1.
ಬದುಕುವದೊಂದು ಕಲೆಯದು
ಬೇಕು ಬೇಡಗಳನರ್ಥೈಸಿ,
ನೆಲೆಯಲ್ಲವದು ಜೀವನಕೆ
ಕಡುಸುಖಕೆ ಹೋಗುವದರಸಿ!
- ಎಮ್ಮೆಚ್ಚೆ
ವಿಸ್ತೃತ
ಹುಟ್ಟಿಸಿದ ದೇವ ಹುಲ್ಲುಮೇಯಿಸಲಾರ ಎಂಬ ಹುಸಿ ಭರವಸೆಯಲ್ಲಿ ಎಷ್ಟೊ ಜನ ತಮ್ಮ ಜೀವನ ಸಾಗಿಸುವದನ್ನು ನಾವು ನೋಡಿರುತ್ತೇವೆ. ಅಂಥವರು ಸಾಮಾನ್ಯವಾಗಿ,ಜೀವನ ಸುಧಾರಣೆಗಳ ಭರವಸೆಯನ್ನೇ ಕಳೆದುಕೊಂಡವರಾಗಿರುತ್ತಾರೆ. ಯಶಸ್ವಿ ಜೀವನವೆಂದರೆ ಜೀವಿಸಲು ಯಾವುದೇ ಅಡೆತಡೆಗಳಾಗದಂತೆ ಬದಕುವುದೇ ಆಗಿರುತ್ತದೆ. ಜನರು ಒಂದಿಲ್ಲ ಒಂದು ಜಂಜಾಟಗಳಲ್ಲಿ ಬದಕುತ್ತಿರುತ್ತಾರೆ, ಇದು ಜೀವಿಸಲು ಅವರು ತೆಗೆದುಕೊಂಡಿರುವ ತಪ್ಪು ನಿರ್ಧಾರಗಳೇ ಆಗಿರುತ್ತವೆ. ತಾನು ಜೀವಿಸುವ ಸಮಾಜದಲ್ಲಿ ಎಲ್ಲರ ಜೊತೆ ಅನ್ಯೊನ್ಯತೆಯಿಂದ, ಪರಸ್ಪರ ಚನ್ನಾಗಿ ಬದುಕುವದು ಶ್ರೇಷ್ಠ. ಇದು ತಿಳುವಳಿಕೆಯುಳ್ಳವರು, ಅನುಭವಸ್ತರಿಗೆ ಮಾತ್ರ ಸಾಧ್ಯ.ಎಷ್ಟೋಜನರು ನೆರೆಯವರ ಜೊತೆ ಹೋಗಲಿ ತಮ್ಮ ಮನೆಯವರ ಜೊತಗೇ ಚನ್ನಾಗಿರಲು ಕಷ್ಟಪಡುತ್ತಾರೆ. ಇದು ಅಜ್ಞಾನದ ಫಲವಲ್ಲದೆ ಮತ್ತೇನು.ಜೀವನದಲ್ಲಿ ಏನು ಮಾಡಬೇಕು ಎನ್ನುವದಕ್ಕಿಂತ ಏನು ಮಾಡಬಾರದು ಎನ್ನುತದು ಬಹಳ ಮಹತ್ವದ್ದಾಗಿರುತ್ತದೆ.
ಕೇವಲ ದೈಹಿಕ ಸುಖಕ್ಕೆ ಬೆನ್ನುಹತ್ತಿ,ತಮ್ಮ ಆಸ್ತಿ,ಅಂತಸ್ತು,ಗೌರವಗಳನ್ನು ಅಷ್ಟೇ ಅಲ್ಲ ತಮ್ಮ ದೇಹಸಿರಿಯನ್ನೂ ಮಣ್ಣು ಗೂಡಿಸಿಕೊಂಡವ ಎಷ್ಟೋಜನಗಳನ್ನು ನಾವು ನೋಡಿರುತ್ತೇವೆ. ಮೊದಮೊದಲು ಮಜಾ ಕೊಡುತ್ತಹೋಗಿ ನಂತರ ಅವರ ತನಗಳನ್ನೇ ಈ ವ್ಯಸನಗಳು ನುಂಗಿಹಾಕಿ ಬಿಡುತ್ತವೆ. ಅದರ ಆಧೀನವಾಗುತ್ತ, ಆದು ಇಲ್ಲದಿದ್ದರೆ ಜೀವನವೇ ಇಲ್ಲವೆನ್ನುವ ಪರೀಸ್ಥಿತಿಗೆ ತಲುಪುತ್ತಾರೆ.ಅವರ ಇಚ್ಛೆಗಳಿಗೆ ದೇಹ ಸ್ಪಂದಿಸದಾದಾಗ ಹಾಗೂ ಅವಕಾಶಗಳು ಸಿಗದೇ ಇದ್ದ ಪಕ್ಷದಲ್ಲಿ ಮನೋರೋಗಿಗಳೂ ಆಗುತ್ತಾರೆ. ಆದ್ದರಿಂದ ಯಾವುದೇ ದುಷ್ಚಚಟಗಳಿಗೆ ಆಧೀನರಾಗದೆ ಇರುವದು ಒಳಿತು. ಆಕಸ್ಮಿಕ ಚಟದ ಆಧೀನಕ್ಕೆ ಒಳಪಟ್ಟವರಾಗಿದ್ದರೂ,ತಮ್ಮ ಅನಕೂಲ,ಅನಾನುಕೂಲ ನೋಡಿಕೊಂಡು ಹಂತ ಹಂತವಾಗಿ ಹೊರಬರುವ ಪ್ರಯತ್ನ ಮಾಡುತ್ತ ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳುವದು ಯೋಗ್ಯವಾದುದು ಆಗಿರುತ್ತದೆ. ವ್ಯಸನಗಳಿಂದ ಹೊರಬರಲು ವೈದ್ಯಕೀಯದಲ್ಲಿ ಸಾಕಷ್ಟು ಔಷಧಿಗಳಿವೆ.ಆದರೆ ಆವು ಒಂದಿಲ್ಲ ಒಂದು ತರಹ ಮಾನಸಿಕ,ದೈಹಿಕವಾಗಿ ತೊಂದರೆ ಮಾಡುವಂತಹವೇ ಆಗಿರುತ್ತವೆ. ಆದ್ದರಿಂದ ಇದರಿಂದ ಹೊರಗೆ ಬರಲು ಸ್ವತಹ ಅವರುಗಳೇ ಗಟ್ಟಿಮನಸ್ಸು ಮಾಡಬೇಕು.ಮನೋನಿರ್ದಾರಗಳ ಮುಂದೆ ಯಾವನಿರ್ದಾರಗಳೂ ಇಲ್ಲ. ಮನಸ್ಸುಮಾಡಬೇಕಷ್ಟೇ.
2.
ನಿದಿರೆಯೇ ಬಾರದ ನನ್ನ ಕಣ್ಣಿಗೀಗ ಸದಾ ಕಾಡಿದೆ,
ತಾರಾಗಣದಂತಿದ್ದ ನಿನ್ನ ನಗೆ ಯ ಹಗಲು ಕನಸು!
ಮರುಭೂಮಿಯಂತಿದ್ದ ನನ್ನ ಮನದಲೀಗ ಚಿ
ಮಿಂಚು ಬಳ್ಳಿಯಂತಿರುವ ಆ ನಿನ್ನ ಸೊಗಸು!
ಚಿತ್ತದೊಳಗಿನ ನಿನ್ನ ರೂಪವ ಹಾಳೆಗೆ
ಮೀಟಿದ ಪ್ರತಿಗೀಟಿಗೊಮ್ಮೆ ನಿನ್ನ ಮು
ತಡವೇತಕೆ ಬರಲು ಬಾಳಿನಲಿ,
ಕನಸಲೇ ಕರಗುತಿದೆ ಪ್ರಾಯದ ವಯಸು
- ಮನುಜ
Introduction
Manoj Dammur, is young as well as most promising upcoming writer. He has completed Ms in Sustainability Engineering and Management, Bachelors degree in Mechanical Engineering. His hobbies include Writing Poems, Photography, traveling, pencil sketching/portrait. He writes with the pen name "Manuja (ಮನುಜ)".
All the readers are requested to support this young innovative writer to come out with flying colours and help him to become a mighty writer in near future.
All the readers are requested to support this young innovative writer to come out with flying colours and help him to become a mighty writer in near future.
He is in Instagram as ondu_gubbana_kathe . Do follow him and support.
Comments
Post a Comment
Liked the post? Don't forget to tell us, do comment.