1.
ಬಂದವರೆಲ್ಲ ಬಂಧುಗಳೇ ಅಲ್ಲ
ಹೋದವರೆಲ್ಲ ಹೊರಗಿನವರೂ ಅಲ್ಲ,
ಬಂದುಹೋದವರೆಲ್ಲ ಸಹಚರರು ಬಾಳಲ್ಲಿ
ನಿನ್ನ ಮನವ ಬಂಧಿಯಾಗಿಸದಿರಲ್ಲಿ!
- ಎಮ್ಮೆಚ್ಚೆ
ವಿಸ್ತೃತ
ನಮ್ಮ ಜೀವನದಲ್ಲಿ ಕೇವಲ ಸಂಬಂಧಿಗಳಷ್ಟೇ ಅಲ್ಲ ಎಲ್ಲರನ್ನೂ ಆತ್ಮೀಯವಾಗಿ ಕಾಣಬೇಕು. ಇನ್ನು ಕೆಲವು ಸಂಬಂಧಿಗಳು ವಿನಾಕಾರಣ ತಮ್ಮ ಸ್ವಾರ್ಥತೆಯ ಮನಸಿನಿಂದ ಹೊರಗುಳಿಯುತ್ತಾರೆ. ಆದರೆ ಮನದ ಒಳಹೊರಗಿರುವಂತವರೆಲ್ಲರೂ ಸಮಕಾಲೀನರೆನ್ನುವದಂತು ಸತ್ಯ. ಆದರಿಂದ ಸಣ್ಣ ಪುಟ್ಟ ತಪ್ಪು ಮಾಡಿದವರನ್ನು ಕ್ಷಮಿಸಿ ಆತ್ಮೀಯರನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಬೇಕು.
2.
ಹರಿವ ನೀರಿಗೆ ಗೊತ್ತು ಸಾಗಿ ಹೋಗುವ ದಾರಿ
ಹಾರಿ ಸಾಗುವದದು ಅಡೆ ತಡೆ ಗೋಡೆ ತೂರಿ
ಮೆರೆವ ಕಾಮಿನಿಯ ನಿರಿಗೆ ಜಾರಿದ್ದಲ್ಲ ದುಬಾರಿ
ಅವಳದ್ದೊ ಕಣ್ಣಂಚಲ್ಲೇ ಏನೆಲ್ಲಾ ಸುಪಾರಿ!
- ಎಮ್ಮೆಚ್ಚೆ
ವಿಸ್ತೃತ
ಹರಿಯುವ ನೀರಿನ ಪ್ರವಾಹ ಎಷ್ಟು ಜೋರಾಗಿರುತ್ತದೆಂದರೆ ಅದರೆದುರಾಗಿ ಯಾವ ಅಡತಡೆಗಳು ನಿಲ್ಲುವುದಿಲ್ಲ. ಅದು ಎಲ್ಲವನ್ನೂ ಮೀರಿ ಸಾಗಿ ತನ್ನ ಗಮ್ಯ ತಲುಪುತ್ತದೆ. ಅದೇ ರೀತಿ ಕಾಮಿನಿಯರು ತಮ್ಮ ಕಣ್ಣ ಸನ್ನೆಯಲ್ಲೆ ಇತರರೊಂದಿಗೆ ವ್ಯವಹರಿಸಿ ದೈಹಿಕ ವಾಂಛೇ ತೀರಿಸಿಕೊಳ್ಳುತ್ತಾರೆ ಆದರೆ ಅಮೂಲ್ಯವಾದ ಗೌರವಕ್ಕೆ ಬೆಲೆ ಇಲ್ಲದಂತೆ ಮಾಡಿಕೊಳ್ಳುತ್ತಾಳೆ.


Comments
Post a Comment
Liked the post? Don't forget to tell us, do comment.