1.
ಬಿದ್ದು ಒದ್ದಾಡುವರು ಹೆಸರ ಕೆಸರಿನಲಿ
ಅರಳಿ ನಗುವ ನೈದಿಲೆಗಳೇನಲ್ಲ ಆತ್ಮದಲಿ,
ಭೌವ್ಯ ತೋರು ಮುಖವದು ಶ್ರೃಂಗಾರದ ಬೀಡು
ಅಂತರಾತ್ಮದ ಅಶುದ್ಧ ನೊರೆಯ ಜಿನುಗು ಖೇಡು
                                                                              - ಎಮ್ಮೆಚ್ಚೆ

ವಿಸ್ತೃತ
    ಮನುಷ್ಯ ಏನೆಲ್ಲವನ್ನೂ ಪಡೆದುಕೊಳ್ಳಬೇಕೆಂದು ಪ್ರಯತ್ನ ಪಡುತ್ತಾರೆ. ಎಲ್ಲ ಪಡೆದುಕೊಳ್ಳಲು ಹಣವೇ ಮಾನದಂಡವಾಗಿರುವಾಗ  ಹಣವನ್ನು ಹೆಚ್ಚು ಹೆಚ್ಚು ಗಳಿಸಬೇಕೆಂಬ ಹುಚ್ಚು ಉಮೇದಿಗೆ ಬೀಳುತ್ತಾರೆ. ಗಳಿಕೆಯ ಹಂಬಲದೊಂದಿಗೆ ಸಮಾಜದಲ್ಲಿ ತನ್ನದೇ ಹೆಸರು ಮುಂಚೂನೆಯಲ್ಲಿ ಇರಬೇಕೆಂದು ಹಪಹಪಿಗೆ ಬೀಳುತ್ತಾರೆ. ಸಮಾಜದಲ್ಲಿ ಎರಡು ರೀತಿಯಿಂದ ಹೆಸರು ಮಾಡಬಹುದು: ಒಂದು ಸಮಾಜಿಕವಾಗಿ ಒಳ್ಳೆಯ ಕೆಲಸ ಮಾಡಿ, ಇನ್ನೂಂದು ಕೆಟ್ಟ ಕೆಲಸ ಮಾಡಿ. ಒಳ್ಳೆಯ ರೀತಿಯಾಗಿ ಹೆಸರು ಮಾಡಿದವರು ಜನರ ಹೃದಯದಲ್ಲಿ ಸ್ಮರನೀಯರಾಗಿರುತ್ತಾರೆ. ಇನ್ನು ಕೆಟ್ಟರೀತಿಯಲ್ಲಿ ಹೆಸರು ಮಾಡಿದವರು ಜನರ ಕಣ್ಣಲ್ಲಿ ದೋಷಪೂರಿತರಾಗಿ ಉಳಿಯುತ್ತಾರೆ. ಕೀರ್ತಿಯ ಹಂಬಲ ಸೇರಿಕೊಳ್ಳುತ್ತ ಹೋಗಿ ಎಲ್ಲದಕ್ಕೂ ತನ್ನದೇ ಹೆಸರು ಎಲ್ಲರಿಗಿಂತ ಮುಂದೆ  ಬರಬೇಕು, ಎಲ್ಲರೂ ತನ್ನನ್ನೇ ಹೊಗಳಬೇಕು, ತಾನೇ ಎಲ್ಲರಿಗಿಂತ ಹೆಚ್ಚು ಸಬಲ ಅನ್ನಿಸಿಕೊಳ್ಳಬೇಕೆಂದು ಬಿಸಿಲು ಕುದುರೆಯ ಬೆನ್ನುಹತ್ತುತ್ತಾರೆ. ಈ ಹೆಸರಿನ ಹಂಬಲವೇ ದೊಡ್ಡ ದೊಡ್ಡ ಬ್ರಷ್ಟಾಚಾರಕ್ಕೆ ಅಡಿಪಾಯ ಎನ್ನುವ ಮನಸ್ಥಿತಿ ಇತ್ತಿತ್ತಲಾಗಿ ಅನೇಕ ಜನರಲ್ಲಿ ಮನೆಮಾಡಿರುತ್ತದೆ. ಆದರೆ ಅದಕ್ಕೆ ಸಂದರ್ಭದ ಕೊರತೆಯುಂಟಾಗಿ ಜನರೆದುರು ಎದ್ದುಕಾಣುವದಿಲ್ಲ ಅಷ್ಟೇ.
  ಈ ರೀತಿಯ ಕೀರ್ತಿಯ ಹಂಬಲ ಒಳ್ಳೆಯ ಮತ್ತು ಕೆಟ್ಟ ಗಳಿಕೆಕಾರರಲ್ಲಿ ಸಮಾನವಾಗಿಯೆ ಇರುತ್ತದೆ. ಒಟ್ಟಾರೆಯಾಗಿ ಮನುಷ್ಯರಿಗೆ ಎಲ್ಲಾ ಆಸೆಗಳಿಗಿಂತ ಈ ಕೀರ್ತಿಯ ಹಂಬಲ ಬಹಳ ಅಧಿಕವಾಗಿರುತ್ತದೆ. ತಮ್ಮ ಹೆಸರು ಎಲ್ಲಕ್ಕಿಂತ ಮುಂಚೂನೆಯಲ್ಲಿರಬೇಕೆಂದು ಕೊಳಚೆ ಕೆಸರಲ್ಲೂ ಬಿದ್ದು ಒದ್ದಾಡುವ ಮನಸ್ಥಿತಿಯುಳ್ಳವರಾಗಿರುತ್ತಾರೆ. ಮನೋಹಾರಕವಾದ ಕಮಲದ ಹೂಗಳರಳುವುದು ಕೆಸರಿನಿಂದ ತುಂಬಿದ ಕೊಳಗಳಲ್ಲಿಯೆ. ಆದರೆ  ಕೀರ್ತಿ ಹಂಬಲಿತ ವ್ಯಕ್ತಿ ವ್ಯರ್ಥವಾಗಿ ಬಿದ್ದು ಒದ್ದಾಡುವದು ಏನೂ ಉಪಯೋಗವಿಲ್ಲದ್ದು‌. ಅದು ಆತ್ಮಾಭಿವ್ರೃದ್ಧಿಯ ಹಾಗೆ ಮಾನಸಿಕ  ನೆಮ್ಮದಿಯನ್ನು ಕೊಡುವದಾಗಿರುವದಿಲ್ಲ. ಅವರ ಈ ಕ್ರಿಯೆ ಎಲ್ಲ ಜನರನ್ನೂ ಮಲೀನರನ್ನಾಗಿಸುತ್ತ ಹೋಗುತ್ತದೆ. ಅವರು, ಮನಸು ಕೀರ್ತಿಯತ್ತ ಜಾರಿದಾಗ ತಮ್ಮ ಹೊರ ಪೋಷಾಕು ಹಾಗೂ  ಕ್ರೃತಕ ಸೌಂಧರ್ಯವರ್ಧಕಗಳಿಂದ ಮನದೊಳಗಿನ ನೂನ್ಯತೆಗಳನ್ನು ಮುಚ್ಚಿಡುವ ಹುನ್ನಾರ ಮಾಡುತ್ತಾರೆ. ಅವರ ಆತ್ಮ  ದೋಶದಿಂದ ಕೂಡಿರುತ್ತದೆ. ಅಂಥವರ ಒಳಗಿನ ದುರ್ಗುಣಗಳು ಜನರಿಗೆ ತಿಳಿದಂತೆಲ್ಲ  ಅವರನ್ನು ನಿರ್ಲಕ್ಷಿಸುತ್ತ ಹೋಗುತ್ತಾರೆ.ಸ್ವಾರ್ಥಿ ಕೀರ್ತಿಯ ಹಂಬಲಿಗರು ಹಾಸ್ಯ ಪಾತ್ರಗಳಾಗಿ ಮನೋರೋಗಿಗಳಾಗುತ್ತ ಹೋಗುತ್ತಾರೆ.

2.
ಪಡೆದು ನಿಜಮತಿಯ ಕಳೆಯುವರು ಆತ್ಮರತಿಯ
ಆಸೆಯ ಗಣಪಗೆ ಆತ್ಮೀಯ  ಬಾಲಾಂಜನೇಯ,
ಬಂದೀತು ಭಾಗ್ಯ ಪಡೆದರೆ ಆಗಿರಬೇಕು ಯೋಗ್ಯ
ಕಾಗೆ  ಸಿಂಹಾಸನಕೇರುವುದು ಬಲು ಅಯೋಗ್ಯ!
                                                                            ಎಮ್ಮೆಚ್ಚೆ

ವಿಸ್ತೃತ
   ಮೊಗೆದಷ್ಟೂ ಮುಗಿಯಲಾರದ ವಿಷಯ ಈ ಬ್ರಹ್ಮಾಂಡದಲ್ಲಿವೆ.ಎಲ್ಲವನ್ನೂ ಒಬ್ಬನೇ ಒಬ್ಬ ವ್ಯಕ್ತಿ ಪಡೆದುಕೊಳ್ಳುವುದು ಸಾಧ್ಯವಿಲ್ಲ. ಆದರೂ ಸಹ ಹೆಚ್ಚಿನ ವಿಷಯ ತಿಳಿದುಕೊಂಡವರಿಗೆ ಲೊಕದಲ್ಲಿ ಗೌರವ ಹೆಚ್ಚು. ಸತ್ಯವಾದ ತಿಳುವಳಿಕೆಯು ತಿಳಿದುಕೊಂಡ ವ್ಯಕ್ತಿಯ ಸಮಗ್ರ ಉನ್ನತ ಬದುಕಿಗೆ ಸಾಕ್ಷಿಯಾಗಿರುತ್ತದೆ. ಆದರೆ ಅಲ್ಪ ಸ್ವಲ್ಪ ತಿಳಿದುಕೊಂಡವರೇ ಎಲ್ಲಾ ತಿಳಿದುಕೊಂಡಂತೆ ಭ್ರಮಿಸಿ ನಟಿಸುತ್ತಾರೆ. ಸಂಪೂರ್ಣ ಜ್ಞಾನ  ಉಳ್ಳವರು ನಿಜ ಅಂತರಾತ್ಮವನು ತಾವು ಅರಿತವರಾಗಿರುತ್ತಾರೆ. ಪುರಾಣ ಪುಣ್ಯಕಥೆಗಳಂತೆ ಹೇಳುವದಾಧರೆ, ಜ್ಞಾನದ ಅಧಿಪತಿಯಾದ ಗಣಪತಿಗೆ ಆಸೆಯ ಗುಣ, ತನ್ನ ವಿಶೇಷ ಜ್ಞಾನದೊಂದಿಗೆ ತನ್ನ ಆಂಗಿಕ ದೌರ್ಬಲ್ಯದಿಂದ ಬೇರೆಯವರಿಂದ ಅಪಹಾಸ್ಯ ಆಗುತ್ತಿದ್ದರೂ ಧನಾತ್ಮಕವಾಗಿ ತೆಗೆದುಕೊಳ್ಳುತ್ತಿದ್ದುದು ವಿಶೇಷಗುಣ. ಎಲ್ಲರಂತೆ ವಿವಾಹವಾಗಲು ಆಸೆಪಟ್ಟು ತಯಾರಿಗೇ ನಿರಾಶೆ ಪಟ್ಟ ಗಣಪತಿ ಒಂದು ಅವತಾರದಲ್ಲಿ ಆಜನ್ಮ ಬ್ರಹ್ಮಚಾರಿ ಬಾಲಾಂಜನೇಯನ ಗೆಳೆಯನಾಗಿರುತ್ತಾನೆ. ಒಂದೇ ರೀತಿಯ ಮನಸಿನ ಭಾವನೆಗಳನ್ನು ಹೊಂದಿದವರು ಮಿತ್ರರಾಗುತ್ತಾರೆ ಅನ್ನುವದಕ್ಕೆ ಉದಾಹರಣೆಯಾಗಿರುತ್ತಾರೆ. ಗಣಪತಿಯ ರೀತಿಯಲ್ಲಿಯೇ ಮಾರುತಿ ದೇವನಿಗೂ ಹಲವು ಅವತಾರಗಳು ಇವೆ.ಈ ದೇವರು ಬ್ರಹ್ಮ ಚರ್ಯತ್ವ,ದೇಹ ದಾರ್ಢ್ಯತೆ, ಸಾಧನೆ, ನಂಬಿಕೆಗೆ ಹೆಸರುವಾಸಿ ಯಾಗಿರುತ್ತದೆ. ಸತತ ಪರಿಶ್ರಮದಿಂದ ಸಾಧನೆ ಮಾಡಿದಂತಹ ವ್ಯಕ್ತಿಗಳಿಗೆ ಪ್ರತಿಫಲ ಸಿಕ್ಕುತ್ತದೆ. ಎಲ್ಲರೂ ಪ್ರಾಮಾಣಿಕ ಪ್ರಯತ್ನವಾದಿಗಳಾಗಿರಬೇಕು ಆದರೆ ಫಲದ ಹಪಹಪಿ ಇರಬಾರದು.ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಿಲ್ಲ ಒಂದು ವೇಳೆ ಭಾಗ್ಯ ದೇವತೆ ಒಲಿದೇ ಒಲಿಯುತ್ತಾಳೆ ಆದರೆ ಸತತ ಪ್ರಯತ್ನ ನಮ್ಮದಾಗಿರಬೇಕು. ಕೆಲಜನರಿಗೆ ಒಮ್ಮೊಮ್ಮೆ ಅದ್ರೃಷ್ಠ ದೇವತೆ ಒಲಿದು ಗಣ್ಯ ಸ್ಥಾನಗಳನ್ನು ಪಡೆದುಕೊಂಡಿರುತ್ತಾರೆ. ಸಿಕ್ಕ ಸ್ಥಾನ ಮಾನದ ಘಣತೆ ಗೌರವಗಳನ್ನು ಕಾಪಾಡಿಕೊಳ್ಳುವ ತಾಕ್ತತ್ತು ಇಲ್ಲದೆ ಅಂಥವರು ನಗೆಪಾಟಲಿಗೆ ಗುರಿಯಾಗುತ್ತಾರೆ ಹಾಗೂ ವ್ಯವಸ್ಥೆಯನ್ನೂ ಅಧಿಪತನಕ್ಕಿಳಿಸುತ್ತಾರೆ. ಯಾರಿಗೆ ನಿಜವಾಗಿಯೂ ಯೋಗ್ಯತೆ ಇಲ್ಲವೊ ಅಂಥವರು ಆಯಕಟ್ಟಿನ ಗಂಭೀರ ಹುದ್ದೆಗಳನ್ನು ಯಾವಯಾವದೋ ವಸೂಲಿ ಬಾಜಿಯಿಂದ  ಪಡೆದುಕೊಂಡಿರುತ್ತಾರೆ. ಅಂಥವರ ಕೈ ಕೆಳಗೆ ಅವರಿಗಿಂತ ನಿಪುಣತೆ ಹೊಂದಿದವರು ಕೆಲಸ ಮಾಡಬೇಕಾಗಿರುತ್ತದೆ. ಇಂಥಹ ಸಂದರ್ಭಗಳಲ್ಲಿಯೇ ಯೋಗ್ಯತೆಯಿಲ್ಲದವರು ತಮ್ಮ ಗೌರವ ಕಳೆದುಕೊಳ್ಳುವ ಪ್ರಸಂಗ ಉಂಟಾಗುತ್ತದೆ. ಕಾಗೆಯ ಗುಣಗಳನ್ನು ಹೊಂದಿದಂತಹ ವ್ಯಕ್ತಿಗಳನ್ನು ಯಾವ ಸ್ಥಾನದಲ್ಲಿ ಕುಳ್ಳರಿಸಿದರೂ ತನ್ನ ಯೋಗ್ಯತೆಯ ಅನುಸಾರವಾಗಿ ಮಾತ್ರ ನಡೆದುಕೊಳ್ಳುತ್ತದೆ.ತನ್ನ ಕಾಕ ಬುದ್ಧಿಯನ್ನು ಬಿಟ್ಟುಕೊಡುವದಿಲ್ಲ.

3.
ದ್ವೇಶವದು ಅತಿ ಗರತಿ
ಅನತಿಯಂತೆ ಬಲು ನಡತಿ,
ಪ್ರೀತಿಯದು ಭಾರೀ ಪಾತರಗಿತ್ತಿ
ಎಲ್ಲೆಡೆ ಹಾರಾಡತೈತಿ ರೆಕ್ಕೆಯ ಬಿಚ್ಚಿ!
                                                      ಎಮ್ಮೆಚ್ಚೆ

ವಿಸ್ತ್ರೃತ
ಆದ್ದರಿಂದ ಮನುಷ್ಯರೆಲ್ಲರೂ ಮಾರುತಿ ದೇವನಹಾಗೆ ಬ್ರಹ್ಮಚರ್ಯತ್ವದಿಂದ ಪರಿಸುದ್ಧರಾಗಿ ,ಗಣಪತಿಯಂತೆ ಜ್ಞಾನವಂತರಾಗಿ,ಎಲ್ಲವನ್ನೂ ಯೋಗ್ಯರೀತಿಯಿಂದ ನಿಭಾಯಿಸುವ ಸಾಮರ್ಥ್ಯವನ್ನು ಗಳಿಸಿಕೊಂಡು ತಕ್ಕ ಹುದ್ದೆಡಳು ದಕ್ಕಿದಾಗ ಯೋಗ್ಯರೀತಿಯಿಂದ ನಿಭಾಯಿಸಿ ಜನರ ಮೆಚ್ಚಿಗೆ ಪಡೆದುಕೊಳ್ಳೋಣ.ಎಂಥಹ ಪ್ರಸಂಗಗಳಲ್ಲಿಯೇ ಆಗಲಿ ತನ್ನ ಆತ್ಮ ಸ್ಥೈರ್ಯವನ್ನು ಕಳೆದುಕೊಳ್ಳಬಾರದು. ಅದರಲ್ಲೂ ದೈಹಿಕ ರೊಗಗಳು ನಮ್ಮ ಹೆದರಿಕೆ, ಅವ್ಯಕ್ತ ಭಯಗಳಿಂದಲೇ ಹೆಚ್ಚಾಗುತ್ತ ಹೋಗುತ್ತವೆ. ಸರಿಯಾಗಿ ವೈದ್ಯಕೀಯ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡು ಬಂದುದನ್ನು ಬಂದಂತೆಯೇ ಎದುರಿಸಿ ಬದುಕುತ್ತೇನೆ ಎನ್ನುವವರು ಬಾದೆಗಳು ದೂರಸರಿದು ಆರೋಗ್ಯದತ್ತ ಹೊಗುತ್ತಾರೆ. ಹಾಡಿ ಹಾಡಿ ರಾಗ, ಉಗುಳಿ ಉಗುಳಿ ರೋಗ ಎನ್ನುವಂತೆ ಹೆದರಿ ಬೆದರಿ ಬಾದೆ  ಎನ್ನುವಂತಾಗಿದೆ. ವೈದ್ಯಕೀಯದ ಪ್ರಕಾರವೂ ಭಯದಿಂದಲೇ ರೋಗಗಳು ಉತ್ಪತ್ತಿಯಾಗುತ್ತವೆ ಹಾಗೂ ಉಲ್ಭನಗೊಳ್ಳುತ್ತವೆ.
    ಪ್ರತಿಯೊಬ್ಬರಿಗೂ ಜೀವ ಎನ್ನುವುದು ಬಲು ಅಮೂಲ್ಯವಾದುದು. ಅದರೊಂದಿಗೆ ಜೀವನವೂ ಅತೀ ಅಮೂಲ್ಯವಾದುದಾಗಿರುವದರಿಂದ ನಾವು ಸ್ವಸ್ಥ ಜೀವನದ ದ್ರೃಷ್ಠಯಿಂದ ಬಲ್ಲವರುಗಳು ಹಾಕಿದ ನಿಬಂಧನೆಗಳನ್ನು ಚಾಚುತಪ್ಪದೆ ಪಾಲಿಸುವ ನಿರ್ದಾರದೊಂದಿಗೆ ಗಟ್ಟಿ ಮನಸ್ಸು ಮಾಡಿದಲ್ಲಿ ಎಂಥಹ ಘೋರ ಜಾಡ್ಯಗಳನ್ನೂ ಹೋಗಲಾಡಿಸಬಹುದು. ನಾವು ಈ ಜಂಜಡದ ಜಗತ್ತಿನಲ್ಲಿ ಬದುಕಬೇಕೆಂದರೆ ಸಾಕಷ್ಟು ವಿನಾಕಾರಣ ತೊಂದರೆಗಳನ್ನು ಎದುರಿಸುತ್ತೇವೆ. ಅಂತಹ ಸಮಸ್ಯೆಗಳನ್ನು ತತ್ಕ್ಷಣವೇ ಯೋಗ್ಯ ನಿರ್ಧಾರಗಳೊಂದಿಗೆ ಪರಿಹರಿಸಿಕೊಳ್ಳುವ ಜ್ಞಾನವನ್ನು ಪಡೆದುಕೊಂಡಿದ್ದರೆ ಯಾವ ಸಮಸ್ಯೆಗಳೂ ಮುಂದುವರೆಯದೆ ಅಲ್ಲಿಗಲ್ಲಿಗೇ ಮುಕ್ತಾಯಗೊಂಡು ಬಿಡುತ್ತವೆ.
    ಹಾಗೆಂದು ಅನ್ಯಾಯಗಳನ್ನೆದುರಿಸುವ ಹುಸಿ ನೆಪದಲ್ಲಿ ತನೂ ಇನ್ನೊಬ್ಬರ ಸ್ವಾತಂತ್ರಗಳನ್ನು ಹರಣ ಮಾಡುವ ದಬ್ಬಾಳಿಕೆಯನ್ನು ಮಾಡಬಾರದು.ಉಪಯೋಗ ವಿಲ್ಲದ ದೊಡ್ಡಸ್ಥಿತಿಗಾಗಿಯೇ ಕೆಲವರು ಇನ್ನೊಬ್ಬರೊಂದಿಗೆ ಅನುಚಿತವಾಗಿ ನಡೆದುಕೊಂಡು ಪರರಿಗೆ ತೊಂದರೆ ಕೊಡುವುದರೊಂದಿಗೆ ತಾವೂ ಅಪಾಯಕ್ಕೆ ಒಳಗಾಗುತ್ತಾರೆ.
    ಆದ್ದರಿಂದ ಎಲ್ಲರೂ ಎಲ್ಲರೊಂದಿಗೆ ಸಹಕಾರದಿಂದ ,ಕಾನೂನು ಪಾಲಕರಾಗಿ ಧನಾತ್ಮಕ ರೀತಿಯಿಂದ ಧೈರ್ಯವಂತರಾಗಿ ಆರೋಗ್ಯದಿಂದ ಬದುಕುವುದು ಒಳ್ಳೆಯದು.

Comments

Popular Posts