1. ಏಕಾಂಗಿ
ಅಂದು ನಿನ್ನ ನಗುವ ನೋಡಿ ನಾ ಮೈಮರೆತೆ
ಸದಾ ನಿನ್ನ ನೆನಪಿನಲೇ ಕುಳಿತೆ
ಮನದ ಮಾತನ್ನು ಹೇಳಲು ನಿನ್ನೆದುರಿಗೆ ನಿಂತೆ
ಒಂದೆ ಮಾತಲಿ ನಿರಾಕರಿಸಿ ಹೋದೆ ನೀ ಕಾಣದಂತೆ
ಆ ಕ್ಷಣದಿಂದ ಕಣ್ಣಲೇ ಮೋಡವಾದಂತೆ
ಕಂಬನಿ ಮಿಡಿಯಿತು ಧರೆಗೆ ಮಳೆ ಸುರಿದಂತೆ
ಮಳೆ ಸುರಿದು ಸುರಿದು ಗಟ್ಟಿಯಾದೆ ಕಲ್ಲು ಬಂಡೆಯಂತೆ
ನಾ,ಏಕಾಂಗಿಯಾಗಿ ಬದುಕಲು ಕಲಿತೆ ಸಮಯ ಸಾಗಿದಂತೆ
ಇಂದು ಈ ಅಂತೆ-ಕಂತೆಗಳ ನಡುವೆ ಮರೆತೆ ನಿನ್ನ ಚಿಂತೆ
ನಗುವದನ್ನು ಕಲಿತೆ, ಬದಕುವದನ್ನೂ ಕಲಿತೆ
ಯಾವುದೂ ಶಾಶ್ವತವಲ್ಲ ಎಂಬ ಸತ್ಯವನರಿತೆ
ನಡೆವೆ ಇನ್ನು ಬದುಕು ದಾರಿ ತೋರಿಸಿದಂತೆ
- ಅರ್ಕ
2. ಮೌನದ ಮಾತು
ಹತ್ತಿರವೇ ಇದ್ದರೂ ಹೇಳಲಂಜಿಕೆ
ದೂರದ ಕನಸು ಕಾಣಲಂಜಿಕೆ
ಹೇಳಿ ದೂರಾಗುವ ಅಂಜಿಕೆ
ಹೇಳದೇ ವಿಷಾದಿಸುವೆನೆಂಬ ಅಂಜಿಕೆ!
ನಿನ್ನೊಲುಮೆಗೆ ಇಲ್ಲವೇ ಬೇರೆ ದಾರಿ
ಹೇಳಲು ಪರದಾಡುತಿರುವೆ ಮೇರೆ ಮೀರಿ
ದಯವಿಟ್ಟು ಗಮನಿಸು ಈ ಮೌನದ ಮಾತು
ಕೊನೆವರೆಗೂ ನಾನಿರಲೆ ಮೌನದಲೆ ಸೋತು
ಸಮಯಕ್ಕೂ ಅವಸರವೆ, ಸಾಗದು ನಿಂತು!
- ವೀರು
ಪರಿಚಯ
ವೀರು ಪಾಟೀಲ್, ಇವರು 22 ವರ್ಷದ ಯುವ ಬರಹಗಾರರಾಗಿದ್ದು, ಪ್ರಸ್ತುತ ತಮ್ಮ ಇಂಜಿನಿಯರಿಂಗ್ ವ್ಯಾಸಂಗವನ್ನು ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ ಮಾಡುತ್ತಿದ್ದಾರೆ. ಇವರು ಮುಂಬರುವ ದಿನಗಳಲ್ಲಿ ಬರವಣಿಗೆಯನ್ನೇ ತಮ್ಮ ವೃತ್ತಿಯಾಗಿಸಲು ಇಚ್ಛಿಸುತ್ತಾರೆ. ವೀರು ಅವರು ಪ್ರಕೃತಿ, ಜೀವನ ಕಥೆ, ಸ್ಫೂರ್ತಿದಾಯಕ ಲೇಖನಗಳು, ಕವಿತೆಗಳು ಮತ್ತು ಕಾದಂಬರಿಗಳನ್ನು ಬರೆಯುತ್ತಾರೆ. ಇವರು ಅತ್ಯುನ್ನತ ಬರಹಗಾರರಾಗಿ ಹೊರಹೊಮ್ಮಲಿ ಎಂದು ಆಶಿಸುತ್ತಾ, ಈ ಹೊಸ ಪ್ರತಿಭೆಗೆ ನಿಮ್ಮೆಲ್ಲರ ಪ್ರೀತಿ ಮತ್ತು ಪ್ರೋತ್ಸಾಹದೊಂದಿಗೆ ಹಾರೈಸಲು ಎಲ್ಲಾ ಓದುಗರಲ್ಲೂ ವಿನಂತಿ.

Thank you😍
ReplyDelete🤩 Keep up the good work!
Delete