1.

ಚಿಕ್ಕ ವಯದವರ ಸಾವು
ಚೊಕ್ಕ ಮಾಡಿತು ಮನೆ ಬರಪೂರ,
ದೊಡ್ಡ ವಯದವರ ನೋವು
ಕೇಳಲಿದ್ದವರಾದರೂ ಯಾರು!
                                         - ಎಮ್ಮೆಚ್ಚೆ

ವಿಸ್ತೃತ
ಇತ್ತಿತ್ತಲಾಗಿ ಚಿಕ್ಕವಯಸ್ಸಿನವರೇ ಹೆಚ್ಚಾಗಿ ಸಾಯತ್ತಿದ್ದಾರೆ. ಅದರಲ್ಲೂ ನಲವತ್ತು ವರ್ಷದೊಳಗಿನವರೇ ಹೆಚ್ಚು ಸಾಯುತ್ತಿರುವದು ಕಳವಳಕಾರಿ ವಿಷಯ. ಇಂಥಹ ಅಕಾಲಿಕ ಸಾವುಗಳಿಂದ ಸುಂದರ ಸಂಸಾರಗಳು ಒಡೆದು ಚೂರಾಗುತ್ತವೆ. ಹೆಂಡತಿ, ಗಂಡ, ಚಿಕ್ಕ ಚಿಕ್ಕ ಮಕ್ಕಳು ಅನಾಥರಾಗಿಬಿಡುತ್ತಾರೆ. ಆ ಕುಟುಂಬದ ಏಳಿಗೆ ಗಣನೀಯವಾಗಿ ಕುಂಟಿತಗೊಳ್ಳುತ್ತದೆ. ಬದುಕುಳಿದ ಪ್ರಜ್ಞಾವಂತರುಗಳು ಮಾತ್ರ ತಮ್ಮ ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿ ದಡತಲುಪುತ್ತಾರೆ. ಇಲ್ಲದಿದ್ದಲ್ಲಿ ಮಕ್ಕಳು ಅಡ್ಡದಾರಿಯನ್ನೇ ಹಿಡಿದು ಸಮಾಜ ಕಂಟಕರಾಗಿ ಬೆಳೆಯುತ್ತಾರೆ. ಮೊದಲು ಏಕತ್ರ ಕುಟುಂಬಗಳಿಂದ ಇಂಥಹ ಸಮಸ್ಯೆಗಳು ಅಷ್ಟಾಗಿದ್ದಲ್ಲ. ಒಂದೊಮ್ಮೆ ಈ ರೀತಿ ಕಷ್ಟಬಂದಾಗ ಎಲ್ಲರೂ ಜವಾಬ್ದಾರರಾಗಿರುತ್ತಿದ್ದರು. ಈಗ ಎಲ್ಲವೂ ಒಂಟಿ ಕುಟುಂಬಗಳೇ ಇರುವದರಿಂದ ಇಂಥ ತೊಂದರೆ ಬಹಳವಾಗಿವೆ.
    ಇಂಥಹ ಅವಘಡಗಳು ಸಂಭವಿಸಿದಾಗ ಎಲ್ಲರ ದ್ರೃಷ್ಠಿ ಗಂಡ, ಹೆಂಡತಿ, ಮಕ್ಕಳ ಕಡೆಗೇ ಇರುತ್ತದೆ. ಆದರೆ ಸತ್ತವರ ಅವಲಂಭಿತರು ಹಾಗೂ ವ್ರೃದ್ಧ ತಾಯಿ ತಂದೆಯರ ಬಗ್ಗೆ ಯಾರಿಗೂ ವಿಚಾರವೇ ಇರುವದಿಲ್ಲ. ಎಲ್ಲ ರೀತಿಯ ಸಾಮರ್ಥ್ಯ ಇದ್ದ ಹರೆಯದವರು ಹೇಗೋ ಬದುಕಬಹುದು, ತಮ್ಮ ಗೂಡು ತಾವು ಮತ್ತೆ ಕಟ್ಟಿಕೊಳ್ಳಬಹುದು ಆದರೆ ಅಸಹಾಯಕರಾದ ವ್ರೃದ್ದ ತಂದೆ ತಾಯಿಗಳ ಕಥೆ ಭಾರೀ ಯಾತನಾದಾಯಕವಾದುದು. ಇದ್ದ ಬಿದ್ದ ಎಲ್ಲ ಆಸ್ತಿಗಳನ್ನೂ ಮಕ್ಕಳ ಅಭಿವ್ರೃದ್ಧಿಗೇ ಕಳೆದು, ತಮ್ಮ ವ್ರೃದ್ದಾಪ್ಯದಲ್ಲಿ ಪರಿತಪಿಸಿದ ಬಹಳ ಪಾಲಕರ ಉದಾಹರಣೆಗಳನ್ನು ಸಾಕಷ್ಟು ನೋಡುತ್ತೇವೆ. ಈ ವಿಚಾರವಾಗಿ ಸಾಕಷ್ಟು ಕಾಯ್ದೆ ಕಾನೂನುಗಳಿದ್ದರೂ ಸಹ ಸರಿಯಾದ ಅನುಷ್ಟಾನದ ಕೊರತೆಯಿಂದ ಸಮಸ್ಯೆ ಬಗೆಹರಿದಿರುವದಿಲ್ಲ. ಆದ್ದರಿಂದ ಮಾನವೀಯ ಮೌಲ್ಯಗಳ ಅಳುವಡಿಕೆಯ ಹರಿಕಾರರೆಂದು ಬೊಬ್ಬೆಇಡುವ ನಾವುಗಳು ನಮ್ಮ ಜವಾಬ್ದಾರಿಗಳಿಂದ ನುಣುಚಿಕೊಳ್ಳದೆ, ವ್ರೃದ್ದ ತಂದೆ ತಾಯಿ, ಅಲ್ಪವಹಿ ಮಕ್ಕಳು, ನಮ್ಮ ಬಾದ್ಧ್ಯಸ್ತಕ್ಕೆ ಸಂಬಂಧ ಪಟ್ಟ ಎಲ್ಲರನ್ನೂ ಎಲ್ಲಾ ಕಾಲಕ್ಕೂ ಜೋಪಾನ ಮಾಡುವ ಜವಾಬ್ದಾರಿ ಎಲ್ಲರೂ ಹೊರಲೇಬೇಕು. ನಮ್ಮ ಜೀವಿತಕ್ಕೆ ಕಾರಣರಾದವರ ಕ್ಷೇಮವೇ ನಮ್ಮ ಮುಖ್ಯ ಗುರಿಯಾಗಬೇಕು.

2.

ಹೊಲದಲಿ ಇಲಿ ಜಿಂಕೆಗಳ ಕಾಟ
ಹಿತ್ತಲದಿ ಹಂದಿ ದನಗಳ ಊಟ
ಊರಲ್ಲಿ ದುಷ್ಟಜನರ ಕೆಟ್ಟ ನೋಟ
ಸಾಗಿದೆ ಹಿಗೇ ಜೀವನದ ಪರಿಪಾಟ!
                                         - ಎಮ್ಮೆಚ್ಚೆ

ವಿಸ್ತೃತ
 ಕಳೆದ ಕೆಲ ವರ್ಷಗಳಿಂದ ಮಳೆ ಸರಿಯಾಗಿ ತತಿಬದ್ಧವಾಗಿ ಆಗದ್ದರಿಂದ ರೈತರು ಭರಿಸಲಾರದ ಹಾನಿಗೊಳಗಾಗಿದ್ದಾನೆ. ನೂರಾರು ಎಕರೆ ಜಮೀನಿಗಿಂತ ಯಾವುದಾದರೂ ಸರಕಾರಿ  ಇಲಾಖೆಯಲ್ಲಿ ಜವಾನ  ಚನ್ನಾಗಿ ಬದುಕಬಲ್ಲ ಎನ್ನುವಷ್ಟು ಬಲಿಪಶುವಾಗಿದ್ದಾರೆ. ರೈತ ಯುವಕರಿಗೆ ಕನ್ಯ ಕೊಡಲಾಗದೆನ್ನುವ ಪರೀಸ್ಥಿತಿಗೆ ಬಂದು ತಲುಪಿದ್ದಾರೆ.
  ಇನ್ನು ಮುಂದೆಯಾದರೂ ಮಳೆ ಚನ್ನಾಗಿ ಬರಬಹುದೆಂಬ ಅದೇ ನಿರೀಕ್ಷೆಯಲ್ಲಿ ಪ್ರತಿ ಹಂಗಾಮಿನಂತೆ ಈ ಸಾರಿಯೂ ಭೂಮಿತಾಯಿಗೆ ಬೀಜದುಡಿ ಮುಡುಪು ಅರ್ಪಿಸಿ ಈಗಲೂ ಜನ ನೀರೀಕ್ಷೆಯಿಂದ ಕಾಯುತ್ತಿದ್ದಾರೆ ಆದರೆ ಭ್ರಮೆ ಗೊಳಿಸುತ್ತ ಹುಸಿಮೋಡಗಳ ಮೆರವನಣಿಗೆಯ ಆ ಆಕಾಶ ಭರವಸೆಗಳನು ಹುಸಿಗೊಳಿಸುತ್ತಿದೆ. ಇಂಥಹ ಕಠೀಣ ಪರೀಸ್ಥಿತಿಯಲ್ಲೂ, ಆಲ್ಪ ಸ್ವಲ್ಪ ತಂಪಾದ ಜರೀ ಪ್ರದೇಶದಲ್ಲಾದರೂ ಬೆಳೆ ಬಂದೀತು, ಮುಂದಿನ ವರ್ಷಕ್ಕೆ ಹೊಸ ಬೀಜಗಳಾದಾವು ಎನ್ನುವ ಬ್ರಮೆಯಲ್ಲಿರುವವರೆಲ್ಲರಿಗೂ ಮತ್ತದೇ ಸೋಲು. ಅಲ್ಪ ಸ್ವಲ್ಪ ಮಳೆಯಿಂದಾಗಿ ಹೊಲಗಳಲ್ಲಿಯ ಇಲಿ ಗುದ್ದುಗಳು ಮುಚ್ಚಿರುವದಿಲ್ಲ. ಅದರಲ್ಲೂ ಹತ್ತಿ ಹಾಕಿದ ಹೊಲಗಳಲ್ಲಿ ಎರಕಲ ಬೀಡಿಗಳೆಲ್ಲ ಇಲಿಗಳ ಮನೆಗಳೇ ಆಗಿವೆ. ಹಿಗಾಗಿ ಬಿತ್ತಿದ ಬೀಜಗಳನ್ನೆಲ್ಲ ಮೊಳಕೆ ಒಡೆಯುವ ಮೊದಲೇ ಇಲಿಗಳು ತಿಂದುಹಾಕಿಬಿಡುತ್ತವೆ. ಹಾಗೆಂದು ರೈತ ಕೈಕಟ್ಟಿ ಕುಳಿತಿಲ್ಲ. ಸಾಧ್ಯವಾದಷ್ಟು ಇಲಿ ನಿಯಂತ್ರಿಸಿ ಹೆಸರು ಬೆಳೆ ನಾಲ್ಕಾರು ಎಲೆವರೆಗೆ ಕಂಡಿದ್ದಾರೆ ಆದರೆ ಈಗ ಏಕಾಏಕಿ ಜಿಂಕೆಗಳ ಹಾವಳಿ ಮಿತಿಮೀರಿದೆ. ಕಾನೂನಿನ ಕಟ್ಟುನಿಟ್ಟು ಅನುಷ್ಠಾಣದಿಂದಾಗಿ ಚಿಗರೆಗಳದೇ ಸಾಮ್ರಾಜ್ಯವಾಗಿಬಿಟ್ಟಿದೆ. ಇದಾದನಂತರ  ಹಿಂಡುಗಟ್ಟಲೇ ಸಂಖೆಗಳಲ್ಲಿ ಬಸವೆ ಗೂಳಿಗಳ ಹಾವಳಿ ಪ್ರಾರಂಭವಾಗುತ್ತದೆ. ಇದರನ್ವಯ ರೈತರು ಅಲವತ್ತುಕೊಂಡರೂ ನಿರ್ಧಿಷ್ಟ ಪರಿಹಾರ ಕಂಡುಕೊಳ್ಳುವದು, ನಮ್ಮನ್ನಾಳುವ ಯಾವ ಸರಕಾರಗಳಿಗೂ  ಸಾಧ್ಯವಾಗಿರುವದು ವಿಪರ್ಯಾಸ.
 ಇತ್ತಿತ್ತಲಾಗಿ, ಆಳುಗಳ ಮತ್ತು ಪಗಾರಗಳ ತೊಂದರೆಯಿಂದಾಗಿ ದನಕರುಗಳ ಸಾಕಾಣಿಕೆ ಗಣನೀಯ ಕುಂಠಿತಗೊಂಡಿವೆ. ಅದರಲ್ಲೂ ಕೆಲವರು ಇದ್ದ ದನಕರು ಸಾಕಬೇಕೆಂದು ಅಲ್ಪ ಸ್ವಲ್ಪ ಹೊಟ್ಟು ಮೇವುಗಳನ್ನು ಸಂಗ್ರಹಿಸಿ ಹಿತ್ತಲಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ. ಇದಕ್ಕೂ ನೆಲೆಯಿಲ್ಲದಂತೆ ಹಂದಿಯ ಗುಂಪುಗಳು ಎಲ್ಲವನ್ನೂ ತಿಂದು ಹಾಳುಗೆಡವಿ ಬಿಡುತ್ತವೆ ಊರಲ್ಲಿ ಹಂದಿಗಳನ್ನು ಬಿಡುವುದು ಒಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಏನೇನೂ ಖರ್ಚಿಲ್ಲದೆ ಕೇವಲ ಕೆಲ ಭಲಾಡ್ಯತನದಲ್ಲಿಯ ವ್ಯವಹಾರ ಇದಾಗಿರುತ್ತದೆ.
     ಇದಾವ  ರಗಳೆಗಳೂ ಬೇಡ ನಮ್ಮಷ್ಟಕ್ಕೆ ನಾವು, ಭಾರೀ ರೊಗಗಳ ನಿರ್ಬಂಧತೆಗಳ ತಯಾರಿಯಿಂದ ಆರಾಮಾಗಿ ಊರಲ್ಲಿ ಇರಬೇಕೆಂದರೆ, ಎಲ್ಲ ಜನರದೂ ಒಂದೊಂದು ತರಹ ಪ್ರತಿಕ್ರಿಯೆ. ಇಂಥ ಕೆಲವರ ನಡೆಯಿಂದ ಬಹಳ ಬೇಸರವಾಗಿದೆ. ಆದರೆ ಎಲ್ಲಕ್ಕಿಂತ ಜೀವ ಅಮೂಲ್ಯ, ಬದುಕು ಅಮೋಘ. "ಈಸಬೇಕು, ಇದ್ದು ಜಯಿಸಬೇಕು". ಹೀಗೇ ಸಾಗಿದೆ ಬದುಕು.

Comments

Popular Posts