1.
ಯಾರಿಗ್ಯಾಕಿರಬೇಕು ಎಲ್ಲ ಬಲ್ಲುವ ರೋಗ
ಎಲ್ಲರೊಳು ಚೆನ್ನಾಗಿದ್ದರೆ ಅದೇ ಶುಭಯೋಗ,
ಬಲ್ಲವನೆಂಬ ಮಹಾರೋಗ ನೀಗಿ ನಡೆ
ಇರದಿರೆ ಐಟಿ, ಇಡಿಗಳ ನಡೆ ನಿಮ್ಮ ಕಡೆ!
- ಎಮ್ಮೆಚ್ಚೆ
ವಿಸ್ತೃತ
ಹೆಚ್ಚು ವಿಷಯಗಳನ್ನು ತಿಳಿದುಕೊಂಡವರೇ ಮೇಧಾವಿಗಳೆಂದು ತಪ್ಪಾಗಿ ತಿಳಿದಿದ್ದೇವೆನೋ ಎಂದು ಕೆಲವೊಮ್ಮೆ ಅನಿಸುತ್ತದೆ. ಕೆಲವು ಮೇಧಾವಿಗಳು ಎಲ್ಲರೊಂದಿಗೆ ಸಹಕಾರದಿಂದ ಬಾಳಲು ಕಿರಿ ಕಿರಿ ಪಟ್ಟುಕೊಳ್ಳುತ್ತಾರೆ. ಇನ್ನು ಕೆಲವು ಜನರು ಅಕ್ರಮವಾಗಿ ಹಣ ಗಳಿಸುತ್ತಾ ತಾವೂ ಮೇಧಾವಿಗಳಂತೆ ಪೋಸು ಕೊಡುತ್ತಾ ಜೀವನವನ್ನೇ ಗೆದ್ದವರಂತೆ ಮೆರೆದಾಡುತ್ತಾರೆ. ಆದರೆ ಸಂಬಂಧಪಟ್ಟ ಸರಕಾರಿ ಆಡಳಿತಗಳೆಲ್ಲ ನಮ್ಮೆಲ್ಲ ಚಲನವಲನದ ಮೇಲೆ ಕಣ್ಣಿಟ್ಟಿರುವುದನ್ನು ಗಮನಿಸಿರುವುದೇ ಇಲ್ಲ.
2.
ಮುಟ್ಟದೆ ಮೂಡಬಹುದು ಪ್ರೀತಿ
ಅರಿಯದೆ ತಿಳಿಯಲಾರದು ರೀತಿ ,
ಪ್ರೀತಿ ರೀತಿಯ ತೊರೆದರದೆ ಭೀತಿ
ರೀತಿಯ ಪ್ರೀತಿಯೇ ಬಾಳಿನ ನೀತಿ!
- ಎಮ್ಮೆಚ್ಚೆ
ವಿಸ್ತೃತ
ಪ್ರಾಮಾಣಿಕ ಪ್ರೀತಿ ಮಾನಸಿಕವಾಗಿರುತ್ತದೆ ಹೊರತು ದೈಹಿಕವಾಗಿ ಅಲ್ಲ. ಇದನ್ನು ಸರಿಯಾಗಿ ತಿಳಿಯಬೇಕು. ಇಲ್ಲದಿದ್ದರೆ ಭೀತಿ ಉಂಟಾಗುವುದೇ ಹೊರತು ಪ್ರೀತಿಯಲ್ಲ. ಪ್ರತಿಯೊಂದನ್ನೂ ಪ್ರೀತಿಸುವುದು ಜೀವನದಲ್ಲಿ ಬಹು ಮುಖ್ಯವಾದುದು. ಆದರೆ ಅದು ಸರಿಯಾದ ಮಾರ್ಗದಲ್ಲಿದ್ದರೆ ಚಂದ.


Comments
Post a Comment
Liked the post? Don't forget to tell us, do comment.