1.
ಧನವಂತ ಸಿರಿವಂತ ಬಾಹ್ಯದಲಿ ಬೆಳೆದವನು
ಮನ ಗುಣವಂತ ಅಂತರಂಗದಲರಳಿದವನು
ಹರಿದಷ್ಟು ಕಣ್ಣು ತಿಳಿದಷ್ಟು ತಲೆ ಸವಿಸಿದ್ದು ಕಾಲು
ಎಲ್ಲ ಮೀರಿ ಸಾಗುವುದೇ ಸೃಷ್ಟಿಯ ಸವಾಲು!
- ಎಮ್ಮೆಚ್ಚೆ
ವಿಸ್ರೃತ
ಮನುಷ್ಯರು ತಮ್ಮ ತಿಳುವಳಿಕೆ ಹಾಗೂ ಜ್ಞಾನದ ಬಲದಿಂದ ಮೇಲಾಗಿ ಸಿಕ್ಕ ಸಿಕ್ಕ ಅವಕಾಶಗಳಿಂದ ಏನೆಲ್ಲವನ್ನೂ ಸಾಧಿಸುತ್ತ, ಗಳಿಸುತ್ತ ಹೋಗುತ್ತಾರೆ. ಅವರು ಆರ್ಥಿಕ ಅನುಕೂಲತೆಗಳಿಂದ ಎಷ್ಟೇ ಎತ್ತರಕ್ಕೆ ಬೆಳೆಯಲೂಬಹುದು ಆದರೆ ಅದು ಕೆವಲ ದೈಹಿಕತೆ ಹಾಗೂ ಬಾಹ್ಯಕತೆಗೆ ಸಂಬಂಧಪಟ್ಟುದಾಗಿರುತ್ತದೆಯೇ ಹೊರತು ಆಂತರಿಕವಾದ ಮನಸ್ಸಿನ ಒಳಿತಿಗೆ ಸಂಬಂಧಪಟ್ಟುದಲ್ಲ. ಬಾಹ್ಯ ಡಂಬಾಚಾರಗಳನ್ನು ಬಿಟ್ಟು ಒಳ್ಳೆಯ ಗುಣ ನಡತೆಗಳನ್ನು ಅಂತರಂಗದಲಳವಡಿಸಿಕೊಂಡು ಬದುಕಬೇಕು. ಒಳ್ಳೆಯತನಗಳು ಆಂತರಿಕವಾಗಿ ಅರಳಬೇಕು. ಇದರರ್ಥ ಬಾಹ್ಯವಾಗಿ ಬೆಳೆದವರು ಕೆಟ್ಟವರಂತಲ್ಲ. ಎಲ್ಲರೂ ಆಂತರಿಕವಾಗಿ, ಹ್ರೃದಯವಂತರಾಗಿದ್ದರೆ ಗಳಿಸಿದ ಬಾಹ್ಯತೆಗೂ ಮೆರುಗು ಬರುತ್ತದೆ.
ಸ್ರೃಷ್ಠಿಯನ್ನುವದು ಬಲು ಅಘಾದವಾದುದು.ನಾವು ಏನನ್ನು ನೋಡಲು ಇಚ್ಛಿಸುತ್ತೇವೆಯೋ ಅದಕ್ಕೂಮಿಕ್ಕಿ, ಏನೇನನ್ನು ತಿಳಿಯಲಿಚ್ಛಿಸುತ್ತೇವೆಯೋ ಅದಕ್ಕೂ ಮೀರಿದ್ದ ಏನೆಲ್ಲವೂ ಇಲ್ಲಿ ಅಡಕವಾಗಿದೆ. ಸ್ರೃಷ್ಠಿಯ ಕೌತಕವನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಯಾರಿಗೂ ಸಾಧ್ಯವಾಗಿಲ್ಲ. ಈ ಜಗತ್ತು ತಿಳಿಯಲು ಕೇವಲ ಎರಡೇ ಸರಳ ಮಾರ್ಗಗಳು. ಒಂದು ಜ್ಞಾನಸಂಪಾದನೆಯಿಂದ ಇನ್ನೊಂದು ಸಂಚರಿಸುತ್ತ ಅನುಭವಗಳನ್ನು ಪಡೆದುಕೊಳ್ಳುವುದು. ಅದಕ್ಕೇ ದೇಶ ತಿರುಗು, ಇಲ್ಲ ಕೋಶ ಓದು ಎಂದು ಹಿರಿಯರು ಹೇಳಿದ್ದಾರೆ. ಆದರೆ ನಾವುಗಳು ಎಷ್ಟೇ ಅನುಭವಗಳಿಸಿದರೂ, ಜ್ಞಾನಗಳಿಸಿದರೂ ಸಹ ಅದು ಅಂತ್ಯಗೊಳ್ಳಲಾರದ್ದಾಗಿರುತ್ತದೆ. ಮೊಗೆದಷ್ಟೂ ಮುಗಿಯಲಾರದ ಅನಂತವೂ ಆಗಿರುತ್ತದೆ. ಅದೇ ಸ್ರೃಷ್ಠಿಯ ಹಿರಿಮೆಯೂ ಆಗಿರುತ್ತದೆ.
2.
ಮಣ್ಣಲ್ಲಿ ಮಣ್ಣಾಗಿಹೋದವು
ಮನೆ ಕಟ್ಟಲು ಬಳಸುವ ಮಣ್ಣಿನ ಹೆಂಡಿ,
ಹಾಳಾಗಿ ಹತವಾಗಿ ಹೋದವು ಹಗೇವು
ಅವು ದವಸಧಾನ್ಯಗಳ ಸಂಗ್ರಹದ ಗುಂಡಿ!
- ಎಮ್ಮೆಚ್ಚೆ
ವಿಸ್ತೃತ
ಈಗ ಎಲ್ಲಿ ನೋಡಿದರಲ್ಲಿ ಗಗನ ಚುಂಬಿ ಕಟ್ಟಡಗಳೇ ಇವೆ.ಮಾನವ ವಸತಿ ಪ್ರದೇಶಗಳೆಲ್ಲ ಬರೀ ಕಾಂಕ್ರೆಟ್ ಮಯವಾಗಿಬಿಟ್ಟಿದೆ. ಮನೆಗಳು ನೋಡಲು ಇಂದ್ರನ ಅರಮನೆಯನ್ನೇ ನಾಚಿಸುವಷ್ಟು ಸುಂದರವಾಗಿವೆ. ಆದರೆ ಅದರಲ್ಲಿ ವಾಸಿಸುವ ಜನಗಳಿಗೆ ಮಾನಸಿಕ ನೆಮ್ಮದಿಯಿಲ್ಲ. ನಾವು ಆಧುನಿಕತೆಯ ನೆಪದಲ್ಲಿ ಅವಘಡಗಳನ್ನು ಉಂಟುಮಾಡುತ್ತಿದ್ದೇವೆ. ಸ್ವಚ್ಛತೆಯ ನೆಪದಲ್ಲಿ ಮಣ್ಣನ್ನೇ ಮರೆತಿದ್ದೇವೆ.
ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು, ಮನೆಗಳನ್ನು ಕಟ್ಟಲು ಮಣ್ಣಿನಿಂದ ಇಟ್ಟಿಗೆಗಳನ್ನು ತಯಾರಿಸಿ ಬಿಸಿಲಿಗೆ ಒಣಗಿಸಿ ಅವುಗಳಿಂದಲೇ ಮನೆ ನಿರ್ಮಿಸಿಕೊಳ್ಳುತ್ತಿದ್ದರು. ಆ ರೀತಿ ತಯಾರಿಸಿದ ಮನೆಗಳು ಚಳಿಗಾಲದಲ್ಲಿ ಬೆಚ್ಚಗೆ ಮತ್ತು ಬೇಸಿಗೆಯಲ್ಲಿ ಬಹಳ ತಂಪಾಗಿ ವಾಸಿಸಲು ಅನುಕೂಲದಾಯಕ ಮತ್ತು ಆರೋಗ್ಯದಾಯಕ ವಾಗಿತ್ತು. ಅದಕ್ಕನುಗುಣವಾಗಿ ಹಿಂದಿನ ಕಾಲದ ಜನರು ಧೀರ್ಘಾಯುಶಿಗಳಾಗಿರುತ್ತಿದ್ದರು. ಯಾವುದೇ ತರಹದ ರೋಗ ಕಾಯಿಲೆ ಕಸಾಯೀಗಳನ್ನು ಎದುರಿಸುವ ನಿರೋಧಕ ಶಕ್ತಿಯನ್ನೂ ಪಡೆದುಕೊಂಡಿದ್ದರು ಹಾಗೂ ನೆಮ್ಮದಿಯಾಗಿದ್ದರು.ಈಗ ಕ್ರೃತಕ ಸೌಲಭ್ಯಗಳನೆಲ್ಲ ಅನುಭವಿಸಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಂಡು ಚಿಕ್ಕ ಪುಟ್ಟ ರೋಗಗಳನ್ನೂ ತಡೆದುಕೊಳ್ಳಲಾರದಷ್ಟು ದುರ್ಭಲರಾಗಿದ್ದೇವೆ.
ಇನ್ನು, ಹಿಂದಿನ ಕಾಲದಲ್ಲಿ ಈಗಿನಂತೆ ದವಸ ಧಾನ್ಯಗಳನ್ನು ಸಂಗ್ರಹಿಸಲು ಶೀತಲೀಕರಣದಂತಹ ವೆಚ್ಚದಾಯಕ,ಕ್ರಿಮಿನಾಷಕ ಬಳಕೆಯುಂತಹ ವ್ಯವಸ್ತೆಗಳಿರಲಿಲ್ಲ. ಬದಲಾಗಿ ಎಲ್ಲರೂ ಸಾಮಾನ್ಯವಾಗಿ ತಮ್ಮ ಮನೆಯಮುಂದೆ ಹಾಗೂ ಹಿತ್ತಲು ಜಾಗಗಳಲ್ಲಿ ಮತ್ತು ಕೆಲ ಪ್ರದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ( ಸ್ಥಳೀಯ ಸರಕಾರಕ್ಕೆ ಭೂಕಂದಾಯ ಕಟ್ಟಿ ) ಆಳವಾದ ಗುಂಡಿತೆಗೆದು ಅದರಲ್ಲಿ ಧವಸಧಾನ್ಯಗಳನ್ನು ಯಾವುದೇ ಕ್ರಿಮಿನಾಷಕ ಬಳಸದೆ ಸಂಗ್ರಹಿಸುತ್ತಿದ್ದರು. ಆ ಗುಂಡಿಗಳು ಕೆಲವು ದೊಡ್ಡವು, ಕೆಲವು ಚಿಕ್ಕವು ಆಗಿರುತ್ತಿದ್ದವು. ಅವುಗಳ ನಿರ್ಮಾಣಕ್ಕೆ ಯಾವದೇ ಪರಿಕರಗಳನ್ನೂ ಉಪಯೋಗಿಸುತ್ತಿದ್ದಿಲ್ಲ. ಕೇವಲ ಗಟ್ಪಿ ನೆಲದಲ್ಲಿಯೇ ಸುರಂಗ ಕೊರೆದು ನಿರ್ಮಿಸಿ ಅದರ ಚಿಕ್ಕದಾದ ಬಾಯಿಯನ್ನು ಚಪ್ಪಟೆ ಕಲ್ಲಿನಿಂದ ಮುಚ್ಚುತ್ತಿದ್ದರು. ಅದರಲ್ಲಿ ಹಾಕಿದ ಧಾನ್ಯಗಳು ಹಲವು ವರ್ಷಗಳವರೆಗೂ ಕೆಡದೆ ಸುಸ್ಥಿತಿಯಲ್ಲಿ ಉಪಯೋಗಕ್ಕೆ ಯೋಗ್ಯವಾಗಿರುತ್ತಿದ್ದವು.
ಈಗ ಸ್ವಲ್ಪ ಕೆಲಸದಾಯಕವಾದಂತಹ ಧಾನ್ಯ ಸಂಗ್ರಹ ಗುಂಡಿ ಅಂದರೆ ಹಗೆಗಳನ್ನು ಉಪಯೊಗಿಸದ್ದರಿಂದ ಹಾಳಾಗಿ ಹೊಗುತ್ತಿವೆ, ಕೆಲಜನರು ಅವುಗಳನ್ನು ಈಗಲೂ ಉಪಯೋಗಿಸುತ್ತಾರೆ. ಆದರೆ ಎಲ್ಲರಲ್ಲೂ ಧಾನ್ಯ ಸಂಗ್ರಹ ಬಯಕೆಗಳು ನಶಿಸಿಹೋಗಿವೆ. ಎಲ್ಲರೂ ಒಕ್ಕಲುತನವನ್ನು ದೈವಿಕತೆಯಿಂದ ನೋಡದೆ ಕೇವಲ ವ್ಯವಹಾರಿಕ ಚಿಂತಕರಾಗಿದ್ದಕ್ಕೆ ರಾಶಿ ಯಾದೊಡನೆ ಧಾನ್ಯಗಳನ್ನು ನೇರವಾಗಿ ಮಾರಾಟ ಮಳಿಗೆಗಳಿಗೇ ಕಳಿಸಿಬಿಡುತ್ತಾರೆ. ಇಂಥಹ ಮನಸ್ಥಿತಿ ಬಹಳ ಅಪಾಯಕರವಾದುದು ಯೇಕೆಂದರೆ ಒಂದೊಮ್ಮೆ ಅಂಥಹ ಘಂಡಾಂತರದ ಸ್ಥಿತಿಯೊದಗಿದರೆ ಬಹಳ ತೊಂದರೆ ಪಡೆದುಕೊಳ್ಳಬೇಕಾಗುತ್ತದೆ. ಆದುದುರಿಂದ ಈಗಲೇ ಎಲ್ಲರೂ ಎಚ್ಚತ್ತುಕೊಂಡು ಧಾನ್ಯಸಂಗ್ರಹದತ್ತ ಗಮನಕೊಡುವದರೊಂದಿಗೆ ಕಡಿಮೆ ಖರ್ಚಿನ ಹಗೆಗಳನ್ನು ಚನ್ನಾಗಿಟ್ಟುಕೊಳ್ಳೋಣ, ದಲ್ಲಾಳಿಗಳಿಂದಲೂ ಬಚಾವಾಗೋಣ.
Comments
Post a Comment
Liked the post? Don't forget to tell us, do comment.