1.

ಮೂರ್ಖ ವಿದ್ಯಾರ್ಥಿಗಳು ಶಿಕ್ಷಕರಿಂದ 
ಏನು ಕಲಿತುಕೊಳ್ಳುವದಿಲ್ಲ,
ಶಿಕ್ಷಕ ಅವರಿಂದ ಎಲ್ಲವನ್ನು 
ಚನ್ನಾಗಿ ಕಲಿತುಕೊಳ್ಳುತ್ತಾನೆ!
                                   - ಎಮ್ಮೆಚ್ಚೆ 

ವಿಸ್ತೃತ
ಕೆಲ ಜನ ವಿದ್ಯಾರ್ಥಿಗಳು ಸರಿಯಾಗಿ ವಿದ್ಯಾಭ್ಯಾಸ ಮಾಡದೆ ಉಡಾಳತನದಿಂದ ಶಿಕ್ಷಕರ ಕಡೆ ಗಮನ ಹರಿಸದೆ ಮೂರ್ಖತನದಿಂದ ಯಾವ ವಿಷಯವನ್ನೂ ತಿಳಿದುಕೊಳ್ಳುವದಿಲ್ಲ. ಆದರೆ ಶಿಕ್ಷಕರು ಇಂತಹ ವಿದ್ಯಾರ್ಥಿಗಳನ್ನು ತಮ್ಮ ವೃತ್ತಿ ಬದುಕುನಲ್ಲಿ ಸಾಕಷ್ಟು ನೋಡಿ ಅಪಾರ ಅನುಭಾವಿತರಾಗಿರುತ್ತಾರೆ. ಇಂಥವರನ್ನು ಹೇಗೆ ಪಳಗಿಸಬೇಕು ಮಣ್ಣು ಪರಿಣಾಮಗಳ ಬಗ್ಗೆ ಏನೆಲ್ಲವನ್ನು ತಿಳಿದುಕೊಳ್ಳುತ್ತಾರೆ.   

2.

ಸುಂದರತೆ ಕಂಡಿಹುದು ಚಂದಿರನ ಮೊಗದಿಂದ
ಅಂದ ಸಮ್ಮತವೇ ಅದು ಹತ್ತಿರದ ಸಂಬಂಧ,
ಬಂಧವಿರದಾ ಬಂಧ ಬೆಳೆಸುವುದೇ ಆ ಸಂಬಂಧ
ಆತ್ಮಗತಗೊಳಿ಼ಸಲಾರದು ನಿಯಂತ್ರಣದಿಂದ!
                                              - ಎಮ್ಮೆಚ್ಚೆ

ವಿಸ್ತೃತ 
ಚಿಕ್ಕವರಿದ್ದಾಗ ಚಂದಾಮಾಮಾನ  ನಾನಾ ತರಹದ ಕಥೆಗಳನ್ನು ಹಿರಿಯರಿಂದ  ಸಾಕಷ್ಟು ಕೇಳಿ ಆನಂದಿಸಿದ್ದೇವೆ. ಏಕೊ ಏನೊ ತನ್ನ ಶೀತಲ ಬಿಂಬದಿಂದ ಎಲ್ಲ ಮಕ್ಕಳ ಮನಸನ್ನು ಆ ಚಂದಿರ ಗೆದ್ದಿದ್ದಾನೆ. ತನ್ನ ಮುಗ್ದ ರೂಪದಿಂದ ಎಲ್ಲರ ಮುಖದಲ್ಲೂ ಹಸನ್ಮುಖದಿಂದ ನಗುವು ತರಸಿದ್ದಾನೆ. ಚಿಕ್ಕ ಚಿಕ್ಕ ಮಕ್ಕಳ ಮುಖದಲ್ಲಿ ಅಳು ಮಾಯವಾಗಿಸಿದ ಚಂದಿರನ ನಿಘೂಡತೆಯನ್ನು ವಿಜ್ಞಾನಿಗಳು ಬಟಾಬಯಲು ಗೊಳಿಸಿದ್ದಾರೆ. ಚಂದ್ರ ಗ್ರಹ ಎನ್ನುವದು ತನ್ನ ಸ್ಪಪ್ರಜ್ವಲತೆ ಶಕ್ತಿಯಿಲ್ಲದ, ಏರು ತಗ್ಗುಗಳ ಕಪ್ಪುಕಲೆಗಳನ್ನು ಹೊಂದಿದ್ದು ಎಂದು ಸಾಬೀತು ಪಡಿಸಿದ್ದಾರೆ. ಎಲ್ಲ ದೇಶಗಳವರೂ ಅಲ್ಲಿ ಮಾನವರು ವಾಸಿಸಲು ಯೋಗ್ಯವಾದುದೆಂದು ತಿಳಿದು ಆ ಗ್ರಹದಲ್ಲಿ ವಾಸಿಸುವ ಕನಸು ಕಾಣುತ್ತಿದ್ದಾರೆ. ಇನ್ನು ಕೆಲವರು ಅಲ್ಲಿ ಜನವಸತಿಗಾಗಿ ಮನೆ ನಿರ್ಮಿಸುವ ಕನಸನ್ನೂ ಕಾಣುತ್ತಿದ್ದಾರೆ.
    ಚಂದಿರನಷ್ಟೇ ಅಲ್ಲ ಯಾವುದೇ ವಸ್ತು ಸುಂದರವಾಗಿ ಕಾಣಬೇಕೆಂದರೆ, ಎಲ್ಲದಕ್ಕೂ ಅದರದೇ ಆದ ಅಂತರದಲ್ಲಿದ್ದು ನೋಡಬೇಕು. ಸರಿಯಾದ ಅಂತರತೆ ಇರದಿದ್ದಲ್ಲಿ ಯಾವ ವಸ್ತುಗಳೂ ತಮ್ಮ ಸುಂದರತೆ ಹೊರಸೂಸಲಾರವು. ಅದಕ್ಕೇ ಹಿರಿಯರು ಹೇಳಿದ್ದು,ದಿಟ್ಟಿಸಿ ನೋಡಿದರೆ ಮನೆ ಹೆಂಡತಿ ಕರ್ರಗೇ ಎಂದು.
  ನಾವು ಮನುಷ್ಯರುಗಳು ಚನ್ನಾಗಿರಬೇಕೆಂದರೆ ಕೇವಲ ಸಂಬಂಧಿಗಳೇ ಆಗಬೇಕೆಂದಿಲ್ಲ. ಪ್ರತಿಯೊಬ್ಬ ಮಾನವರೂ ನನ್ನಂತೆಯೇ ಸೋದರತ್ವವುಳ್ಳವರೆಂದು ತಿಳಿದುಕೊಳ್ಳಬೇಕು. ಅದುವೇ ಮಾನವರ ನಿಜವಾದ ಸಂಬಂಧ. ಅದೇ ನಿಜವಾದ ಮಾನವ ಪ್ರೇಮ. ಇಂತಹ ನಿಜವಾದ ಸಂಬಂಧಗಳು ಆತ್ಮಗತಗೊಳ್ಳಬೇಕು, ತೊರಿಕೆದಾಯಕವಾಗಿರಬಾರದು ಅಂದರೆ ಶಾಶ್ವತಗೊಳ್ಳುತ್ತವೆ ಹಾಗೂ ಅಮೋಘವಾಗಿರುತ್ತವೆ. ಅಂತರಾತ್ಮದಿಂದ ನಡೆದುಕೊಳ್ಳದ ಯಾವ ಸಂಬಂಧಗಳೂ ಶಾಸ್ವತವಾಗಿ ಬದುಕುವದಿಲ್ಲ. ಅವು ಕೇವಲ ನಾಟಕೀಯವಾಗಿ ಸ್ವಾರ್ಥಮಯಗೊಳ್ಳುತ್ತವೆ.
   ಆದ್ದರಿಂದ ಎಲ್ಲರೂ, ಯಾವುದನ್ನು ಬಯಸುತ್ತೆವೆಯೋ ಅದರದೇ ಆದ ಲಯಬದ್ದ ಪ್ರಮಾಣಗಳಲ್ಲಿ ಅವುಗಳನ್ನು ಸಂದಿಸಬೇಕು. ಹಾಗೂ ಅವುಗಳ ನಿಜವಾದ, ಅರ್ಥಪೂರ್ಣ ಅನುಕೂಲ ಪಡೆದುಕೊಳ್ಳಬೇಕು.

3.

ಬಳಸಿಕೊ ನೀ ಅಳಿಸುವ ಮುನ್ನ
ಉಳಿಸಿಕೋ ನೀ ಎನಿಸುವದನ್ನ,
ಬುದ್ದಿಯದು ಹೊತ್ತಿಸಿದ ದೀಪ
ಲದ್ದಿ ಮಾಡುವುದೇ ಕಾಲನ ಸ್ವರೂಪ!
                                  - ಎಮ್ಮೆಚ್ಚೆ

ವಿಸ್ತೃತ
ಮನುಷ್ಯರಾದ ನಾವುಗಳು ಭವ್ಯ ನಿಸರ್ಗದ ಪ್ರತಿಯೊಂದನ್ನೂ ಸದುಪಯೋಗ ಪಡಿಸಿಕೊಳ್ಳಬೇಕೇ ಹೊರತು ಯಾವುದನ್ನೂ ದುರುಪಯೋಗ ಪಡಿಸಿಕೊಳ್ಳಬಾರದು.ನಿಸರ್ಗದ ಏನೆಲ್ಲ ಭವ್ಯತೆಗಳಿರುವುದೇ ಜೀವಿಗಳಿಗಾಗಿ. ಆದರೆ ಮಾನವರ ಕೈಯಲ್ಲಿ ದುರುಪಯೋಗಗೊಳ್ಳುತ್ತಿದೆ. ನಾವುಗಳು ಸ್ವಾರ್ಥದ ಬೆನ್ನುಹತ್ತಿ , ಎಲ್ಲಾ ಜೀವಿಗಳನ್ನು ಕಡೆಗಣಿಸಿ, ನಿಸರ್ಗದೆಲ್ಲವೂ ನನಗೇ ಸಂಬಂಧಿಸಿದ್ದೆಂಬ ಭ್ರಮೆಗೆ ಒಳಗಾಗಿದ್ದೇವೆ.
       ನಿಸರ್ಗದಲ್ಲಿಯ ಪ್ರತಿಯೊಂದು ವಸ್ತುಗಳಿಗೂ ತನ್ನದೇ ಆದ ಪ್ರಮಾಣಗಳಿವೆ. ನಾವು ಅನಾವಶ್ಯಕವಾಗಿ ಬೇಕಾಬಿಟ್ಟಿ ಎಲ್ಲವುಗಳನ್ನೂ ಬಳಸುತ್ತ ಹೊದಲ್ಲಿ, ಮುಂದಿನ ಪೀಳಿಗೆಗೆ ಅವುಗಳ ಕೊರತೆಯುಂಟಾಗಿ ಜೀವಿಗಳ ಸಂಪೂರ್ಣ ಲಯಕ್ಕೆ ಕಾರಣವಾಗುವ ಪ್ರಸಂಗ ಉಂಟಾಗುತ್ತದೆ. ನಮ್ಮದೆ ಪೀಳಿಗೆಗೆ ನಾವುಗಳೇ ನಮಗೆ ತಿಳಿಯದಂತೆ ಮರಕತೆಯನ್ನು ಉಂಟುಮಾಡುತ್ತಿದ್ದೇವೆ. ಆದ್ದರಿಂದ ನಮ್ಮ ಜೀವಿತ ಕಾಲದಲ್ಲಿ ನಮ್ಮಗಳಿಗಾಗಿಯೇ ಇರುವ ಈ ನಿಸರ್ಗವನ್ನು ಹಿತಮಿತವಾಗಿ ಬಳಕೆ ಮಾಡುವದು ಅನಿವಾರ್ಯ ಹಾಗೂ ಜವಾಬ್ದಾರಿಯದೂ ಆಗಿರುತ್ತದೆ.
ನಾವು ನಿಸರ್ಗದಲ್ಲಿ ಬೇಡವಾದುದನ್ನೇ ಹೆಚ್ಚು ಹೆಚ್ಚು ಬಳಸುತ್ತ ನಮ್ಮ ನೈಜ ದೈಹಿಕ ಸಿರಿಯನ್ನೂ ಹಾಳುಮಾಡಿಕೊಳ್ಳುತ್ತ ನಮ್ಮ ಜೀವಿತ ತನವನ್ನು ಕುಂಟಿತಗೊಳಿಸಿಕೊಳ್ಳುತ್ತಿದ್ದೇವೆ. ಇಲ್ಲ ಸಲ್ಲದ ನಾನಾ ರೋಗಗಳಿಗೆ ಬಲಿಪಶುವಾಗುತ್ತಿದ್ದೇವೆ‌. ಈಗಲಾದರೂ ಇಂಥಹ ಅಂತಿಮ ಘಟ್ಟದಲ್ಲಾದರೂ ನಾವು ವಿಷಯಗಳನರಿತು, ಮಾಡಿದ ತಪ್ಪುಗಳು ಮರುಕಳಿಸದಂತೆ ನಡೆದುಕೊಂಡು, ವಿನಾಶದ ಘೊರತೆಯರಿತು ನಿಸರ್ಗದ ಸರಿಯಾದ ಬಳಕೆಯೊಂದಿಗೆ ಮನುಕುಲದ ಏಳ್ಗೆಗೆ ಬದುಕುವದು ಅನಿವಾರ್ಯ ಹಾಗೂ ಮಹತ್ವದ್ದಾಗಿರುತ್ತದೆ.
   ಎಲ್ಲರೂ ಎಲ್ಲವನ್ನೂ ತಿಳಿದುಕೊಂಡೇ  ಜನ್ಮಿಸಿರುವದಿಲ್ಲ. ಹುಟ್ಟಿದಮೇಲೆ ತಮ್ಮ ಸ್ವಪ್ರಯತ್ನದ ಆಧಾರದಮೇಲೆ ಏನೆಲ್ಲ ತಿಳಿದುಕೊಳ್ಳುತ್ತಾರೆ. ಈ ತಿಳುವಳಿಕೆಯೆನ್ನುವದು ಬಹಳ ಮಹತ್ವವಾದುದು. ತನ್ನನ್ನು ಹಾಗೂ ಸಮಾಜವನ್ನು ಸೂಸ್ಥಿತಿಯಲ್ಲಿಡಲು ತಿಳುವಳಿಕೆ ಬೇಕೇಬೇಕು. ಇಂಥ ತಿಳುವಳಿಕೆ ಮಾನವ ಕುಲದ ಉಳಿವಿಗೆ ದಾರಿದೀಪವಾಗುತ್ತದೆ.
  ನಾವು ಯಾವುದೇ ಎಷ್ಟೇ ಜ್ಞನವನ್ನು ಸಂಪಾದಿಸಿದರೂ ಅದರ ಸದ್ಬಳಕೆ ಕಾಲಕ್ರಮೇನ ಜರುಗಲೇಬೇಕು. ಕಲಿತ ಜ್ಞಾನ ಬಳಕೆಯಾಗದಿದ್ದಲ್ಲಿ ಕಾಲಕ್ರಮೇಣ ನಶಿಸುತ್ತಲೇ ಹೋಗುತ್ತದೆ. ವಿದ್ಯೆ ಬಳಕೆಯಾದಂತೆಲ್ಲ ಬೆಳಗುತ್ತದೆ ಇಲ್ಲದಿದ್ದಲ್ಲಿ ನಶಿಸುತ್ತದೆ.
     ನಾವು ಎಷ್ಟೇ ಜವಾಬ್ದಾರಿ ಜ್ಞನಬಳಕೆದಾರರಾಗಿದ್ದರೂ ಕಾಲನ ಕೈಲಿ ಸೋಲಲೇಬೇಕು. ಈ ಕಾಲನ ಕೈಲಿ ನಮ್ಮ ವಿಧ್ಯಾ ಬುದ್ದಿಗಳು ಕೈವಶವಾಗುವದು ಜಗದ ವಿಸ್ಮಯವಲ್ಲದೆ ಮತ್ತೇನು..!

Comments

Popular Posts