1.
ಕಟ್ಟಿರದ ಕತ್ತೆಗೆ ತಿಂದುದೇ ಆಹಾರ
ತಿರುಗಿದ್ದೇ ತನ್ನ ವಿಶಾಲ ವಿಹಾರ,
ಬಿಟ್ಟಿರದ ವ್ಯಾಗ್ರಕ್ಕೆ ಹಾಕಿದ್ದೇ ಬೇಟೆ
ಜನರ ಕಾಡಲಿ ಹಿಡಿದಿಟ್ಟ ನಮ್ಮದೆಷ್ಟು ತೀಟೆ!
- ಎಮ್ಮೆಚ್ಚೆ
ವಿಸ್ತ್ರುತ
ಜನರ ಪ್ರೀತಿಗೆ ಕತ್ತೆ ತನ್ನ ರೂಪ, ನಡತೆಗಳಿಂದ ವ್ಯತಿರಿಕ್ತವಾಗಿರುತ್ತದೆ. ಕತ್ತಗೆ ಹೆಚ್ಚಿನ ಭಾರ ಹೊರುವ ಶಕ್ತಿ ಅಧಿಕವಾಗಿದ್ದರೂ ತನ್ನ ಗುಣಗಳಿಂದ ಜನರಿಗೆ ನಂಬಿಕೆಯ ಪ್ರಾಣಿಯಲ್ಲ. ಅದನ್ನು ಕಟ್ಟಿಹಾಕದಿದ್ದಲ್ಲಿ ತನ್ನ ಮನದಿಚ್ಚೆಗೆ ತಕ್ಕಂತೆ ಎಲ್ಲಿಬೇಕೋ ಅಲ್ಲಿ ತನಗೆ ಕಾಣುವ ಹೊಲಸುಗಳನ್ನು ತಿನ್ನುತ್ತ ಸಾಗುತ್ತದೆ. ಅದೇ ತನ್ನ ಜೀವನ ಎಂದುಕೊಂಡು ಅದಕ್ಕೇ ಹೊಂದಿಕೊಂಡು ಬಿಡುತ್ತದೆ. ತಾನು ಎಲ್ಲೆಲ್ಲಿ ತಿರುಗುತ್ತೇನೋ ಅದೆಲ್ಲವೂ ತನ್ನದೇ ಸ್ವಂತ ಜಗತ್ತು ಎಂದು ತಿಳಿದಿರುತ್ತದೆ. ನಾಯಿ ಹಾಗೂ ಉಳಿದ ಪ್ರಾಣಿಗಳಂತೆ ಸಾಕಿ ಜೋಪಾನ ಮಾಡುವ ಮಾಲೀಕ ಮತ್ತು ಅವನ ಮನೆಗೆ ನಂಬಿಕೆ ಉಳ್ಳದ್ದಾಗಿ ಕತ್ತೆ ನಡೆದುಕೊಳ್ಳುವದಿಲ್ಲ.
ಮನುಷ್ಯ ತನ್ನ ವಿಶೇಷ ಬುದ್ದಿಯಿಂದ ನಿಸರ್ಗದ ಎಲ್ಲ ಪ್ರಾಣಿಗಳನ್ನೂ ಪಳಗಿಸುತ್ತ ತಾನೇ ಮಿಗಿಲಾದವನೆಂದು ಸಾಬೀತು ಪಡಿಸುತ್ತ ಹೋಗುತ್ತಿದ್ದಾನೆ. ಕಾಡಿನಲ್ಲಿರಬೇಕಾದ ಕ್ರೂರ ಮ್ರುಗಗಳನ್ನೆಲ್ಲ ತನ್ನ ಸ್ವರ್ಥಕ್ಕಾಗಿ ಪಳಗಿಸಿ ಅವುಗಳನ್ನು ಬಂಧಿಸಿಟ್ಟು ಖುಷಿಪಡುತ್ತಾನೆ. ಕಾಡು ಪ್ರಾಣಿಗಳು ತಮ್ಮ ನೈಸರ್ಗಿಕ ಗುಣ ಸ್ವಭಾವಗಳನ್ನು ಮರೆತು ತಂದು ಹಾಕಿದ ಆಹಾರಗಳೆ ಅದರ ಬೇಟೆ ಅನ್ನುವಂತೆ ಮಾಡಿ ಪ್ರಾಣಿಗಳ ನೈಜ ಬದುಕುಗಳನ್ನು ಕಸಿದುಕೊಳ್ಳುತ್ತಾರೆ. ಇಂಥಹ ಕ್ರೂರ ಪ್ರಾಣಿಗಳ ತಾಣ ಕಾಡಿನಲ್ಲಿ ಆದರೆ ಮಾನವರು ನಾನಾ ಕಾರಣಗಳಿಗಾಗಿ ಅವುಗಳನ್ನು ಆಕ್ರಮವಾಗಿ ಜನರ ಮಧ್ಯದಲ್ಲಿ ಬಂಧಿಸಿಟ್ಟುಕೊಂಡು ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ. ಅಂಥಹ ಕ್ರೂರ ಪ್ರಾಣಿಗಳೆಂದು ತಿಳಿದೂ ಕೂಡ ಅವುಗಳೊಂದಿಗೆ ಸರಸ ಬಯಸುತ್ತಾರಲ್ಲ ಇಂಥಹವರ ಬುದ್ದಿಗಳಿಗೆ ಏನನ್ನಬೇಕು.
2.
ಹುಟ್ಟಿಗೊಂದೇ ದಾರಿ
ಸಾವಿಗೆ ಸಾವಿರ ಮಾರಿ,
ಬದುಕಲು ಏನಿಲ್ಲ ಹೇಳಿ
ಸಾವು ಎಲ್ಲರಿಗೊಂದೇ ಕೇಳಿ!
- ಎಮ್ಮೆಚ್ಚೆ
ವಿಸ್ತೃತ
ಎಲ್ಲ ಜೀವರಾಶಿಗಳು ಹುಟ್ಟಬೇಕೆಂದರೆ, ಹೆಣ್ಣು-ಗಂಡುಗಳ ಅಂಗಾಂಶಗಳ ಸಮ್ಮಿಲನ ಬೇಕೇ ಬೇಕೆಂಬುವದು ಎಲ್ಲರಿಗೂ ತಿಳಿದ ವಿಚಾರ. ಇದನ್ನು ಹೊರತುಪಡಿಸಿ ಬೇರೆ ಯಾವ ರೀತಿಯಿಂದಲೂ ಸಂತತಿ ಪಡೆಯಲು ಸಾಧ್ಯವಿಲ್ಲ. ವೈಜ್ಞಾನಿಕವಾಗಿ ಹೇಳಬೇಕೆಂದರೆ, ವೀರ್ಯಾನು-ಅಂಡಾನುಗಳ ಸಮ್ಮಿಲನವೇ ನವ ಜೀವ ಉತ್ಪತ್ತಿಗೆ ಕಾರಣ. ಅದು ಎಲ್ಲರೂ ಒಂದೇ ರೀತಿಯಾಗಿ ಯೋನಿ ಮಾರ್ಗದ ಮೂಲಕವೇ ಜನಿಸಬೇಕು. ಅನ್ಯ ಮಾರ್ಗಗಳಿಲ್ಲ. ನವ ಜೀವಿ ಸ್ರೃಷ್ಠಿಯಾಗಿದೆ ಅಂದರೆ ಗಂಡು-ಹೆಣ್ಣುಜೀವಕಣಗಳ ಸಂಯೋಗದಂದ ಮಾತ್ರ ಸಾಧ್ಯ.
ಹುಟ್ಟಿದ ಜೀವಿಗಳೆಲ್ಲವೂ ಸಾಯಲೇ ಬೇಕು. ಆದರೆ ಪ್ರತಿ ಸಾವುಗಳಿಗೂ ಒಂದೊಂದು ತನ್ನದೇ ಕಾರಣಗಳಿರುವದು ವಿಪರ್ಯಸ. ಎಲ್ಲರೂ ಒಂದೇ ರೀತಿಯಾಗಿ ಸಾಯುವದಿಲ್ಲ. ನಾನಾ ತರದಿಂದ ಎಲ್ಲರೂ ಸತ್ತೇಸಾಯುತ್ತಾರೆ.
ಜೀವನದಲ್ಲಿ ಜೀವನೊತ್ಸಾಹವನ್ನು ಕಳೆದುಕೊಳ್ಳಬಾರದು. ಈ ನಿಸರ್ಗ ನಮಗಾಗಿ ಏನೆಲ್ಲವನ್ನೂ ಕೊಟ್ಟಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಂಡು ಹ್ಯಾಗೆ ಬೇಕೋಹಾಗೆ ಎಲ್ಲರೂ ಬದುಕಲು ಅಧಿಕವಾದ ಅವಕಾಶಗಳಿರುತ್ತವೆ.
ಜನನ, ಮರಣಗಳೆನ್ನುವಂತಹ ಕ್ರಿಯೆ ಎಲ್ಲರಿಗೂ ಒಂದೇ ರೀತಿಯಾಗಿ ಇರುವಂತಹದ್ದು. ಹುಟ್ಟಿದವರಿಗೆ ಸಾವು ನಿಶ್ಚತವೆಂದಾದಲ್ಲಿ ಬದುಕಿರುವಾಗ ಎಲ್ಲರೂ ತಮ್ಮ ಯೋಗ್ಯತೆಗೆ ತಕ್ಕುದಾದಷ್ಟಾದರೂ ಸಮಾಜ ಮುಖಿ ಒಳ್ಳೆಯ ಕೆಲಸಗಳನ್ನು ಮಾಡಬೇಕಲ್ಲವೆ? ಒಬ್ಬರ ತಪ್ಪುಗಳನ್ನೊಬ್ಬರು ತಿದ್ದುತ್ತ ಸಹಕಾರದಿಂದ ಸಹ ಜೀವನ ನಡೆಸಬಾರದೇಕೆ?
3.
ಹುಳುಕು ದಂಟಿಗೆ ಕುಡಿಯು
ಚಿಗುರೊಡೆಯುವದ್ಯಾ ಮಾತು,
ರೊಗಿಷ್ಟ ದೇಹದ ನಡೆಯು
ವಂಶ ಬೆಳೆಯುವುದ್ಯಾ ಕತೆಯು!
- ಎಮ್ಮೆಚ್ಚೆ
ವಿಸ್ತೃತ
ಸಸಿಗಳನ್ನು ಬೆಳೆಸಬೇಕಾದಲ್ಲಿ ಸಾಮಾನ್ಯವಾಗಿ ಎರಡು ಮುಖ್ಯ ಪದ್ದತಿಯಿಂದ ಬೆಳೆಸಬಹುದು. ಒಂದು ಬೀಜಗಳನ್ನು ಬಿತ್ತುವ ಮುಖಾಂರ. ಇನ್ನೂಂದು ಕಾಂಡಗಳನ್ನು ನೆಡುವ ಮುಖಾಂತರ. ಕೆಲವರು ಮೌಢ್ಯತೆಯಿಂದ ಅತ್ಯಾಸೆಗೆ ಬಿದ್ದು, ಹಸಿ ಇದೆಯಂದುಕೊಂಡು ಹುಳುಕು ಬಿದ್ದ ದಂಟಿನ ಗಳಲನ್ನೇ ಸಸಿ ಯಾಗಿಸುವ ಆಸೆಗೆ ಬೀಳುತ್ತಾರೆ. ಹುಳುಕುಬಿದ್ದ ದಂಟಿನಿಂದ ಮೊಳಕೆ ಯೊಡೆದು ಸಸಿ ಚಿಗುರಲಾರದು. ಆದರೂ ಸಹ ಕೆಲವರು ವ್ಯರ್ಥ ಪ್ರಯತ್ನ ಬಿಡಲಾರರು.
ಅದೇ ತೆರನಾಗಿ ಕೆಲವು ಆಗರ್ಭ ಶ್ರೀಮಂತರ ಮಕ್ಕಳು ಚಿಕ್ಕ ವಯಸ್ಸುಗಳಲ್ಲಿಯೇ ಬೇಕಾಬಿಟ್ಟಿ ನಾನಾತರಹದ ವ್ಯಸನಿಗಳಾಗಿ ತಮ್ಮ ದೈಹಿಕ ಸಾಮರ್ಥ್ಯ ಕಳೆದು ಕೊಂಡವರಾಗಿರುತ್ತಾರೆ. ಕೆಲವರಿಗೆ ಮಾರಣಾಂತಿಕ ಕಾಯಿಲೆಗಳೂ ಬಂದಿರುತ್ತವೆ. ಅವರು ಬಳಸುವ ಯೋಗ್ಯ ಚಿಕಿತ್ಸೆ ಮತ್ತು ಸೌಂದರ್ಯವರ್ಧಕಗಳಿಂದಾಗಿ ಚನ್ನಾಗಿಯೇ ಕಾಣುತ್ತಿರುತ್ತಾರೆ. ಇತ್ತ ಅಂತಹ ಜನರ ಪಾಲಕರು, ಮಕ್ಕಳ ಮೇಲಿನ ಪ್ರೀತಿ ಮಮತೆಗಳಿಂದ ಕೇಳಿದ್ದಕ್ಕೂ ಹೆಚ್ಚು ಸೌಲತ್ತುಗಳನ್ನೊದಗಿಸುತ್ತಾರೆ. ಮಗ ವಯಸ್ಸಿಗೆ ಬಂದೊಡನೆ ಸುಂದರವಾದ ಹೆಣ್ಣು ನೋಡಿ ಮದುವೆ ಮಾಡಿ, ಮೊಮ್ಮಕ್ಕಳೊಂದಿಗೆ ಆಟವಾಡುವ ಕನಸುಕಾಣುತ್ತಾರೆ. ಬರುವ ವಂಶದ ಕುಡಿಗಾಗಿ ಎಂದು ಬಂಗಾರದ ಕಡಗದ ಕಲ್ಪನೆಯಲ್ಲಿರುತ್ತಾರೆ.
ಅತ್ತ ರೋಗದ ಉಲ್ಭನಿಸಿ ದೇಹ ಜರ್ಜರಿತವಾದ ಮಗನಿಗೆ ತನ್ನಿಂದ ವಂಶಾಭಿವ್ರೃದ್ದಿ ಸಾಧ್ಯವಿಲ್ಲ ಎಂದು ತಿಳಿದಿದ್ದರೂ ಸಹ ಮರ್ಯಾದೆಗೆ ಹೆದರಿಕೊಂಡು ಇದ್ದ ಸತ್ಯತೆಗಳನ್ನು ಮರೆಮಾಚಿ ಹಿರಿಯರ ಅನತಿಯಂತೆ ಮದುವೆಯಾಗಿ ಸೊಸೆಯ ಬದುಕನ್ನೇ ಬಲಿ ತೆಗೆದುಕೊಂಡು ಬಿಡುತ್ತಾರೆ. ಕೆಲ ವರ್ಷಗಳಲ್ಲಿಯೇ ಮಗನನ್ನೂ ಕಳೆದುಕೊಂಡು ಕಣ್ಣೀರಲ್ಲಿ ಕೈ ತೊಳೆಯುತ್ತಾರೆ.
ಆದ್ದರಿಂದ ಪಾಲಕರಾದವರು ಮಕ್ಕಳನ್ನು ಎಷ್ಟೇ ಪ್ರೀತಿಸಿದರೂ ಹದ್ದುಬಸ್ತಿನಲ್ಲಿ ಇಡುವುದನ್ನು ಮರೆಯಬಾರದು. ಮದುವೆ ಮಾಡಬೇಕೆಂದರೆ ಪೂರ್ವಾಪರವಾಗಿ ಮಕ್ಕಳ ಸಮ್ಮತಿಯನ್ನು ಪ್ರೀತಿಯಿಂದ ಪಡೆದುಕೊಳ್ಳಬೇಕು. ಅದೇತೆರನಾಗಿ ಮಕ್ಕಳೂ ಸಹ ಪಾಲಕರು ಕೊಟ್ಟ ಅನುಕೂಲತೆಗಳನ್ನು ಸದುಪಯೋಗ ಪಡಿಸಿಕೊಂಡು ಸುಂದರ ಬದುಕು ಕಟ್ಟಿಕೊಳ್ಳಬೇಕು.
Comments
Post a Comment
Liked the post? Don't forget to tell us, do comment.