1.
ಪಡೆಯುವುದಕಾಗಿಯೇ ಏನೆಲ್ಲ
ಹೊಸ ಕಸರತ್ತುಗಳೂ ಏನೇನೆಲ್ಲ,
ಏನೂ ಮಡದಿದ್ದುದಕ್ಕೇ ಬೆಲೆಕೊಟ್ಟು
ಭಾರೀ ಗರತಿ,ದ್ಯಾನಗಳ ಒಳಗುಟ್ಟು!
- ಎಮ್ಮೆಚ್ಚೆ
ವಿಸ್ತೃತ
ಜನರು ತಮ್ಮ ಮನೋಭಿಲಾಸೆ ಈಡೇರಿಸಿಕೊಳ್ಳಲು ಬಹಳ ತೊಂದರೆದಾಯಕ ಶ್ರಮವಹಿಸುತ್ತಾರೆ. ಪ್ರಯತ್ನ ಪಡದ ಹೊರತು ಯಾವುದನ್ನೂ ಸುಲಭವಾಗಿ ಪಡೆದುಕೊಳ್ಳುವದು ಆಗುವದಿಲ್ಲ. ತಮ್ಮ ಬುದ್ದಿಮತ್ತೆ ಉಪಯೋಗಿಸಿ ಹೊಸಹೊಸ ಉಪಾಯಗಳನ್ನು ಅಳವಡಿಸಿಕೊಂಡು ಸಾಕಷ್ಟು ತೊಂದರೆ ತೆಗೆದುಕೊಂಡು ತಮ್ಮ ಮನಸಿನ ಬಯಕೆ ಈಡೇರಿಸಿಕೊಳ್ಳಬೇಕಾಗುತ್ತದೆ. ಇಷ್ಟು ತೊಂದರೆದಾಯಕವಾಗಿದ್ದರೂ ಮನಸು ಪಡೆದುಕೊಳ್ಳುವತ್ತಲೇ ಓಡುತ್ತದೆ. ಆದರೆ ಈ ಸಮಾಜದಲ್ಲಿ ಎಲ್ಲದ್ದಕ್ಕೂ ಹೆಚ್ಚು ಘಣತೆ, ಗೌರವ ಇರುವುದು ಗರತಿಯರಾಗಿ ಬಾಳುವುದರಲ್ಲಿ ಮತ್ತು ದ್ಯಾನಾಸಕ್ತರಾಗುವುದರಲ್ಲಿ ಮಾತ್ರ. ಇವೆರಡೂ ಕ್ರಿಯೆಗಳು ಎಷ್ಟು ಸುಲಭವಾಗಿವೆ ಎಂದರೆ ಇವುಗಳ ಗುರಿ ಮುಟ್ಟಲು ಏನೇನೂ ತೊಂದರೆ ಪಡಬೇಕಿಲ್ಲ ಕೇವಲ ಹೆಚ್ಚಿನದೇನನ್ನೂ ಮಾಡದೆಯೇ ನಿರಂತರವಾಗಿ ತಮ್ಮಷ್ಟಕ್ಕೇ ತಾವಿದ್ದರೂ ಗುರಿ ತಲುಪಬಹುದು. ಆದರೆ ಮಾನವರ ಮನಸುಗಳು ಮರ್ಕಟದ ತರಹ ಸ್ಥೀಮಿತವಾಗಿರುವದಿಲ್ಲ. ತಮ್ಮ ವ್ಯರ್ಥ ಪ್ರಯತ್ನಗಳಿಂದ ಸುಲಭವಾಗಿ ಸುಮ್ಮನೇ ಒಲಿದುಬರುವ ಸಾದಕ ಗೌರವಗಳನ್ನೂ ಕಳೆದುಕೊಂಡು ಸಮಾಜದಲ್ಲಿ ಮರ್ಯಾದೆಹೀನರಾಗುತ್ತಾರೆ.
2.
ವಂದನೆಗೆ ಸರಿಯಲ್ಲ ವಂಚಿಸಿದ ಆ ಗುರುವುಸಲ್ಲದ್ದದು ತಂದೆ ತಾಯಿಯ ಪೀಡಕತನವು,ಉಳಿಸಿ ಹೋಗಬೇಕಿಲ್ಲಿ ಸ್ವಂತ ಗುರುತನು,ಸದ್ಗತಿಗೆ ಸಲ್ಲುವನು ಎಂದೆಂದಿಗೂ ಅವನು!
- ಎಮ್ಮೆಚ್ಚೆ
ವಿಸ್ತೃತ
ಈ ಜಗತ್ತಿಗೆ ಬರಲು ಕಾರಣೀಬೂತರಾದಂತಹ ತಂದೆತಾಯಿಗಳು, ಎಲ್ಲ ತಿಳುವಳಿಕೆ ಮೂಡಿಸುವ ಗುರುವು ದೇವರಿಗೆ ಸಮಾನವಾದ ವ್ಯಕ್ತಿತ್ವ ಉಳ್ಳವರಾಗಿರುತ್ತಾರೆ. ದೇವರಂತೆ ಪೂಜ್ಯತೆಗೆ ಯೋಗ್ಯತೆಯುಳ್ಳವರಾಗಿರುತ್ತಾರೆ. ಹರ ಮುನಿದರೂ ಗುರು ಕಾಯುವ ಎನ್ನುವಂತೆ ಗುರುವು, ಈ ಲೋಕದ ಜ್ಞಾನ ತಿಳಿಸಿ ಬದುಕುವ ದಾರಿಯನ್ನು ತೋರಿಸಿ ಕಾಪಾಡುತ್ತಾನೆ. ಗುರುವಿಗೆ ತನ್ನ ಶಿಷ್ಯರನ್ನ ಜ್ಞಾನವನ್ನು ನೀಡಿ ಸರಿಯಾದ ರೀತಿಯಿಂದ ಬದುಕುವಂತೆ ಮಾಡುವ ಗುರುತರವಾದ ಹೊಣೆಯಿರುತ್ತದೆ. ಆದರೆ ಕೆಲವರು ಗುರುಗಳೆನಿಸಿಕೊಂಡವರು ತಮ್ಮ ಹೊಣೆಗಾರಿಕೆಯನ್ನು ಸರಿಯಾಗಿ ನಿಭಾಯಿಸದೆ. ಶಿಷ್ಯಂದಿರ ಏಳಿಗೆಗೆ ಮಾರಕವಾಗಿಬಿಡುತ್ತಾರೆ. ಗುರುಗಳು ನಿಂತು ಮೂತ್ರ ಮಾಡಿದಲ್ಲಿ ಅವರ ಶಿಷ್ಯಂದಿರು ಓಡಾಡುತ್ತ ಮೂತ್ರ ವಿಸರ್ಜಿಸುವಂತ ಸಮಾಜಿಕ ಮಲೀನವಂತರಾಗುತ್ತಾರೆ. ಇಂಥಹ ಗುರುವು ತನ್ನ ಶಿಷ್ಯರ ಜೀವನವನ್ನು ಹಾಳುಮಾಡಿರುತ್ತಾರೆ. ಶಿಷ್ಯರಿಗೆ ತಾವು ವಯಸ್ಕರಾಗಿ ತಿಳುವಳಿಕೆ ಬಂದಮೇಲೆ, ತಮ್ಮ ಜೀವನ ಇಂಥಹ ಗುರುವಿನಿಂದ ಹಾಳಾಯಿತು ಎಂದು ತಿಳಿದುಕೊಳ್ಳುತ್ತಾರೆ. ಆದರೆ ಸುಧಾರಿಸಲು ಸಾಧ್ಯವಾಗದ ಹಾಗೆ ಕಾಲ ಗತಿಸಿರುತ್ತದೆ. ಅಂಥವರೆಲ್ಲ ತಮ್ಮ ಗುರುಗಳಿಗೆ ನಮಿಸುವದಿರಲಿ ಕನಿಷ್ಠ ಗೌರವವನ್ನೂ ಕೊಡುವದಿಲ್ಲ. ಆ ಗುರುವು ಅಂಥ ಗೌರವಕ್ಕೆ ಯೋಗ್ಯನಾಗಿರುವದಿಲ್ಲ.
ಹುಟ್ಟಿಗೆ ಕಾರಣರಾದ ಜನ್ಮದಾತರು ಮಕ್ಕಳ ಲಾಲನೆ, ಪೋಷನೆ ಮಾಡಲು ಶಕ್ತಿಮೀರಿ ಪ್ರಯತ್ನಪಟ್ಟಿರುತ್ತಾರೆ. ಅದೇ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ತಂದೆತಾಯಿಗಳ ಯೋಗಕ್ಷೇಮ ನೋಡಿಕೊಳ್ಳದೆ ಬೀದಿ ಪಾಲಾಗಿಸುತ್ತಾರೆ. ತಮ್ಮ ಮಕ್ಕಳೂ ತಮ್ಮ ಮುಪ್ಪಾವಸ್ತೆ ತಲುಪಿದಾಗ ಇದೇ ತೆರನಾಗಿ ಮಾಡುತ್ತಾರೆನ್ನುವದನ್ನು ತಿಳಿದುಕೊಳ್ಳುವದಿಲ್ಲ. ಇದ್ದಾಗ ಸರಿಯಾಗಿ ನೋಡಿಕೊಳ್ಳದ ಮಕ್ಕಳು ಪಾಲಕರು ಸತ್ತ ಮೇಲೆ ದೊಡ್ಡ ಭಾವಚಿತ್ರ, ಹೂವಿನ ಹಾರಹಾಕಿ ಡಾಂಬಿಕ ಪ್ರೀತಿ ತೋರಿಸುತ್ತಾರೆ. ಇಂಥವರಿಗೆ ಯಾವುದೇ ರೀತಿ ಸದ್ಗತಿ ಸಿಗುವದಿಲ್ಲ ಎಂದು ತಿಳಿದುಕೊಳ್ಳುವುದೇ ಇಲ್ಲ. ಬುದ್ದಿಯುಳ್ಳ ಮನುಷ್ಯರಾಗಿ ಜನ್ಮಪಡೆದ ಮಾನವರಾದ ನಾವುಗಳು ಈ ಜಗತ್ತಿನ ಮನುಕುಲಕ್ಕೆ ಕೈಲಾದ ಮಟ್ಟಿಗೆ ಏನಾದರೂ ಒಳಿತನ್ನು ಮಾಡಬೇಕು. ಸಮಾಜಿಕಾಭಿವ್ರೃದ್ದಿಗೆ ನಮ್ಮ ಸದುದ್ದೇಶತನಗಳನ್ನು ಮುಂದಿನ ಪೀಳಿಗೆ ನೆನಸಿಕೊಳ್ಳುವರೀತಿ ಸಮಾಜದಲ್ಲಿ ನಮ್ಮತನಗಳನ್ನು ಉಳಿಸಿಹೋಗಬೇಕು. ನಾಳೆ ನಾವು ಗತಿಸಿ ಹೋದರೂ ನಮ್ಮ ಒಳ್ಳೆಯತನದ ಕೆಲಸಗಳು ಶಾಶ್ವತವಾಗಿ ಜನಮನದಲ್ಲಿ ಹಾಸುಹೊಕ್ಕಾಗುವಂತೆ ಬದುಕಬೇಕು. ಬದುಕಿನಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕು.
3.
ತುರುಕೆಯದು ಬಲು ಬೆರಕಿ ಬೆನ್ಹತ್ತಿದ ಸವತಿ
ಇದ್ದ ದೊರೆತತೆ ಅದು ಮಾಗಿ ಹೋಗುವ ಅನತಿ,
ಹೇಳದ ಹಿತವದು ಕೆದಕಿ ಗೀಚುವಾ ಉಮೇದಿ
ಒಣಗುವ ವ್ರಣದ ಚಿಗುರಾಗಿಸುವ ಉನ್ಮಾದಿ!
- ಎಮ್ಮೆಚ್ಚೆ
ವಿಸ್ತ್ರೃತ
ಹಿಂದೂ ಕಾನೂನಿನಂತೆ ಯಾರೇ ಆಗಿರಲಿ ಗಂಡನ, ಹೆಂಡತಿಯ ಜೀವಂತಿಕೆಯಲ್ಲಿ ಕಾನೂನು ಮಾನ್ಯತೆಯ ಹೊರತು ಪರರನ್ನು ವಿವಾಹ ಮಾಡಿಕೊಳ್ಳುವಂತಿಲ್ಲ. ಆದರೂ ಸಹ ತಿಳಿದೊ, ತಿಳಿಯದೆಯೊ ಎಷ್ಟೊ ಜನ ಎರಡನೆಯ ಮದುವೆಯಾಗಿರುವದಾಗಿ ಹೇಳಿಕೊಳ್ಳುತ್ತಾರೆ. ತಾವು ಪರರ ಜೀವನದಲ್ಲಿ ಅನಧಿಕೃತ ಪ್ರವೇಶ ಮಾಡಿದ್ದೇನೆ, ತಾನು ಮಾಡಿದುದು ತಪ್ಪು ಮೊದಲನೆಯವಳೊಂದಿಗೆ ಯಾವುದೇ ಕೊರತೆ ಬಾರದಂತೆ, ಇವಳ ಒಳ್ಳೆಯ ನಡೆಗಳಿಂದ ಜನ ಮಾನ್ಯತೆಪಡೆದು ಲೋಕ ಮೆಚ್ಚುವಂತೆ ಬದುಕಬೇಕೆಂದು ತಿಳಿದುಕೊಳ್ಳುವುದೇ ಇಲ್ಲ. ತಾನೂ ಕಾನೂನು ಬದ್ದ ಹಕ್ಕುದಾರಳು ಎಂದು ವಿವಾಹವನ್ನು ತಪ್ಪಾಗಿ ತಿಳಿದುಕೊಂಡಿರುತ್ತಾರೆ. ಗಂಡ ತನ್ನಲ್ಲಿಯೇ ಇರಬೇಕೆನ್ನುವ ಉಮೇದಿಗಿಂತ ಮೊದಲನೆಯವಳಲ್ಲಿಗೆ ಹೋಗಬಾರದೆಂಬ ಉಮೇದಿಯಲ್ಲಿರುತ್ತಾಳೆ. ಅದರಂತೆ ಕೆಲವರು, ಘಟಿಸಿ ಹೋದ ಅವಘಡದ ಕೆಟ್ಟ ಗಳಿಗೆಯನ್ನು ವಿನಾಕಾರಣ ಮನಸಿನಲ್ಲಿಟ್ಟುಕೊಂಡು ಮತ್ತೆ ಮತ್ತೆ ಕೆದಕುತ್ತ ಎಲ್ಲರ ಮನಸೂ ನೋಯುವಂತೆ ಮಾಡುತ್ತಾರೆ. ಅವಘಡ ಕಳೆದು ಒಳ್ಳೆಯವರಾಗುವದು ಅವರಿಗೆ ಬೇಕಿರುವದಿಲ್ಲ. ಗಾಯವಾಗಿ ಒಣಗುವ ಸಮಯದಲ್ಲಿ ಆ ಗಾಯದ ಸುತ್ತ ಉಜ್ಜುವದು, ಕೆರೆಯುವುದರಿಂದ ಒಂದು ತರಹ ಅವ್ಯಕ್ತ ಆನಂದ ಉಂಟಾಗಿ ಅವಶ್ಯಕತೆ ಇಲ್ಲದಿದ್ದರೂ ಸಹ ಮನಸಿನ ಉನ್ಮಾದತೆ ಅನುಭವಿಸಲು ಅದರ ಮೇಲೆ ಕೈ ಆಡಿಸಿ ಕೆರೆದುಕೊಂಡು ಬಿಡುತ್ತಾರೆ. ಆಗಿ ಹೋದದ್ದನ್ನು ಪುನಹ ಕೆದಕುತ್ತ ಘಟನೆಯ ವೈರತ್ವದ ಸೇಡಿನ ಬಗ್ಗೆ ಜ್ಞಾಪಿಸುತ್ತ ಹೋಗುತ್ತಾರೆ. ಕೆಲವು ವೇಳೆ, ಜನಗಳೆದರು ಮುಜುಗುರ ಉಂಟಾಗುತ್ತದೆಂದರೂ ಲಜ್ಜೆಗೆಟ್ಟು ಲೆಕ್ಕಿಸದೇ ಹೋಗುತ್ತಾರೆ ಮನೋ ನೆಮ್ಮದಿ ಉಂಟಾಗಿ ಹೊಸದಾಗಿ ಬರುತ್ತಿರುವ ನುನುಪಾದ ಚರ್ಮವನ್ನು ತಿಕ್ಕಿ ಬೇಗನೇ ಗಾಯಗೊಳಿಸಿ ಒಣಗುತ್ತಿರುವ ಗಾಯಕ್ಕೆ ಘಾಸಿಗೊಳಿಸಿ ಮತ್ತೆ ಹೊಸದಾಗಿ ಗಾಯವಾಗುವದನ್ನು ಬರಿಸಿಕೊಂಡು ಲಾಭ ಸಹಿತ ವಿಕ್ರೃತ ಸುಖ ಅನುಭವಿಸುವ ಮನೋನಿಗ್ರಹ ರಹಿತ ಜನರು ಸಾಕಷ್ಟಿದ್ದಾರೆ.
4.
ಯಾರಿಗೆ ಯಾವ ಘಮ ಎಲ್ಲರಳಿದೆಯೋ ಸುಮ
ಕಾಮನ ತೋಟದ ಕಸ್ತೂರಿಗೆ ಯಾರಿಹರು ಸಮ,
ಕತ್ತೆಗೂ ಬೇಕಿಲ್ಲದ ದೂಮದ ದರಿದ್ರ ಘಮ
ಬೇಕಿಲ್ಲದೇ ಬೇಡುತ್ತಿದೆ ಹಾರಾಡುವ ಭ್ರಮ!
- ಎಮ್ಮೆಚ್ಚೆ
ವಿಸ್ತ್ರೃತ
ನಿಸರ್ಗದಲ್ಲಿ ನಾನಾ ತರಹದ ಹೂವುಗಳು. ಒಂದೊಂದು ಹೂವಿಗೂ ಒಂದು ರೀತಿಯ ಸುವಾಸನೆ. ಎಲ್ಲ ಸುವಾಸನೆಗಳು ಎಲ್ಲರಿಗೂ ಇಷ್ಟವಲ್ಲ. ಜೊತೆಗೆ ಕೆಲವರಿಗೆ ದುಷ್ಪರಿಣಾಮ ಬೀರುತ್ತದೆ. ಎಲ್ಲರಿಗೂ ಅವರಿಗವರಿಗೆ ಇಷ್ಟವಾದ ಪರಿಮಳ ಚೇತೋಹಾರಿಗಳನ್ನಾಗಿ ಮಾಡುತ್ತದೆ. ಯಾರು ಮೆಚ್ಚಿ ಇಷ್ಟಪಡುವುದು ಹೂಗಳಿಗೆ ಮುಖ್ಯವಲ್ಲ. ಸುವಾಸನೆ ಬೀರಿ ಚೇತೋಹಾದಿಂದ ಎಲ್ಲರನ್ನೂ ಮುದಗೊಳಿಸುವದು ಅದರ ಉದ್ದೇಶ. ಯಾವ ಕಾರ್ಯಕ್ಕೆ ಸಲ್ಲುತ್ತದೆ ಎನ್ನುವ ಪರಿವೆ ಅದಕ್ಕಿರುವದಿಲ್ಲ.
ಹದಿ ವಯಸ್ಸಿಗೆ ಬಂದಾಗ ಮನದಲ್ಲಿ ಎಲ್ಲಿಲ್ಲದ ಚೈತನ್ಯತೆ ತುಂಬುತ್ತದೆ. ಮೀಸೆ ಬಂದವಗೆ ದೇಶಕಾಣಲಿಲ್ಲ, ಮೊಲೆ ಬಂದವಳಿಗೆ ನೆಲಕಾಣಲಿಲ್ಲ ಎನ್ನುವಂತೆ ಕೆಲವರು ತಮ್ಮ ಮನೋ ವಾಂಛೆಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲಾರದೆ ಹರಿಬಿಡುತ್ತಾರೆ. ಕಾಮನ ಬಿಲ್ಲು ನಂಬಿ ಬಾಳಬೇಕೆನ್ನುವವರಾಗಿರುತ್ತಾರೆ. ಯಾರ ಹಿತ ನುಡಿಗಳೂ ಇಂಥವರಿಗೆ ಸಹ್ಯವಾಗುವದಿಲ್ಲ. ತಾನು ಮಾಡುತ್ತಿರುವುದೇ ಸರಿಯಾದುದು, ತಾನೇ ಸಮಾಜ ಸುಧಾರಣೆಯ ಹರಿಕಾರ ಎನ್ನುವಂತೆ ಮೂಕ ಪ್ರಾಣಿಗಳಿಗೂ ಮೀರಿ ಲಂಪಟತನಕ್ಕೆ ನೆಲೆ ಕಂಡುಕೊಳ್ಳಲು ಪರದಾಡುತ್ತಿರುತ್ತಾರೆ. ಎಲ್ಲಾ ಜೀವರಾಶಿಗಳು ಸಂತಾನ ಕ್ರಿಯೆಗಾಗಿ ನಿರ್ದಿಷ್ಟ ವೇಳೆಗಳು ನಿಗಧಿ ಮಾಡಿಕೊಂಡಿರುತ್ತವೆ. ಆದರೆ ಜ್ಞನವುಳ್ಳ ಮನುಷ್ಯರಿಗೆ ಮಿಲನ ಮಹೋತ್ಸವಕ್ಕೆ ಯಾವುದೇ ನಿರ್ಧಿಷ್ಟ ಗಳಿಗೆಗಳಿಲ್ಲಅದಕ್ಕೆಂದೇ, ಎಲ್ಲಾ ಪ್ರಾಣಿಗಳಲ್ಲಿ ಬೆದೆ ಬರದೆ ಬೆಸೆಯುವ ಪ್ರಾಣಿ ಮನುಷ್ಯ ಪ್ರಾಣಿಯೊಂದೇ ಎಂದು ಹಿರಿಯರು ಹೇಳಿದ ಮಾತು. ಮಕರಂದದ ನೆಪದಲ್ಲಿ ಜೇನು ಹುಳುಗಳು ಬೇಕಿರದಿದ್ದರೂ ವ್ಯರ್ಥವಾಗಿ ಎಲ್ಲ ಹೂವಿನ ಪರಾಗ ಷ್ಪರ್ಶ ಮಾಡಲು ಬಯಸುತ್ತದೆ.ಅದೇರೀತಿ ಕೆಲವರು ತಮ್ಮ ಮನೋಧೌರ್ಬಲ್ಯ ಹಾಗೂ ಮನೋರೋಗಗಳಿಂದಾಗಿ ವಿಕ್ರೃತ ಕಾಮತ್ವ ಪಡೆದುಕೊಂಡಿರುತ್ತಾರೆ. ಸುಂದರ ಮಹಿಳೆಯರನ್ನು ನೋಡಿದೊಡನೆ ಮನೋವಿಚಲಿತತೆಗೆ ಒಳಗಾಗುತ್ತಾರೆ.
Comments
Post a Comment
Liked the post? Don't forget to tell us, do comment.