1
ಹುಸಿ ಭ್ರಮೆಯ ಬಾಂದಳದ ಪ್ರಯಾಗ
ಸಾಗು ವದದುವೇ ಸಂಸಾರದ ಮೇಘ
ಮನುಜರೆನುವದು ಉತ್ತಮ ಜೀವ ಪ್ರಬೇಧ
ಒಡೆಯುವದು ನೀರ್ಗುಳ್ಳೆಯ ಪ್ರಮೇದ!
- ಎಮ್ಮೆಚ್ಚೆ
ವಿಸ್ತೃತ
ಮನುಷ್ಯರು ಆಶಾವಾದಿಗಳಾಗಿರಬೇಕು.ಅಂದರೆ ಮಾತ್ರ ಜೀವನ ಸಕಾರಾತ್ಮ ಕತೆಯಲ್ಲಿ ಮುಂದುವರೆಯುತ್ತದೆ.ಸಮಾಜಿಕ ಸಂಸಾರಿಕ ವ್ಯಕ್ತಿ ಸದಾಶಯದ ಭರವಸೆಯಲ್ಲಿ ಬದುಕಬೇಕು.ಸಂಸಾರಿಕ ಜೀವನದಲ್ಲಿ ನಾಳಿನ ಬಾಳಿನ ಬಗ್ಗೆ ಬಲವಾಗಿ ನಂಬಬೇಕು.ನಾವು ಆಶಿಸಿದ ಬಯಕೆ ಮುಂದೆ ನೆರವೇರುವದೋ ಇಲ್ಲವೋ ಅದು ಬೇರೆ ವಿಚಾರ.ಆದರೆ ಸಂಸಾರಗಳಲಿ ಜೀವನೋತ್ಸಾಹದ ಶಕ್ತಿ ತುಂಬಿ ದಡ ತಲುಪಲು ಸಹಾಯ ಮಾಡುವುದೇ ಈ ಭರವಸೆಗಳು.ಆದರೆ ಕೆಲ ಸದಾಶಯಗಳು ಈಡೇರದಿದ್ದಾಗ ಮನಸ್ಸಿಗೆ ಬಹಳ ಬೇಸರವಾಗುತ್ತದೆ.ಇಂಥ ವ್ಯರ್ಥ ಕಲ್ಪನಾ ವಿಷಯಗಳನಿಟ್ಟಕೊಂಡು ಬ್ರಮಾ ಲೋಕದಲ್ಲಿಯೇ ಬದುಕುತ್ತಿದ್ದೇವೇನೋ ಅನ್ನಿಸುತ್ತದೆ.ಕೆಲ ಜನ ಬುದ್ದಿವಂತರು,ಕಲ್ಪನಾ ಲೋಕದಲ್ಲಿ ಜೀವಿಸುವದಕ್ಕಿಂತ ನೈಜತೆಯಲ್ಲಿ,ಇದ್ದದ್ದು ಇದ್ದಂತೆಯೇ ಬದುಕಬೇಕೆನ್ನುತ್ತಾರೆ.ಆದರೆ ನೈಜ ಬದುಕಿನಲ್ಲಿ ಬದುಕಿ ತಮ್ಮ ಮನದ ಭಾವನೆಗಳನ್ನು ಸಹಿಸಿಕೊಳ್ಳದೆ ಸಂಸಾರಗಳಲ್ಲಿ ವಿನಾಕಾರಣ ಬಿರುಕು ಉಟಾಗುತ್ತವೆ.ಆದ್ದರಿಂದ ಜೀವನದಲ್ಲಿ ಭರವಸೆಗಳು ಇರಬೇಕೆನಿಸುತ್ತದೆ.
ಮನುಷ್ಯ ಜೀವಿಗಳೆಲ್ಲರೂ ಒಂದೇ ಪ್ರಭೇದದಿಂದ ಬಂದವರಾಗಿರುತ್ತೇವೆ.ಆದರೂ ನಾ ಹೆಚ್ಚು,ನೀ ಹೆಚ್ಚು ಎನ್ನುವ ದೊಂಬರಾಟದಲ್ಲಿಯೇ ಮುಳುಗಿ ಜೀವಿತದ ಕಾಲ ಕಳೆಯುತ್ತೇವೆ.ನಿಜ ಜೀವನದ ಅರ್ಥವನ್ನು ಸರಿಯಾಗಿ ತಿಳಿಯದವರಾಗಿದ್ದೇವೆ.ನಾವು ಎಷ್ಟೇ ಸುಂದರತೆ ಪಡೆದಿರ ಬಹುದು,ಎಷ್ಟೇ ಆಸ್ತಿಗಳಿಸಿರ ಬಹುದು,ಎಷ್ಟೇ ವಿದ್ಯೆ ಸಂಪಾದಿಸಿರಬಹುದು, ಸತ್ತಾಗ ಯಾರೂ ಏನನ್ನೂ ತೆಗೆದುಕೊಂಡು ಹೋಗಲಾಗುವದಿಲ್ಲ.ವ್ಯಕ್ತಿ ಸತ್ತೊಡನೆ ಬೆನ್ನ ಹಿಂದೆ ಬರುವದು, ಒಳ್ಳೆಯದು ಕೆಟ್ಟದ್ದೆಂಬ ಮಾತುಗಳು ಮಾತ್ರ.ನೀರಿನಲ್ಲಿಯ ಗುಳ್ಳಿಗಳು ಉದ್ಭವಿಸಿದ ಉದ್ದೇಶ ಕೇವಲ ಒಡೆಯುವದಕ್ಕಾಗಿಯೇ ಹೊರತು ಬೇರೇನೂ ಇರಲಾರದು.ಅದರಂತೆ ಮಾನವರು ಎಷ್ಟೇ ಧೀರ್ಘಾಯುಸಿಗಳಾಗಿರ ಬಹುದು ಆದರೆ ಕೊನೆಗೆ ಸಾಯಲೇ ಬೇಕು.ಈ ಸತ್ಯ ಅರಿತುಕೊಂಡು ಎಲ್ಲರೊಂದಿಗೆ ಪ್ರೀತಿಯಿಂದ ಚನ್ನಾಗಿರುವುದೇ ಜೀವನ.
2.
ವರ್ಣಿಸದಳವದು ಅವನಂಗ ಭಂಗಿ
ಏನಿಲ್ಲದೇ ಬದುಕಿದವನವ ಭಜರಂಗಿ,
ಬದುಕುವ ಕಲೆಯದು ಭಾವನೆಯ ನುಂಗಿ
ಬಹುದೊಡ್ಡ ಸುಳ್ಳದುವೇ ಜೀವನದ ಅರ್ದಾಂಗಿ!
- ಎಮ್ಮೆಚ್ಚೆ
ವಿಸ್ತೃತ
ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸಿರುತ್ತದೆಂಬ ಆಂಗ್ಲ ಗಾದೆ ಸತ್ಯವಾದುದು.ನಾವು ದೈಹಿಕ ಕ್ಷಮತೆಯನ್ನು ಎಷ್ಟು ಕಾಪಾಡಿಕೊಳ್ಳುತ್ತೇವೆಯೊ ಅದೇ ಪ್ರಮಾಣದಲ್ಲಿ ಮನಸ್ಸು ನಿರ್ಣಯ ತೆಗೆದುಕೊಳ್ಳುವದಕ್ಕೆ ಕ್ಷಮತೆ ಉಳ್ಳದ್ದಾಗಿರುತ್ತದೆ.ದೈಹಿಕ ಕಸರತ್ತುಗಳನ್ನು ಅಳವಡಿಸಿಕೊಂಡ ದೇಹದಲ್ಲಿ ಸುಂದರತೆಯ ಆ ತೇಜಸ್ಸು ಹೊರಸೂಸುತ್ತಿರುತ್ತದೆ.ಇಂಥಹ ವಿಚಿತ್ರ ಅಂಗಭಂಗಿ ಗಳನ್ನು ಪಡೆದವರನ್ನು ಸಮಾಜ ಗೌರವಿಸುತ್ತದೆ.ಇಂಥಹ ಸಾದನೆಗಳನ್ನು ಮಾಡುವವರಿಗೆ ಮಾರುತಿ,ಹನುಮಂತ ದೇವರು ಗುರಿಯಾಗಿರುತ್ತಾನೆ.ಮಾರುತಿ ದೇವರಹಾಗೆ ದೈಹಿಕ ಭಲಾಡ್ಯತೆ ಹೊಂದಬೇಕು ಹಾಗೂ ಮುಖ್ಯವಾಗಿ ಲೈಂಗಿಕಾಸಕ್ತಿ ಕೆದಕದಂತೆ ನೋಡಿಕೊಳ್ಳಬೇಕೆಂಬ ವಿಷಯದಲ್ಲಿ ನಿ ರತರಾಗಿರುತ್ತಾರೆ.ಹಿಂದಿನ ಕಾಲದಲ್ಲಿ ಹಾಗೆಯೇ ಅದೇ ಸಾಧನೆಯಿಂದ ಮೇಲ್ಮಟ್ಟಕ್ಕೆ ಹೊದವರು ಸಾಕಷ್ಟು ಜನ ಇದ್ದಾರೆ.ಇತ್ತಿತ್ತಲಾಗಿ ಈ ಲೈಂಗಿಕತೆ ,ಮನೋ ವ್ಯಕುಲತೆ ಕಳೆವ ಸಾಧನವೆಂದು ಕೆಲಜನರು ತಿಳಿದಿದ್ದಾರೆ.ಕ್ರಿಕೇಟ,ಫುಟಬಾಲ್ ನಂತಹ ಆಟಗಳ ಜಗತ್ಪ್ರಸಿದ್ದ ಆಟಗಳ ಗೆಲುವನಿಗೆಗೊ ಏನೋ ಆಟಗಾರರು ತಮ್ಮ ಜೊತೆಗಾರರನ್ನು ಹೊಂದಲು ಅವಕಾಶ ನಿರ್ಮಿಸಿದೆ.
ಉಳಿದ ದೇವರುಗಳ ಹಾಗೆ ಈ ಮಾರುತೇಶನಲ್ಲ.ಈತನಿಗೆ ಜಾತಿ ಭೇದಗಳ ಹಂಗಿಲ್ಲ,ಪ್ರೀತಿ ಪ್ರೇಮದ ಗುಂಗಿಲ್ಲ ಕೇವಲ ಬ್ರಹ್ಮಚಾರಿತನದ ದೈಹಿಕಸಾಧನೆ ಭಹುಮುಖ್ಯ.ಆದ್ದರಿಂದ ಹದಿವಯದ ಹೆಚ್ಚುಜನ ಈ ಹನುಮ ಭಕ್ತರಾಗಿರುತ್ತಾರೆ.ಇವನಲ್ಲಿ ಮನಸಿನ ಹೆಚ್ತಿನ ಭಾವನೆಗಳಿಲ್ಲ ,ಕೇವಲ ಸಮಾಜಿಕ ಒಳ್ಳೆಯತನಕ್ಕಾಗಿ ತನ್ನ ಪ್ರಾಮಾಣಿಕ ದೈಹಿಕ ಸಾಧನೆಗಾಗಿ ,ತನ್ನ ಏಕೈಕ ನಂಬಿಕೆಗಾಗಿ ಬದುಕಿದ ಎನ್ನುವ ಕಾರಣಕ್ಕೆ ಎಲ್ಲ ಇಷ್ಟಪಡುತ್ತಾರೆ.ಉಳಿದ ಎಲ್ಲ ದೇವರುಗಳಂತೆ ವಸ್ತ್ರ,ಆಭರನಗಳ ಗೊಜಿರದೆ ಅರ್ದ ಬೆತ್ತಲೆಯಲ್ಲೇ ಮಾರುತಿದೇವ ಬಹಳ ಭಕ್ತ ಪಡೆಯನ್ನು ಹೊಂದಿರುತ್ತಾನೆ.ಉಳಿದ ದೇವಾನು ದೇವತೆಗಳು ತಮ್ಮದೇ ಆದ ವಸ್ತ್ರ ವೈಡುರ್ಯಗಳ ಶೊಭಿತರಾಗಿರುತ್ತಾರೆ ಆದರೆ ಈ ಮಾರುತಿಯದು ತನ್ನದೇ ದಾರಿ ಈತನ ಭಕ್ತಿ ಪರವಶಯತೆಯದೇ ಮಹಾದಾರಿ.
ಜೀವನದಲ್ಲಿ ಬದುಕಲು ಸಾಕಷ್ಟು ದಾರಿಗಳಿವೆ.ಆದರೆ ಸುರಳಿತ ಬಾಳ್ವೆಸಾಗಿಸಬೇಕೆಂದರೆ,ನಮ್ಮ ಲೊಲುಪ ಭಾವನೆಗಳನ್ನು ಹರಿಬಿಡಬಾರದು.ಜೀವನದಲ್ಲಿ ಒಳ್ಳೆಯ,ಕೆಟ್ಟದ ಎಲ್ಲವೂಗಳೂ ಇರುತ್ತವೆ,ಅವುಗಳಿಗೆ ತಮ್ಮದೇಆದ ಸಮರ್ಥನೆಗಳೂ ಇರುತ್ತವೆ.ಇಂಥಹ ಸಂಕೀರ್ಣತೆಯಲ್ಲಿ ಸುಲಲಿತವಾಗಿ ಬದುಕಬೇಕೆಂದರೆ ಒಂದು ತರಹದ ಚಾನಾಕ್ಷ ಬುದ್ದಿಯನ್ನು ರೂಡಿಸಿಕೊಳ್ಳಬೇಕು.ಅದರಂತೆ ಮದುವೆಯಾದ ಹೆಂಡತಿ ನಮ್ಮ ಜೀವನದ ಅರ್ಧ ಭಾಗ ಸುಖ,ದುಖಗಳಲಿ ಭಾಗೀದಾರಳು ಎಂದು ಏನೆಲ್ಲ ಹಿರಿಯರು ಹೇಳುತ್ತಾರೆ.ಎಲ್ಲ ಸರಿಯಿದ್ದಗ ಅವರ ಹೇಳಿಕೆ ಸರಿ ಇರಬಹುದು ಆದರದು ಕೇವಲ ಕೆಲ ಪ್ರತಿಶತ ಮಾತ್ರ.ಈ ಆಧುನಿಕ ವಿಚಾರಗಳು ಇಬ್ಬರಿಗೂ ಸಮಾನ ಅವಕಾಶಗಳನೊದಗಿಸಿದೆ.ಇಲ್ಲಿ ಯಾರೂ ಹೆಚ್ಚಲ್ಲ,ಕಡಿಮೆಯೂ ಅಲ್ಲ.ಎಲ್ಲರೂ ಸರಿ ಸಮಾನ.ಹೊಗಳಿ ಹೊಖಳಿ ಹೊನ್ನ ಶೂಲಕೇರಿಸಿದರಯ್ಯ ಎಂಫ ಬಸವಣಣನವರ ವಚನದಂತೆಯೇ ಹೊಗಳು ಭಟ್ಟರಾಗಿದ್ದೇವೆ.ಹೆಃಡತಿಯರೋ ಉತ್ಸವ ಮೂರ್ತಿಗಳಾಗಿದ್ದಾರೆ.ಆದ್ದರಿಂದ ಎಲ್ಲ ತಾರತಮ್ಯವಳಿದು ನೈಜಬದುಕು ಬಾಳುವದು ಅವಶ್ಯವಾಗಿರುತ್ತದೆ.

Comments
Post a Comment
Liked the post? Don't forget to tell us, do comment.