1.

ಬೇಸಿಗೆಗೊಣಗಿ ಬಿರುಕೊಡೆದ ಇಳೆಗೆ

ಚೈತನ್ಯ ತುಂಬುವ ಧಾರೆಯಾಗಿ,

ಬರಬಾರದೆ ನೀ ನನ್ನ ಬದುಕಿನೊಳಗೆ

ನಾ ಕಂಡ ಸ್ವಪ್ನರೂಪಸಿಯಾಗಿ!   

                                       - ಮನುಜ


2.


ಆರುದಿನಕೇ ಅಳಿದನೇನು ಆ ದೇವ

ಅನಂತಕಾಲ ಉಳಿಯಿತಾ ದೆವ್ವ,

ಹೆದರಿಕೆಯಲಿ ಹೊಕ್ಕಿದ ಆ ಭೂತ

ಹೊರಗುಳಿದವನೇ ಅವ ಅವಧೂತ!

                                        - ಎಮ್ಮೆಚ್ಚೆ


ವಿಸ್ತೃತ

        ಹಿಂದೂ ಧರ್ಮ ಶಾಸ್ತ್ರಗಳ ಪ್ರಕಾರ ಜನರ ನಂಬಿಕೆಗಳೇನೆಂದರೆ, ದೇವರು ಈ ಅದ್ಬುತವಾದ ಜಗತ್ತಿನಲ್ಲಿ ಇರುವ ಎಂಭತ್ತಾರು ಕೋಟಿ ಜೀವರಾಶಿ(ಕರೋನ ಜೀವ ಕಣ ಬಿಟ್ಟು), ಜೀವಗಳುಳ್ಳ ಪರಿಸರ ಜಗತ್ತು ಹೀಗೆ ಎಲ್ಲವುಗಳನ್ನು ದಿನಕೊಂದರಂತೆ ಆರುದಿನಗಳ ವರೆಗೆ ಶ್ರಮಪಟ್ಟು ನಿರ್ಮಿಸಿದನಂತೆ  ಆದರೆ ಮುಂದೆ ಆ ದೇವ ಏನು ಮಾಡಿಲ್ಲದಿರುವದು ಜಿಜ್ಞಾತೆಯ ವಿಷಯ. ಅವನಿಗೆ ಮುಂದುವರೆಯದಂತೆ, ಇಷ್ಟಕ್ಕೇ ಕಾದುನೋಡೋಣ ಎನ್ನುವಂತ ಭಲವಾದ ತಡೆ ಯಾವುದಿರಬಹುದು? ಅಥವಾ ಆರು ದಿನಗಳ ಅವಿರಥ ಕೆಲಸಕ್ಕೆ ತನ್ನ ಅಸ್ಥಿತ್ವವನ್ನೇ ಕಳೆದುಕೊಂಡಿರಬಹುದೆ?

         ಸತ್ಯಕ್ಕೆ ಹತ್ತಿರಿರದ ಇಂಥಹ ಎಷ್ಟೋ ಕಲ್ಪಿತ ಕಥೆಗಳಿಂದಾಗಿ ಮನುಷ್ಯ ಭಯಭೀತಿಗೊಂಡು ಪಾಪ ಪ್ರಜ್ಞೆಗಳ ಭಯದಲ್ಲಿಯೇ ಬದುಕುವಂತಾಗಿದೆ. ಒಂದರ ಅಂತ್ಯ ಇನ್ನೊಂದ ಆರಂಭ. ಇನ್ನೊಂದ ಅಂತ್ಯ ಮತ್ತೊಂದರ ಆರಂಭ ಎನ್ನುವಂತಿರುವ ಘಳಿಗೆಗಳ ಹುನ್ನಾರಗಳಿಗೆ ಒಳಪಟ್ಟು ದೈವ, ಭಕ್ತಿ, ಸತ್ಯ, ಕರುಣೆ ಗಳಿಗಿಂತ ದೆವ್ವ, ಭೂತ, ರಾಕ್ಷಸ, ಪಿಸಾಚಿಗಳಂಥಹ ವಿರುದ್ದಾತ್ಮಕಥೆಗಳ ಭಯದಲ್ಲೇ ಬದುಕುವಂತಾಗಿದೆ. ಆ ದೇವ ನಿರ್ಮಿಸಿದ ಆ ವೈರುದ್ಯದೊಂದಿಗೆ ಅದರ ಸಕ್ರೀಯತೆಯಲ್ಲಿಯೈ ಬದುಕುವಂತಾಗಿದೆ.

           ಇಂಥ ಆಗುಹೊಗದ ಕಲ್ಪಿತ ಕಥೆಗಳಿಗೆ ತಲೆಕೆಡಸಿಕೊಳ್ಳದೆ, ಮೂಢತನದಿಂದ ವರ್ತಿಸದೆ ಧನಾತ್ಮಕತೆಗಳನ್ನು ಮೈಗೂಡಿಸಿಕೊಂಡು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕುವದು ಮಹತ್ವದ್ದಾಗಿರುತ್ತದೆ. ಆದರೆ ಕೆಲವರು, ಮುಳ್ಳಿನಿಂದಲೇ ಮುಳ್ಳುತೆಗೆಯಬೇಕೆನ್ನುವವರಾಗಿರುತ್ತಾರೆ. ಅಂದರೆ  ದೆವ್ವ, ಮಾಟ, ಕಾಟಗಳ ನಿವಾರಣೆಗೆ ಧನಾತ್ಮ ಕತೆಯತ್ತ ಹೋಗದೇ ಋನಾತ್ಮಕತೆಯಲ್ಲೇ ಇನ್ನೂ ಹೆಚ್ಚು ಎದುರಿಸುವ ಶಕ್ತಿ ಪಡೆದುಕೊಳ್ಳುವ ತತ್ವದೆಡೆಗೆ ಕೆಲವರು ಆಕರ್ಷಿತರಾಗಿರುತ್ತಾರೆ. ಅವರು ಸಾಮಾಜಿಕ ಏನೆಲ್ಲ ಕಟ್ಟು ಪಾಡುಗಳನ್ನೂ ಮೀರಿದ ತಮ್ಮದೇ ತತ್ವಗಳನ್ನು ಅಳವಡಿಸಿಕೊಂಡು ಪಾರಮಾರ್ತದ ಕಡೆಗೇ ಸಾಗುವಂತವರಾಗಿರುತ್ತಾರೆ. ಸಾಗುವ ಮಾರ್ಗಗಳು ಮಾತ್ರ ವ್ಯತಿರಿಕ್ತವಾಗಿರುತ್ತದೆ.

Comments

Popular Posts