1.
ಅರ್ಥವೇ ಇಲ್ಲದ್ದದು
ಮೌಲ್ಯರಹಿತ ಸಿರಿವಂತಿಕೆ,
ವ್ಯರ್ಥವಲ್ಲವದೆಂದೆಂದೂ
ಪರಿಶ್ರಮದ ಜೀವಂತಿಕೆ!
- ಎಮ್ಮೆಚ್ಚೆ
ವಿಸ್ತೃತ
ಹೇಗಾದರೂ ಮಾಡಿ ಎಲ್ಲರಿಗಿಂತ ಹೆಚ್ಚು ಆರ್ಥಿಕವಾಗಿ ಪ್ರಭಲರಾಗಬೇಕೆಂಬ ಮನೋಭಾವ ಸಮಾಜಿಕ ಕಂಟಕವಾದುದು. ಎಲ್ಲರೂ ತಮ್ಮ ಜೀವನದಲ್ಲಿ ಶ್ರಮವಹಿಸಿ ದುಡಿದು ಆಪತ್ಕಾಲಿಕ ಅನಕೂಲಕ್ಕಾಗಿ ಸ್ವಂತಕ್ಕೆ ಹಾಗೂ ನಮ್ಮ ಜವಾಬ್ದಾರಿಗೊಳಪಟ್ಟವರಿಗೋಸ್ಕರ ಆದಾಯದ ಕೆಲ ಭಾಗವನ್ನು ಉಳಿತಾಯ ಮಾಡುವದು ಬಹಳ ಅವಶ್ಯಕವಾಗಿರುತ್ತದೆ. ಕೆಲಜನರು ತಮ್ಮ ಅಜ್ಞಾನದಿಂದ ಎಲ್ಲ ಆದಾಯ, ಆಸ್ತಿ ಅಂತಸ್ತುಗಹನ್ನು ಇಲ್ಲ ಸಲ್ಲದ್ದಕ್ಕೆ ಹಾಳುಮಾಡಿಕೊಂಡು ಬಿಡುತ್ತಾರೆ. ಆದನ್ನು ಯಾರು ತಿಳಿಸಿದರೂ ತಿಳಿದುಕೊಳ್ಳದೆ, ನಮ್ಮ ದುಡಿಮೆಯ ಹಣ ನಾವು ಬೇಕಾದದ್ದು ಮಾಡುತ್ತೇವೆನ್ನುವ ಉಡಾಫೆತನದವರಾಗಿರುತ್ತಾರೆ. ಅಂಥವರು ತಮ್ಮ ಜವಾಬ್ದಾರಿ ಮರೆತವರಾಗಿರುತ್ತಾರೆ. ಆದಾಯಕಿಂತ ಖರ್ಚು ಹೆಚ್ಚಾಗಿ ಮುಂದೆ ಅನುಭವಿಸುವ ಪರಿಸ್ಥಿತಿಗೆ ಒಳಗಾಗುತ್ತಾರೆ. ಮತ್ತೆ ಕೆಲವು ಜನರು ತಮ್ಮ ಮೂಲಭೂತ ಅವಶ್ಯಕತೆಗಳನ್ನು ನೀಗಿಸಿಕೊಂಡು ನೆಮ್ಮದಿಯುತ ಜೀವನ ಸಾಗಿಸದೆ ಜಿಪುನತನದಿಂದ ಏನೊಂದೂ ಅನುಭವಿಸದೆ ಕಂಡದ್ದನ್ನೆಲ್ಲ ಸಂಗ್ರಹಿಸುವ ಗುಣದವರಾಗಿರುತ್ತಾರೆ. ಮತ್ತೆ ಎಷ್ಟೊ ಜನರು, ಹೇಗಾದರೂ ಮಾಡಿ ಮೊಸದಿಂದಲಾದರೂ ಸಾಕಷ್ಟು ಆಸ್ತಿ ಗಳಿಸುವ ಮನೋಭಾವದವರಾಗಿರುತ್ತಾರೆ. ಅಂಥವರು ಇನ್ನೊಬ್ಬರ ಮನಸು ನೊಯಿಸಿ ಮೊಸತನದಿಂದ ಅನ್ಯಮಾರ್ಗದಿಂದಲಾದರೂ ಸರಿ ಗಳಿಸಬೇಕೆಂಬಂತವರಾಗಿರುತ್ತಾರೆ. ಆ ರೀತಿಯಾಗಿ ಗಳಿಸಿದ ಯಾವ ಗಳಿಕೆಗೂ ಜನಮನ್ನನೆಯಾಗಲಿ, ಗೌರವವಾಗಲಿ ಏನೊಂದೂ ಸಮಾಜದಲ್ಲಿ ಇರುವದಿಲ್ಲ.
ನಾವು ನಮ್ಮ ದೇಹವನ್ನು ನಿರಂತರ ಕಾಯಕದಲ್ಲಿ ತೊಡಗಿಸಿಕೊಂಡು ನಮ್ಮ ಅವಶ್ಯಕತೆಗಳನ್ನು ಸರಳತೆಯಿಂದ ನೀಗಿಸಿಕೊಳ್ಳುವದು ಯೊಗ್ಯತನದ್ದಾಗಿರುತ್ತದೆ. ಇಂಥಹ ರೀತಿಯ ಬದುಕು ಉತ್ತಮವಾದುದು ಮತ್ತು ದೈವಿಕತನದಿಂದ ಕೂಡಿದುದಾಗಿರುತ್ತದೆ. ಸರಳ ರೀತಿಯ ಪ್ರಾಮಾಣಿಕ ಪರಿಶ್ರಮದ ಜೀವನ ನಮ್ಮನ್ನು ಯಶಸ್ವಿ ಜೀವನದತ್ತ ಕೊಂಡೊಯ್ಯುತ್ತದೆಯೇ ಹೊರತು ಯಾವತರಹದ ತೊಂದರೆದಾಯಕ ವಾದುದಾಗಿರುವದಿಲ್ಲ. ನಮ್ಮ ನಮ್ಮ ಕಷ್ಟಯುತ ಪ್ರಾಮಾಣಿಕ ಗಳಿಕೆಯ ಪ್ರಮಾಣಕ್ಕೆ ತಕ್ಕಂತೆ ವ್ಯಯಮಾಡುವದು, ಅನುಭವಿಸುವದು ಸಮಾಜಿಕ ಕುಟುಂಬದ ಕ್ಷೇಮ ಕಾಪಾಡುತ್ತದೆ.
2.
ಅಂತಿಮ ಗುರಿಯದು ಅವರವರದೇ ದಾರಿ
ಮುಟ್ಟಲಾಗುವುದೇ ಅದು ಬಲು ದುಬಾರಿ,
ಸೋತವರನ್ನೂ ನಗುತ ಕಳಿಸುವದು ಸರಿದಾರಿ
ಕೊನಗೆ ಎಲ್ಲರೂ ಸಾಗುವದದೇ ಖಾತರಿ!
- ಎಮ್ಮೆಚ್ಚೆ
ವಿಸ್ತೃತ
ಯಾರ ಉದ್ದಾರವನ್ನು ಯಾರೂ ಮಾಡಲಾಗುವದಿಲ್ಲ. ಆದರೆ ಸಹಾಯಾನುಕೂಲ ಮಾಡಬಹುದು. ಎಲ್ಲರೂ ಎಲ್ಲರಿಂದ ಏನೆಲ್ಲ ಉಪದೇಶ ಕೇಳಿದರೂ ತಮ್ಮ ನಿರ್ಧಾರವನ್ನು ತಾವೇ ಅಂತಿಮಗೊಳಿಸಬೇಕು. ಹಿರಿಯರು ಹೇಳಿದಂತೆ ಕಲಿಸಿದ ಮಾತು, ಕಟ್ಟಿದ ಬುತ್ತಿ ಬಹಳ ಕಾಲ ಉಳಿಯಲಾರದು. ಆದ್ದರಿಂದ ಸ್ವಂತ ನಿರ್ಧಾರ ಅಂತಿಮವಾಗಿ ತಮ್ಮದೇ ಆಗಿರಬೇಕು. ಯಾವುದಕ್ಕೇ ಆಗಲಿ ತಾವೇ ತೆಗೆದುಕೊಂಡ ನಿರ್ಧಾರ ಆತ್ಮದಾಯಕ ಆಗಿರುವದರಿಂದ ಅದರ ನೀಗುವಿಕೆಯ ನಿರ್ಧಾರ ಶಕ್ತಿಯುತವಾಗಿರುತ್ತದೆ ಹಾಗೂ ಯಶಸ್ವಿದಾಯಕವಾಗಿರುತ್ತದೆ. ಒಬ್ಬರು ಪರರಿಗೋಸ್ಕರ ತೆಗೆದುಕೊಂಡ ನಿರ್ಧಾರಗಳು ಅಲ್ಪಕಾಲಿಕವಾಗಿರುತ್ತವೆ. ಅವು ಅಂತಿಮತೆ ಕಾಣದವುಗಳಾಗಿರುತ್ತವೆ. ಆದ್ದರಿಂದ ತಮ್ಮತನಕ್ಕೆ ತಾವೇ ಕೊನೆಯ ನಿರ್ಧಾರ ತೆಗೆದುಕೊಂಡು ಗುರಿ ಮುಟ್ಟುವದು ಒಳ್ಳೆಯದಾಗಿರುತ್ತದೆ.
ಒಂದೊಮ್ಮೆ ತಾವೇ ತೆಗೆದುಕೊಂಡ ನಿರ್ಧಾರಗಳು ಮನಸ್ವೀ ಆಗಿರದಿದ್ದಲ್ಲಿ ಯಶಸ್ವೀ ಯಾಗುವದು ಸಾಧ್ಯವಾಗದೇ ಹೋಗಬಹುದು. ಎಷ್ಟೊ ಜನ ತೆಗೆದುಕೊಂಡ ನಿರ್ಧಾರಗಳು ಗುರಿಮುಟ್ಟುವುದೇ ಇಲ್ಲ. ಏಕೆಂದರೆ ನಿರ್ದಾರ ತೆಗೆದುಕೊಳ್ಳುವದು ಸರಳ, ಅದರ ಸಾಧನೆಯ ದಾರಿ ದುರ್ಗಮವಾದುದು. ಗಟ್ಟಿ ನಿರ್ಧಾರವಿದ್ದರೆ ಎಂಥಹ ವಿಷಮ ಗಳಿಗೆಯನ್ನೂ ನೀಗಿ ಗುರಿಮುಟ್ಟಬಹುದು.ಇಲ್ಲದಿದ್ದಲ್ಲಿ ಗುರಿ ಗುರಿಯಾಗಿಯೇ ಉಳಿಯುತ್ತದೆ ಹೊರತು ನನಸಾಗುವದಿಲ್ಲ.
ಎಷ್ಟೊಜನರು, ಗಟ್ಟಿ ನಿರ್ಧಾರ, ಪ್ರಾಮಾಣಿಕ ಪ್ರಯತ್ನ ಮಾಡಿದರೂ ಸಮಾಜಿಕ ಪರೀಸ್ಥಿತಿಗಳ ಪ್ರತಿಕೂಲತೆಯಿಂದಾಗಿ ಗುರಿತಲುಪದೆ ಸೊತುಬಿಡುತ್ತಾರೆ. ಅಂಥವರನ್ನು ಯಾವುದಕ್ಕೂ ಅಪಹಾಸ್ಯಗೊಳಿಸಬಾರದು. ಅಂಥವರು ತಮ್ಮ ಜೀವನದಲ್ಲಿ ಬಹಳ ನೊಂದುಕೊಂಡವರಾಗಿರುತ್ತಾರೆ. ಅಂಥವರ ಅಸಹಾಯಕತೆಗೆ ಮರುಗಬೇಕೇ ವಿನಹ ಅಪಹಾಸ್ಯ ಮಾಡಬಾರದು. ಸಾಧಿಸಿದವರೇ ಆಗಲಿ, ಸೊತವರೇ ಆಗಲಿ ಎಲ್ಲರಿಗೂ ಸಾವು ನಿಶ್ಚಿತವಾದುದು. ಎಲ್ಲರೂ ಕಾಲನ ಕರೆಗೆ ಓ ಗೊಡಲೇಬೇಕು. ನುನುಚಿಕೊಳ್ಳುವದೆಂದೂ ಸಾಧ್ಯವಿರದ ಮಾತು. ಸಾವಿನಲ್ಲಿ ಸಮಾನರಾದ ನಾವುಗಳು ಎಲ್ಲರೊಂದಿಗೆ ಚನ್ನಾಗಿರುವದನ್ನು ಕಲಿತುಕೊಳ್ಳಬೇಕು. ಈ ಸ್ಪರ್ದಾತ್ಮಕ ಸಮಾಜದಲ್ಲಿ ಇದ್ದಾಗ ಆರೋಗ್ಯಕರ ಸ್ಪರ್ಧೆಯಿಂದ ಪ್ರಯತ್ನಮಾಡಿ ಯಶ ಸಾಧಿಸುವದು ಅನಿವಾರ್ಯ.ಸತ್ತನಂತರ ಅವರು ನಮಗೆ ಪ್ರತಿಸ್ಪರ್ದಿಗಳಲ್ಲ. ಆದ್ದರಿಂದ ಸತ್ತಮೇಲೆ ದ್ವೇಶಸಾಧಿಸದೆ ಅವರ ಉತ್ತರಾಥಿ ಕ್ರಿಯೆಗೊಳಿಸಿ ಮಾನವೀಯತೆ ಮೆರೆಯಬೇಕು ವಿನಹ ಸತ್ತಮೇಲೂ ದ್ವೆಷಸಾಧಿಸುವದು ಬಾಲಿಶತನದ್ದು.
Comments
Post a Comment
Liked the post? Don't forget to tell us, do comment.