂದ ಅಂಥವರಿಂದ ದೂರವಿರಬೇಕು. ಇಲ್ಲದಿದ್ದರೆ ನಮ್ಮ ಆರ್ಥಿಕ ಮಟ್ಟ ಸುಧಾರಿಸುವುದಿಲ್ಲ. ಅದೂ ನಮ್ಮ ಸ್ವಂತಿಕೆಯಿಂದಾದ ಕ್ರಿಯೆ ಆಗಿರುತ್ತದೆ. 

Comments

Popular Posts