1.

ಕರೋನ, ಕರೋನ, ಕರೋನ
ನಾವು ಕ್ಯಾ ಕರೋನಾ?
ಪಕ್ಕದಾಗ ನಿಂತೈತಿ ಮರಣ
ಏನು ಮಡಬೇಕೊ ರಮಣ!

      ನಮ್ಮ ಅಂಗ ನಂಬಿಕೆ ನಮಗಿಲ್ಲ
    ಕಣ್ಣು ತಿಕ್ಕಲ್ಲ, ಮೂಗು ಮುಟ್ಟಲ್ಲ,
ಕೆಮ್ಮು ಸೀನಲ್ಲ, ಕಿವಿ ಗಂಟಲು ನೆಟ್ಟಗಿಲ್ಲ!

        ಜಾಣರ ನಿರೀಕ್ಷೆ, ಕೋಣರ ಪರೀಕ್ಷೆ
        ಜಾರಿ ಮಾರಣ ಹೊಮದ ಸಮೀಕ್ಷೆ,
       ಬದ್ಧತೆಗಿರದವ ಕಲಿಯುವನು ಬುದ್ಧಿ
      ಆರೋಗ್ಯ ವಿಷಯ ತಿಳಿಯದವ ನಿದ್ದಿ!

ದಂಡ ಪರಿಹಾರ ತೆರಬೇಕು
ಪಾಪ ಮಾಡಿದ ಆಮೇಲೆ,
ಜಾಗ್ರತೆಯಲಿ ಜೀವಿಸಬೇಕು
ಮನುಜರಾದ ಮೇಲೆ!
                                        - ಎಮ್ಮೆಚ್ಚೆ

2.

ಎದ್ದವಗೇ ಬಿದ್ದವರೇ ಏಣಿ
ಬಿದ್ದವ ಸುದ್ದಿಯಾಗದವನೆನ್ನಿ,
ಗೆದ್ದವ ಹತ್ತಿ ಕುಳಿತಿರುವ ಮೇಣೆ
ಹೊತ್ತವರು ಅವನಿಗೆ ಕಾಣರೆನ್ನಿ!
                                             - ಎಮ್ಮೆಚ್ಚೆ

ವಿಸ್ತೃತ
  ಯಾರೇ ಸಾಧಕರು ಸಾಧಿಸಿ ಉನ್ನತ ಶ್ರೇಣಿಯಲ್ಲಿ ಜೀವಿಸುತ್ತಿದ್ದಾರೆಂದರೆ, ಅವರ ಸಾಧನೆಗೆ ಕಾರಣೀ ಭೂತರಾಗಿ, ಊರುಗೊಲಾಗಿ ಒಬ್ಬರಲ್ಲ ಒಬ್ಬರು ಇದ್ದೇಇರುತ್ತಾರೆ. ತಮ್ಮ ಸ್ಥಿತಿ-ಗತಿಗಳಿಗೂ ಮೀರಿ, ತನ್ನತನವಲ್ಲ ಮೊದಲು ಒಳ್ಳೆಯದಾಗಲಿ ಎಂದು ಹಂಬಲಿಸಿದ  ಜೀವಿಗಳು ಒಳ್ಳೆಯದಾದ ನಂತರ ಎಲೆಮರೆಯ ಕಾಯಿಯಾಗಿ ಉಳಿದು ಬಿಡುತ್ತಾರೆ. ಇತ್ತ ಅನುಕೂಲತೆ ತೆಗೆದುಕೊಂಡ ವ್ಯಕ್ತಿಗಳ ದ್ರೃಷ್ಠಿಯಲ್ಲಿ, ಸಹಾಯಮಾಡಿದ ತ್ಯಾಗಮಯಿ ಏನೂ ಸಾಧಿಸದ, ಸಮಾನನಲ್ಲದ ನಿಷ್ಕ್ರೃಷ್ಟ ವ್ಯಕ್ತಿಯಾಗಿ ಕಾಣುತ್ತಾನೆ. ತಾನು ಏಣಿ ಹತ್ತಲು ಸಹಕರಿಸಿದವರೆಲ್ಲ ಏಣಿ ಹತ್ತಲು ಯೋಗ್ಯರಲ್ಲವೆಂದು ಭಾವಿಸುತ್ತಾರೆ. ಅಂತಸ್ತುಗಳ ಸುಳಿಗೆ, ಸುತ್ತ ಹೊಗಳು ಬಟ್ಟರಿಂದ ತಮ್ಮ ನೈಜಭಾದ್ಯತೆಗಳ ಭಾವನೆಯನ್ನು ಮರೆಯುತ್ತಾರೆ. ಇತ್ತ ಶಕ್ತಿಗೂ ಮಿಕ್ಕಿ, ಉನ್ನತೀಕರಣಕ್ಕೆ ಮೆಟ್ಟಲಾದ ವ್ಯಕ್ತಿ, ತನ್ನ ಇತರೇ ಜವಾಬ್ದಾರಿಯಲ್ಲಿಯೆ ಮುಳುಗಿಹೋಗಿರುತ್ತಾನೆ. ಎದ್ದವನ  ಆ ಹಂತದ ಮನ ಖುಷಿಪಡಿಸುವಷ್ಟು ಸಮಯವಾಗಲಿ, ಮನಸ್ತಿತಿಯಾಗಲಿ ಕಳೆದುಕೊಂಡು ಬಿಟ್ಟು ದೂರದೂರವೇ ಉಳಿಯುತ್ತ ಹೋಗುತ್ತಾನೆ.
 ಇತ್ತ ಎದ್ದವ, ಅದು ಅವರವರ ಹಣೇಬರಹ ಎನ್ನುತ್ತ ಧರ್ಮ ಕರ್ಮಗಳ ಸಮಜಾಯಿಸಿಕೊಳ್ಳುತ್ತಾನೆ. ಎತ್ತರದಲ್ಲಿಂದಲೇ ದೂರದಲ್ಲಿಯದೆಲ್ಲವನ್ನೂ ಸರಿಯಾಗಿ ಗ್ರಹಿಸಿ ಪರಿಹಾರ ಕಂಡುಕೊಳ್ಳಬಲ್ಲೆನೆಂಬ ಹುಸಿ ಭ್ರಮೆಯಲ್ಲಿ ಜಂಬಕೊಚ್ಚಿಕೊಳ್ಳುತ್ತಿರುತ್ತಾನೆ. ಅವನು ಕುಳಿತ ಆ ಸ್ಥಾನದ ಗೌರವ ಹೊತ್ತುನಿಂತವರು ಎದ್ದವರ ದೃಷ್ಠಿಗೆ ಬೀಳುವುದೇ ಇಲ್ಲ. ಒಂದೊಮ್ಮೆ ದೃಷ್ಠಿಗೆ ಕಂಡರೂ ನಿಷ್ಕ್ರೃಷ್ಟರೆಂದು ತಿಳಿದುಬಿಡುತ್ತಾರೆಯೇ ಹೊರತು ಅವರಿಗೂ ಎದ್ದೇಳಲು ಸಹಕರಿಸಬೇಕೆನ್ನುವದನ್ನು ಮರೆತು ರಾಕ್ಷಸಿಗುಣ ಪ್ರದರ್ಶಿಸುತ್ತಾರೆ. ಅವರೂ ತನ್ನಂತೆ ಎದ್ದುಬರದಿರಲೆಂದು ಇನ್ನೂ ಹೆಚ್ಚು ಭಾರ ಮಾಡುವಂತೆ ವ್ಯರ್ಥ ಪ್ರಯತ್ನ ಮಾಡುತ್ತಲೇ ಇರುತ್ತಾರೆ ಅದು ಸಾಧ್ಯವಾಗುವದಿಲ್ಲ ಎಂದು ತಿಳಿದೂ..!

Comments

Popular Posts