ಆಯ್ಕೆ


ಯಾಕೆ ತೇಕುವಿರಿ ಸುಮ್ಮನೆ
ಪ್ರತಿಭೆಗಿಲ್ಲ ಇಲ್ಲಿ ಮರ್ಯಾದೆ!

ಆಸಕ್ತನಿಗೆ ಚನ್ನಾಗಿ ಆಡುವ ಭಾವನೆ
ಸುತ್ತು ಮುಗಿದೊಡೆ ದಣಿದು ಮಲಗುವ ಸುಮ್ಮನೆ
ಇವಗಿಲ್ಲ ಯಾವುದೇ ತರಹದ ಚಿಂತೆ
ಬೇಕೇಬೇಕು ನೋಟಿನ ಕಂತೆ!

ಮೂರ್ಖನಿಗೆ  ಹೇಗೂ ಆಯ್ಕೆಯಾಗೂ ಉಮೇಯ
ರಾತ್ರಿಯ ವಿಶ್ರಾಂತಿ ಮಂಗಳ ಸಮಯ
ಭೇಟಿ ಮಾಡುವರು ಆಯ್ಕೆಗಾರರ ತಂಡ
ಕೊಡಿಸುವರು ಬೀರು ಬಾಟಲ್, ಮಾಂಸದ ತುಂಡ!

ಯಾವ ಚಟವಿಲ್ಲ ಪ್ರಮೂಖನಿಗೆ
ಆದರೂ ಆಗುವದಿಲ್ಲ ಆಯ್ಕೆ ಸರಿಯಾಗಿ
ಇವರಿಗೆ ಬೇಕು ದೊಡ್ಡ ವ್ಯಕ್ತಿಗಳ ಚೀಟಿ
ಇಲ್ಲ ಕೊಡಬೇಕು ನೋಟು  ಆ ಪ್ರದೇಶದಾಟಿ!

ಒಳ್ಳೆ ಆಟಗಾರನನ್ನು ತೆಗೆಯುವರು ಮೊದಲ ಸುತ್ತಿಗೆ
ಸುಮ್ಮನೇ ಹೋದರೆ ಚನ್ನಾಗಿ ಆಡಲಿಲ್ಲವೆನ್ನುವ ತಳಮಳ
ಯಾಕೆಂದು ಕೇಳಿದೆಯೋ ಅದೇ ನಿನ್ನ ಅತೀ ಕೆಟ್ಟ ನಡತೆ
ಇದೇ ಈಗ ಆಯ್ಕೆ ಸಮಿತಿಯ ಪ್ರಕ್ರಿಯತೆ!
                                                                                     - ಎಮ್ಮೆಚ್ಚೆ 

Comments

Popular Posts