1.
ಅತ್ತೆಯಾ ಕರ್ಮತೆಗೆ
ಅಳಿಯನಾ ಮೆರವಣಿಗೆ,
ಮಗಳದು ಅತೀ ಉರವಣಿಗೆ
ಕೆಲವರದು ಮೌಢ್ಯ ಪುರವಣಿಗೆ!
                                                 - ಎಮ್ಮೆಚ್ಚೆ

ವಿಸ್ತೃತ 
    ಅತ್ತೆ ತನ್ನ ಕರ್ಮ ಫಲಗಳಿಂದ ಅಸಹಾಯಕಳು ಆದಳೆಂದು ಆ ಮನೆತನದ ಯೋಗಕ್ಷೇಮ ನೋಡಿಕೊಳ್ಳಲು ಅಳಿಯ ಬರುತ್ತಾನೆ. ಅದು ಅವನ ಸ್ವಂತ ಆಸ್ತಿಯಾಗಿರುವದಿಲ್ಲ. ಆದ್ದರಿಂದ ದುಂದಾವರ್ತಿಯಿಂದ ಖರ್ಚಿನ ಮುಖಾಂತರ ಮನೆ ಆಡಳಿತ ನಡೆಸುತ್ತಾನೆ. ಒಂದೊಮ್ಮೆ ಅತ್ತೆ ಅಧಿಕಾರಸ್ತಳಾಗಿದ್ದರಂತೂ ಎಲ್ಲಾ ಅವ್ಯವಹಾರಗಳ ಅವ್ಯವಹಾರಕ್ಕೆ ಅವನೇ ಕಾರಣೀ ಭೂತನಾಗಿರುತ್ತಾನೆ. ಕೆಲವು ಸಾರಿ ಈ ಅವ್ಯವಹಾರಗಳು ಅತ್ತೆಗೆ ಗೊತ್ತಿದ್ದರೂ ಮಗಳ ಮೇಲಿನ ಮಮತೆಯಿಂದ ಅಳಿಯನ ಅವ್ಯವಹಾರಗಳಿಗೆ ಅಘೋಷಿತ ಬೆಂಬಲವನ್ನು ಕೊಟ್ಟಿರುತ್ತಾಳೆ. ಅಳಿಯನೋ, ಎಲ್ಲಾ ಅತ್ತೆಯ ಸ್ವತ್ತು ಹಾಳುಮಾಡಿದರೆ ಯಾರ ತಕರಾರಿಲ್ಲ (ಹೆದರಿಕೆಯಿಲ್ಲ), ಎಲ್ಲಾ ಸ್ವತ್ತು ತನಗಾಗಿಯೇ ಖರ್ಚು ಮಾಡಲು ಇದೆ, ಹಾಳಾದರೆ ನನ್ನದಂತೂ ಅಲ್ಲವೆಂಬ ವಿಚಾರದಲ್ಲಿರುತ್ತಾನೆ. ಜೊತೆಗೆ ಅತ್ತೆಯನ್ನೂ ಬ್ರಷ್ಟತೆಗೆ ನೂಕಲು ಪ್ರಯತ್ನಿಸುತ್ತಾನೆ. ಇತ್ತ ಮಗಳಿಗೆ ಮೇಲುಬುದ್ದಿಯ ಕೊರತೆ. ತನ್ನ ಮನೋದಿಚ್ಚೆಯ ಚಪಲಕಳು. ಸರಿತಪ್ಪು ತಿಳಿಯದೆ ಹಾರಾಮಿ ಬದುಕಿಗೆ ಒಗ್ಗಿಕೊಂಡವಳು.
     ಇಂಥಹ ಮನೆಮುರುಕರ ನಡವಳಿಗಳನ್ನು ಖಂಡಿಸಿ, ಅವರ ತಪ್ಪುಗಳನ್ನು ಅವರಿಗೆ ತಿಳಿಸಿ ಅವರನ್ನು ಸರಿದಾರಿಯಲ್ಲಿ ಸಾಗುವಂತೆ ಮಾಡದೆ ಕೆಲ ಜನ ಸಂಬಂಧಿ ಎನ್ನುವ ಹಿತೈಸಿಗಳು, ಅಂಥವರ ತಪ್ಪುಗಳಿಗೆ ಉತ್ತೇಜನ ಕೊಡದಿದ್ದರೂ ಏನೂ ಗೊತ್ತಿರದ ರೀತಿ ನಾಟಕವಾಡುತ್ತಾರೆ. ಬುದ್ದಿವಂತರಾಗಿ ಮಾತಿನ ವರಸೆಗೆ ಹತ್ತಿದವರು, ವಯಸ್ಕತೆ, ಸ್ವಂತಿಕೆ, ಸ್ವಾತಂತ್ರ, ಆಧುನಿಕತೆ ಅಂತಾ ತಮ್ಮ ಮಾತುಗಳ ಜಾನ್ಮೆಯಿಂದ ಎಲ್ಲರನ್ನೂ ಮರಳುಗೊಳಿಸಲು ನೋಡುತ್ತಾರೆ. ಯಾರಾದರೂ ನಿಷ್ಟುರವಾಗಿ ಬುದ್ದಿ ಹೇಳಿದರೂ ಅವರದೇ ಮಹಾ ತಪ್ಪು ಎನ್ನುವಂತೆ ವರ್ತಿಸುತ್ತಾರೆ. ಆ ಕಲಹಗಳ ಸಂದರ್ಭಗಳನ್ನು ದಾಟಿಸಿ ತಾವೇ ಯೋಗ್ಯರು, ಉಳಿದವರೆಲ್ಲ ನಿಷ್ಕ್ರೃಷ್ಟರೆಂದು ಪರಿಭಾವಿಸಿರುತ್ತಾರೆ. ತಮ್ಮ ನಡುವಳಿಕೆಯಿಂದ ಯಾರಿಗೆ ನಿಜವಾಗಿ ನೊವಾಗಿದೆ ಎಂದು ನೋಡದೆ ಕೇವಲ ಸ್ವಾರ್ಥ ಸಾಧನೆಗೇ ಬಡಿದಾಡುತ್ತಾರೆ ಜೊತೆಗೆ ತಮ್ಮ ಮೋಸದ ಅಜ್ಞಾನಿಕತೆ ವರೆಗೆ ಹತ್ತಿದಾಗ ತಮಗೆ ಇಂಥಹ ಸಂಸ್ಕ್ರೃತಿಹೀನ ವಿಚಾರಗಳ ಬಗ್ಗೆ ಏನೇನೂ ತಿಳಿದೇ ಇಲ್ಲವೆಂಬ ಸಬೂಬು ಹೇಳಲು ಸಿದ್ಧವಾಗಿರುತ್ತಾರೆ. ಹಾಗೆಯೇ ನುನುಚಿಕೊಂಡೂಬಿಟ್ಟು ಎಲ್ಲ ತಿಳಿದವರಂತೆ ತೋರಿಸುತ್ತಾರೆ.

2.
ಮಾರುತಿಯ ಗುಡಿಗೇಕೆ
ಮೂರುತಿಯ ಹಂಬಲವು
ಇಲ್ಲದ ಒಣ ಮಾತದದೇಕೆ
ಕೀರುತಿಯೇ ಅತಿ  ಬಲವು!
                                          - ಎಮ್ಮೆಚ್ಚೆ

ವಿಸ್ತೃತ
    ಧರ್ಮ, ಭಕ್ತಿ, ಭಾವತೆಗಳಲ್ಲಿ ಡಾಂಭಿಕತೆ ಜನರಲ್ಲಿ ಹೆಚ್ಚಾಗಿ ಎಲ್ಲಾ ದೇವರುಗಳ ಮೂರ್ತಿಗಳನ್ನು ನಿರ್ಮಿಸಲು ಅತಿ ಹೆಚ್ಚು ಹೆಚ್ಚು ಸುಂದರತೆಯಿಂದ ಒಡಗೂಡಿರಬೇಕೆಂದು ಬಯಸುತ್ತಾರೆ. ಹೆಚ್ಚು ಅಲಂಕಾರಿತಗೊಳಿಸಿ ಆಡಂಬರತೆಯಿಂದ ಜನರನ್ನು ಹೆಚ್ಚು ಆಕರ್ಷಿತಗೊಳ್ಳುವಂತೆ ಮಾಡುತ್ತಾರೆ. ಆದರೆ ಮಾರುತಿ(ಹನುಮಂತ, ಶನಿದೇವ, ವಾಯುಪುತ್ರ, ಆಂಜನೇಯ, ಮುತ್ತತ್ತಿರಾಯ)ದೇವನಿಗೆ ನಮ್ಮ ಬಯಕೆಗಳಂತೆ ಸುಂದರ ರೂಪಿತನನ್ನಾಗಿಸುವದು ಅವಶ್ಯವಿಲ್ಲ. ಏಕೆಂದರೆ ಮಾರುತಿ ದೇವನ ರೂಪವೇ ನೈಜತೆಯುಳ್ಳದ್ದಾಗಿದೆ. ಅಂಜನೇಯ ಅತೀತ ದೈಹಿಕ ರೂಪಿತನಾಗಿದ್ದಾನೆ. ಈತ ತನ್ನ ಸುಂದರತೆಗಿಂತ ಜಗತ್ವ್ಯಾಪಿ ಕೀರ್ತಿವಂತನಾಗಿದ್ದಾನೆ. ಬ್ರಹ್ಮಚರ್ಯ, ದೇಹದಾಡ್ಯತೆ, ಭಕ್ತಿಗೆ ಪ್ರತೀಕವಾದ ದೇವನಾಗಿದ್ದಾನೆ. ಚಿಕ್ಕ ಮೂಲಿಕೆಗಾಗಿ ಬೆಟ್ಟವನ್ನೇ ಹೊತ್ತುತಂದ ಆಂಜನೇಯ  ಯುವ ಪೀಳಿಗೆಯ ಆರಾದ್ಯ ದೈವವಾಗಿದ್ದಾನೆ. ಎದೆ ಸೀಳಿ ಶ್ರೀರಾಮ ದರ್ಶನ ಮಾಡಿಸಿ ಭಕ್ತಿಗೆ ಹನುಮಂತ ಹೆಸರುವಾಸಿಯಾಗಿದ್ದಾನೆ. ಜನರ ಕಷ್ಟಗಳನ್ನು ಕಳೆದು ಶನಿದೇವನಾಗಿದ್ದಾನೆ.
 ಜಗತ್ತಿನಲ್ಲೆಡೆ ಮಾರುತಿದೇವರ ಭಕ್ತಗಣ ಉಳಿದೆಲ್ಲ ದೇವರಿಗಿಂತ ಹೆಚ್ಚಿದೆ.


Comments

Popular Posts