1.

ತೊಳೆತೊಳೆದು ರಾಜಕಾರಣಿಯ ತಿಕವ
ಪಡೆದನವ ಜೀವನಕೆ ಭಾರೀ ಸುಖವ,
ಕೆದಕೆದಕಿ ತೆಗೆದನಲ್ಲ ಒಳ ಪ್ರಬೇಧ
ಎಲ್ಲದಕೂ ಆದನವ ಭಾರೀ ವಿರೋಧ!
                                                         - ಎಮ್ಮೆಚ್ಚೆ

ವಿಸ್ತೃತ
ಸರಕಾರದ ಆಡಳಿತದ ಎಲ್ಲಾರಂಗಗಳಲ್ಲೂ ಸಮಾಜಸೇವೆ ಎನ್ನುವ ನೆಪದಿಂದ  ರಾಜಕಾರಣಿಗಳ ಕ್ರೃಪಾಪೋಸಿತತನಕ್ಕಾಗಿಯೇ ಕೆಲವು ಹುದ್ದೆಗಳು ಮೀಸಲಾಗಿರುತ್ತವೆ. ಅವರ ಪಕ್ಷದ ಚೇಲಾಗಳಿಗೆ ಏನೊಂದೂ ಅರ್ಹತೆಗಳಿರದಿದ್ದರೂ ತಮ್ಮ ಸ್ಥಾನ 
ವನ್ನು ಪಡೆದುಕೊಂಡು ದುರಾಡಳಿತ ನಡೆಸುತ್ತಾರೆ. ರಾಜಕಾರಣಿಗಳೂ ಸ್ವಾರ್ಥಿಗಳಾಗಿರುವದರಿಂದ ತಮ್ಮ ಆಸೆ ಆಕಾಂಕ್ಷೆಗಳನ್ನು ನೆರವೇರಿಸುವ, ತಮ್ಮ ಮಾತುಕೇಳುವಂತವರನ್ನೇ ಇಂತದವುಗಳಿಗೆ ಉಪಯೋಗಿಸಿಕೊಳ್ಳುತ್ತಾರೆ. ಬೇರೆಯವರು ಕ್ಷಮತೆಯುಳ್ಳವರಾಗಿದ್ದರೂ ಅಂತವರನ್ನು ಗಮನಿಸುವದಿಲ್ಲ. ರಾಜಕಾರಣಿಗಳಿಗೆ ಬೇಕಾಗಿರುವದು ದಕ್ಷತೆಯುಳ್ಳ ಪ್ರಾಮಾನಿಕರಲ್ಲ. ಅವರಿಗೆ ತಮ್ಮೆಲ್ಲ ಅವ್ಯವಹಾರಕ್ಕೆ ಸಹಕರಿಸುವವರು ಬೇಕಾಗಿರುತ್ತದೆ. ಇಂಥಹ ರಾಜಕಾರಣಿಗಳು ಲಾಲಸೆ ಪಟ್ಟದ್ದಕ್ಕೂ ಹೆಚ್ಚು ಚಮಚಾಗಿರಿ ಮಾಡಿ ಏನೂ ಜ್ಞಾನವಿಲ್ಲದಿದ್ದರೂ ನೇಮುನಿಕೆಯ ಹುದ್ದೆಗಳನ್ನು ಗಿಟ್ಟಿಸಿಕೊಂಡು ಲಂಚ ಋಸುವತ್ತುಗಳಿಂದ ಸಾಕಷ್ಟು ಹಣ ಗಳಿಸುತ್ತಾರೆ. ಮತ್ತು ಐಶಾರಾಮಿ ಸವಲತ್ತುಗಳಿಂದ ಬದಕುತ್ತಾರೆ.
ಎಲ್ಲ ರಂಗಗಳಲ್ಲೂ ನುರಿತ ಯೋಗ್ಯ ಪ್ರಾಮಾಣಿಕ ಕೆಲಸಗಾರ ವ್ಯಕ್ತಿಗಳಿರುತ್ತಾರೆ. ಆದರೆ ಅವರು ಯಾವುದೇ ಪಕ್ಷದ ರಾಜಕಾರಣಿಯನ್ನು ಓಲೈಸುವವರಾಗಿರದೆ ಸಮಾಜ ಸ್ವಾಸ್ಥ್ಯಕ್ಕೆ ಬಡಿದಾಡುವಂತವರಾಗಿರುತ್ತಾರೆ.ಅಂಥವರಿಂದ ರಬ್ರಷ್ಟ ಆಡಳಿತಗಾರರಿಗೆ ಬಹಳ ತೊಂದರೆ ಉಂಟಾಗುತ್ತದೆ ಆದ್ದರಿಂದ ಎಲ್ಲ ಡೊಂಗೀ ಸಮಾಜಸೇವಕ ನಾಯಕರುಗಳು ಇಂಥವರನ್ನು ಕಂಡರೆ ವಿರೋಧಿಸುತ್ತಾರೆ. ನೌಕರರುಗಳೂ  ಬ್ರಷ್ಟಾಚಾರದಲ್ಲಿ ಶಾಮೀಲಿರುವದರಿಂದ  ಇವರೊಂದಿಗೆ ಅವರೂ ವಿರೋಧಿಸುತ್ತಾರೆ. ಎಲ್ಲರೀತಿಯ ಯೋಗ್ಯತೆಗಳಿದ್ದರೂ ತಮ್ಮ ಸತ್ಯ ಪ್ರಾಮಾಣಿಕತೆಗಳಿಂದ  ಇದ್ದ ತಮ್ಮತನಗಳೂ ಕೆಲವು ರಂಗಗಳಲ್ಲಿ ಬೆಲೆ ಕಳೆದುಕೊಳ್ಳುತ್ತವೆ.

2.

ಬರೆದವರೆಲ್ಲ ಕವಿಯೇನಲ್ಲ
ಕೊರೆದವರು ಸಂಗೀತಕಾರನಲ್ಲ,
ಓದುಗ ಅವ ಅಕ್ಷರಾಭಿಮಾನಿ
ನೋಡುಗನವ  ಕಲಾಭಿಮಾನಿ!
                     ಎಮ್ಮೆಚ್ಚೆ

ವಿಸ್ತ್ರುತ
    ಬಹುತೇಕ ವಿದ್ಯಾವಂತರು ತಮ್ಮ ಮನದ ಭಾವನೆಗಳನ್ನು ಬರಹದ ಮೂಲಕ ವ್ಯಕ್ತ ಪಡಿಸುತ್ತಾರೆ. ಶಬ್ದಗಳು ಅಕ್ಷರ ಬಲ್ಲವರ ಆಟಿಕೆ. ಅವರವರ ಮನೋಭಾವನೆಗಳಂತೆಯೇ ಅವರ ಬರವಣಿಗೆಯ ಶೈಲಿಯೂ ಇರುತ್ತದೆ. ಬರವಣಿಗೆಗಳ ಹಿಂದೆ ಒಂದು ಬಲವಾದ ಉದ್ದೇಶ ಇದ್ದೇ ಇರುತ್ತದೆ. ಆದರೆ ಎಲ್ಲ ಬರವಣಿಗೆಗಳೂ ಜನರನ್ನು ಆಕರ್ಷಿಸುವಂತಹದ್ದವು ಆಗಿರುವದಿಲ್ಲ. ಅಕ್ಷರಕ್ಕಾಗಿಯೇ ಸಮರ್ಪಿಸಿಕೊಂಡ ಕವಿಗಳಿಗಿಂತಲೂ ಚನ್ನಾಗಿ, ವಿಷಯಾದರಿತವಾಗಿ ಬೇರೆಯವರೂ ಬರೆಯಬಹುದು ಆದರೆ ಅವರು ಕವಿಗಳಾಗಿರಲೇ ಬೇಕಂತ ಏನಿಲ್ಲ. ಕವಿತ್ವವನ್ನು ಪಡೆದುಕೊಂಡವರು ಮಾತ್ರ ಕವಿಗಳಾಗುತ್ತಾರೆ. ಉಳಿದವುಗಳು ಕೇವಲ ಬರಹಗಳಾಗಿಯೇ ಉಳಿದುಬಿಡುತ್ತವೆ.
 ರಾಗ, ತಾಳಗಳು ಸಂಗೀತಕ್ಕೆ ಜೀವಾಳ. ಹಾಗೆಂದು ಎಲ್ಲಾತರಹದ ರಾಗ, ತಾಳಗಳು ಸಂಗೀತವಾಗಲಾರವು. ಸಂಗೀತಕ್ಕೆ ಲಯಬದ್ದವಾದ, ಮನಸೂರೆಗೊಳ್ಳುವ ರಾಗ, ತಾಳಗಳು ಮೇಳೈಸಿದಾಗ ಮಾತ್ರ ಸಂಗೀತವಾಗುತ್ತದೆ. ಮನಮೊಹಕತೆಗೊಳಿಸಿದಾಗ ಮಾತ್ರ ಸುಮಧುರ ಸಂಗೀತವಾಗುತ್ತದೆ. ಅಪಸ್ವರಗಳಿಂದ ಹೊಮ್ಮಿದ್ದು ಸಂಗೀತವಲ್ಲ. ಯಾರು ಬರಹದ ಪ್ರೇಮಿಗಳಾಗಿರುತ್ತಾರೊ ಅವರು ಸಾಹಿತ್ಯಾಭಿಮಾನಿಗಳು ಆಗಿರುತ್ತಾರೆ. ಅಂತಹ ಸಾಹಿತ್ಯಗಳನ್ನೆಲ್ಲ ಇಷ್ಟಪಡುವವರೆಲ್ಲ ಅಕ್ಷರದ ಅಭಿಮಾನಿಗಳೂ ಆಗಿರುತ್ತಾರೆ. ಸಿನಿಮಾ, ನಾಟಕ, ಮನರಂಜನೆಗಳಂತಳ ಬೇರೆ ಬೇರೆ ಕಲೆಗಳನ್ನು ಇಷ್ಟಪಡುವ ವ್ಯಕ್ತಿ, ಅಲ್ಲಿಯ ಕಲೆಯನ್ನು ಒಪ್ಪಿ ಅಪ್ಪಿಕೊಂಡು ಕಲಾಭಿಮಾನಿಯಾಗಿರುತ್ತಾನೆ. ಒಳ್ಳೆಯ ಕಲಾವಿದರನ್ನು ಮೆಚ್ಚಿ ತನ್ನ ಸಂತಸ ವ್ಯಕ್ತಪಡಿಸುತ್ತಾನೆ.

3.

ಎಲ್ಲ ತಿಳಿಯಲಾ ದೇವನಲ್ಲ
ಅರಿಯಲಾ ಸರ್ವಜ್ಞನಲ್ಲ,
ದುಗಡತೆಗೆ ತಳ್ಳಿತು  ಚಿಲ್ಲರೆ ಮಧ್ಯ
ಕುಡಿದವನು ಹಾಡಿದನು ಸತ್ಯದ ಪದ್ಯ!
                             ಎಮ್ಮೆಚ್ಚೆ

ವಿಸ್ತ್ರುತ
    ಈ ವಿಶಾಲ ಬ್ರಹ್ಮಾಂಡದ ಎಲ್ಲಾ ವಿಷಯಗಳನ್ನು ಯಾರೊಬ್ಬನೂ ತಿಳಿದುಕೊಂಡಿರಲಿಕ್ಕೆ ಸಾಧ್ಯವೇ ಇಲ್ಲ. ಕೆಲವರು ಹೆಚ್ಚು ವಿಷಯಗಳನ್ನು ತಿಳಿದುಕೊಂಡಿರಬಹುದು, ಇನ್ನು ಕೆಲವರು ಇನ್ನೂ ಸ್ವಲ್ಪು ಹೆಚ್ಚು ತಿಳಿದುಕೊಂಡಿರಬಹುದಷ್ಟೇ. ಎಲ್ಲ ವಿಷಯವನ್ನು ಚನ್ನಾಗಿ ತಿಳಿದುಕೊಂಡವನು ಜಗತ್ತನ್ನು ಸ್ರೃಷ್ಠಿಸಿದ ಶಕ್ತಿದೇವ ಮಾತ್ರ. ಈ ಜಗತ್ತಿನ ವಿಸ್ಮಯಗಳನ್ನೆಲ್ಲ, ತಮ್ಮ ಅನುಭವದ ತೀಕ್ಷ್ಣ ಬುದ್ದಿಯಿಂದ ಅರಿತುಕೊಂಡು ಸಮಾಜ ಉದ್ದಾರ ಮಾಡುವದು ಸರ್ವಜ್ಞರಿಗೆ ಮಾತ್ರ ಸಾಧ್ಯ. ಆಡು ತಿನ್ನದ ಸೊಪ್ಪಿಲ್ಲ ಎನ್ನುವಂತೆ ಸರ್ವಜ್ಞರು ಜಗತ್ತಿನೆಲ್ಲ ವಿಷಯತನಗಳನ್ನೆಲ್ಲ ಅರಿತುಕೊಂಡಿದ್ದಾರೆ.
    ಮನುಷ್ಯ ಅಂತಿಮ ಸದ್ಗತಿ ಪಡೆದುಕೊಳ್ಳಲು ನಾನಾ ತರಹದ ಮಾರ್ಗಗಳಿವೆ. ಅವುಗಳಲ್ಲಿ ಕೆಲವು ಮಾರ್ಗದ ಪಂಥಗಳಿಗೆ ಮಾದಕ ದ್ರವ್ಯಗಳ ಸೇವನೆ, ತನ್ನನ್ನು ತಾನು ಅರಿತುಕೊಂಡು ಪರಮಾತ್ಮನಲ್ಲಿ ಲೀನವಾಗಲು ಸಹಾಯಕವಾದುದಾಗಿರುತ್ತದೆ. ಅವು ನಿಷಿದ್ಧವಲ್ಲ ಈ ಮಾದಕ ವಸ್ತುಗಳು ಮನುಷ್ಯನನ್ನು ಬ್ರಮಾದೀನತೆಗೆ ಒಯ್ಯುವುದರೊಂದಿಗೆ ಮನಸಿಗೆ ಅವ್ಯಕ್ತ ಉತ್ತೇಜಿತ ನೆಮ್ಮದಿಯನ್ನು ಕೊಡುತ್ತದೆ. ಮನುಷ್ಯರ ದೇಹ ಮತ್ತು ಮನಸಿನ ಕ್ಷಮತೆಗೆ ವೈದ್ಯಕೀಯ ಶಾಸ್ತ್ರದಂತೆ ಅಲ್ಕೊಹಾಲ್ ತಕ್ಕ ಪ್ರಮಾಣದಲ್ಲಿ ಬೇಕೇಬೇಕು. ಆದರೆ ಮನಸ್ಸು ಅಷ್ಟು ಸುಲಭವಾಗಿ ಯಾರ ಕೈಗೂ ಸಿಕ್ಕುವದಿಲ್ಲ. ಹೀಗಾಗಿ ಬಹಳ ಜನ ವ್ಯಸನಿಗಳಾಗುತ್ತಾರೆ. ಸರಳ ಆಡಳಿತಕ್ಕೆ ವ್ಯಸನಿಗಳ ಕೊಡುಗೆ ಅಧಿಕವಾದುದರಿಂದ ಗಲ್ಲಿಗಲ್ಲಿಗಳಿಗೆ ವ್ಯಾಪಾರೀ ಮಳಿಗೆಗಳನ್ನಿಡಲು ಮತ್ತು ಸೇವಿಸಲು ಸರಕಾರಗಳೇ ಹೆಚ್ಚು ಉತ್ತೇಜಿಸುತ್ತವೆ. ಜನರ ಸುರಕ್ಷತೆಗಳ ಬಗ್ಗೆ ಮಾತನಾಡುತ್ತಲೇ ವ್ಯಸನಿಗಳನ್ನಾಗಿಸುತ್ತಾರೆ. ಚಟಗಾರರಾಗಲು ನಾನಾ ವಿಷಯಗಳು ಕಾರಣವಾಗಿರುತ್ತವೆ. ತಿಳುವಳಿಕೆಯುಳ್ಳ ಸಂಸಾರಿಕ ಚಟಗಾರರು ತಮ್ಮ ಘಣತೆ ಗೌರವವನ್ನು ಸಾಮಾಜಿಕವಾಗಿ ಇಟ್ಟುಕೊಂಡು ಪ್ರಜ್ಞಾಸ್ಥಿತಿಯಲ್ಲಿ ಚಟ ಮಾಡುತ್ತಾರೆ. ವ್ಯಸನಿಗಳು ಮಾನ, ಗೌರವಗಳನ್ನೇನೂ ನೊಡುವದಿಲ್ಲ. ಅದರಲ್ಲೂ ,ನಾನಾ ತರಹದ ರಾಸಾಯನಿಕ ಮಿಶ್ರಿತ ಚಿಲ್ಲರೇ ಮಧ್ಯ ವ್ಯಕ್ತಿಯ ಮೈ, ಮಾತು, ಮನಸುಗಳ ನಿಯುಂತ್ರಣವನ್ನು ಬಲುಬೆಗನೇ ಮಾಡಿಬಿಡುತ್ತದೆ. ತನ್ನ ನಿಯಂತ್ರಣ ತನಗಿಲ್ಲದ ಗಳಿಗೆಯಲ್ಲಿ ಚಟಗಾರ ತನ್ನ ಮನಸ್ಸಿನ ಸತ್ಯವಾದ ಭಾವನೆಗಳನ್ನು ನುಡಿದುಬಿಡುತ್ತಾನೆ. ಚನ್ನ ಮಾತಿನಿಂದ ಇನ್ನೊಬ್ಬರಿಗೆ ನೊವಾಗಬಹುದೆಂದು ತಿಳಿದುಕೊಳ್ಳುವುದಿಲ್ಲ. ತಾನು ಎಲ್ಲಾಬಲ್ಲೆ ಎಂದು ಬೀಗುತ್ತಾನೆ. ಆದರೆ ತನ್ನ ಸ್ವಂತ ಮರ್ಯಾದೆ ಹೊಗುತ್ತದೆಂದು ತಿಳಿಯುವುದೇ ಇಲ್ಲ. ತಮ್ಮ ಮನಸಿನ ನೈಜ ಭಾವನೆಗಳನ್ನು ನಿಯಂತ್ರಣ ರಹಿತವಾಗಿ ಮಾತನಾಡಿಬಿಡುತ್ತಾರೆ. ಅದಕ್ಕಾಗಿಯೇ ಕುಡಿದವರು ಸತ್ಯವನ್ನು ಹೇಳುತ್ತಾರೆ ಅನ್ನುವ ಗಾದೆಮಾತು ಇರುವದು.

Comments

Popular Posts