1.

ಸಿಟ್ಟಾದವಗೇ ಕ್ಷಮಾಗುಣ
ಗಟ್ಟಿಯಾದವಗೇನಲ್ಲ,
ಮುಟ್ಟಾದವಳಿಗೇ ತಾಯಿ ಋಣ
ಪಟ್ಟ ಮುಟ್ಟಿದವಳಿಗೇನಲ್ಲ!
                                           - ಎಮ್ಮೆಚ್ಚೆ

ವಿಸ್ತೃತ
    ಜೀವನದಲ್ಲಿ ಕ್ಷಮಾಗುಣವನ್ನು ಬೆಳೆಸಿಕೊಳ್ಳಬೇಕು  ಅದು ಯೋಗ್ಯವಾದುದು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಆ ಕ್ಷಮಾಗುಣವು ಎಲ್ಲರಿಗೂ ಸಂಬಂಧ ಪಟ್ಟುದಾಗಿರುವದಿಲ್ಲ. ಯಾರು ವಿನಾಕಾರಣ ಕೊಪಗೊಳ್ಳುವರೊ ಅಂಥವರಿಗೆ ಮಾತ್ರ ಕ್ಷಮಾಗುಣ ಬೇಕೇ ಹೊರತು ಸಿಟ್ಟಿಗೇಳದವರಿಗೆ ಇದರ ಅವಶ್ಯಕತೆ ಇಲ್ಲ. ಶಾಂತ ಗುಣದವರಿಗೆ ಕ್ಷಮಾಗುಣದ ಅವಶ್ಯಕತೆಯೇ ಇರುವದಿಲ್ಲ.
ಬದುಕಿನಲ್ಲಿ ಕೆಲ ಸಂದರ್ಭ, ಕೆಲ ವಿಷಯಗಳಿಗೆ ಎಲ್ಲರೂ ಸಿಟ್ಟು ಮಾಡಿ ಗದರಿಸಬೇಕು. ಆ ಸಿಟ್ಟು  ಸಮಾಜ, ಕುಟುಂಬದ ಸುಧಾರಣೆಗೋಸ್ಕರ ವಿಷಯಾದರಿತವಾಗಿರಬೇಕು. ಇಂಥಹ ವಿಷಯಗಳಿಗೆ ಸಿಟ್ಟೇ ಬಾರದಂತಹ ವ್ಯಕ್ತಿ ತಮ್ಮ ಜವಾಬ್ದಾರಿಗಳಿಂದ ದೂರ ಸರಿಯುವವರಾಗಿರುತ್ತಾರೆ. ವಿಷಯಾದರಿತ ಸಿಟ್ಟು ಆ ಸಂದರ್ಭಗಳಿಂದಲೇ ಕೊನೆಯಾಗುತ್ತದೆ. ಅದು ಯಾವುದೇ ಹಾನಿಕಾರಕ ವಾಗಿರುವದಿಲ್ಲ. ವಿನಾಕಾರಣವಾಗಿ, ತಮ್ಮ ಮನಸಿನ ಹೆಮ್ಮಸುತನಕ್ಕೆ, ದೊಡ್ಡಸ್ಥನಕ್ಕೆ ಉಪಯೊಗಿಸುವ ಸಿಟ್ಟು ಧೀರ್ಘಕಾಲಿಕ ಉಳಿದು ಅವರತನವನ್ನೇ ನಾಶಗೊಳಿಸುತ್ತದೆ. ಆದ್ದರಿಂದ ಇಂಥ ಸಿಟ್ಟಾಗುವವರ ಒಳ್ಳೆಯದಕ್ಕೇ ಕ್ಷಮಾಗುಣವಿರುತ್ತದೆ
 ಅದರಂತೆಯೇ ತಾಯಿ ತನದ ಕನಸು ಪ್ರತಿಯೊಬ್ಬ ಮಹಿಳೆಗೂ ಇರುತ್ತದೆ. ಆದರೆ ದೈಹಿಕ ನೂನ್ಯತೆಗಳಿಂದಾಗಿ ಎಲ್ಲ ಮಹಿಳೆಯರೂ ಮಕ್ಕಳನ್ನು ಪಡೆದುಕೊಳ್ಳುವದು ಸ್ವಸಂತಾನ ಪಡೆದುಕೊಳ್ಳುವದು  ಸಾಧ್ಯವಾಗುವದಿಲ್ಲ. ಮಾಸಿಕ ಋತು ಚಕ್ರವುಳ್ಳ ಮಹಿಳೆಯರು ಮಾತ್ರ ಸಂತಾನ ಅಭಿವ್ರೃದ್ದಿಗೆ ಯೋಗ್ಯವಾದವರಾಗಿರುತ್ತಾರೆ. ವಯಸ್ಸಾಗಿ  ಋತು ಚಕ್ರ ನಿಂತವರಾಗಲಿ, ಋತು ಚಕ್ರ ಬರದ ಯಾವುದೇ ಮಹಿಳೆಯರೂ ಸ್ವಸಂತಾನ ಪಡೆದುಕೊಳ್ಳುವದು ಅಸಾಧ್ಯವಾದುದಾಗಿರುತ್ತದೆ ಆದ್ದರಿಂದ  ಮುಟ್ಟಾಗುವ ಮಹಿಳೆಯರಿಗೆ ಮಾತ್ರ ಸ್ವಸಂತಾನ ಅಥವಾ ತಾಯಿಯಾಗುವ ಭಾಗ್ಯ ವಿರುತ್ತದೆಂದು ತಿಳಿದುಕೊಳ್ಳಬೇಕು.

2.


ಮಾತಲ್ಲಿ ಮನಿದವನು
ದ್ವನಿ ಅಳಿಯುವನು
ಮಾತೇ ಮನಿಯಾದವರು
ಮಾನಕ್ಕೂ ಬಣ್ಣ ಕಟ್ಟುವರು!
                  ಎಮ್ಮೆಚ್ಚೆ

ವಿಸ್ತೃತ
    ಎಲ್ಲರೂ ತಪ್ಪುಗಳನ್ನು ಮಾಡುವದು ಸ್ವಾಭಾವಿಕವಾದದ್ದು ಆಗಿರುತ್ತದೆ. ಅಂಥ ತಪ್ಪುಗಳನ್ನು ಮಾಡಿದ ವ್ಯಕ್ತಿಗಳಿಗೆ ಯಾರಾದರೂ ಬುದ್ದಿವಂತರು ತಿಳಿಹೇಳಿದಾಗ ತಿಳುವಳಿಕೆ ಉಳ್ಳವರು ತಮ್ಮ ಘಟಿತ ತಪ್ಪುಗಳನ್ನು ತಿಳಿದುಕೊಂಡು ತಮ್ಮ ವಾದ ಕೊನೆಗೊಳಿಸಿ ಸರಿಯಾಗಿ ಬದುಕಲು ಪ್ರಯತ್ನ ಪಡುತ್ತಾರೆ. ಯಾವರೀತಿಯ ಮಂಡವಾದದಿಂದ ಮುಂದುವರೆಯುವದಿಲ್ಲ.
    ಇನ್ನು ಕೆಲವು ಜನ ತಮ್ಮ ಮಂಡತನದಿಂದ ಬುದ್ದಿವಾದ ಕೇಳಿಕೊಳ್ಳದೆ, ಬುದ್ದಿವಾದ ಹೇಳಿದವರದೇ ತಪ್ಪು ತಾ ನಡೆಯುವ ಮಾರ್ಗವೇ ಸರಿಯಾದುದು ಎಂದು ವಾದಿಸುತ್ತ ಅವರೊಂದಿಗೇ ಜಗಳ ಕಾಯುತ್ತಾರೆ. ತಮ್ಮ ಭಂಡತನಗಳಿಂದ ಬುದ್ದಿವಾದ ಹೇಳಿದವರಿಗೇ ತಿರುಗಿ ಬಿದ್ದು ಅವರನ್ನೂ ತಮ್ಮ ಹಂತಕ್ಕೆ ತರಲು ಪ್ರಯತ್ನಿಸುತ್ತಾರೆ. ಮತ್ತು ಬುದ್ದಿ ಹೇಳಿದುದೇ ತಪ್ಪು ಎನ್ನುವಂತೆ ಮಾಡಿಬಿಡುತ್ತಾರೆ. ಇಂಥವರಿಗೆ ಸಂದರ್ಭಿಕ ವ್ಯತಿರಿಕ್ತ ಮಾತುಗಾರಿಕೆ ಸ್ವಾಭಾವಿಕವಾಗಿ ಒಲಿದಿರುತ್ತದೆ. ಇವರು ಮಾನವಂತಿಕೆ ಬಿಟ್ಟವರಾಗಿದ್ದು ಪರರ ಮಾನ ಕಳೆದು ಅವರನ್ನು ಹೆದರಿಸಬೇಕೆಂಬ ಮನಸ್ಥಿತಿ ಉಳ್ಳವರಾಗಿರುತ್ತಾರೆ. ಇದನರಿತ ಬಹಳ ಜನ ಬುದ್ದಿವಂತರು ಹೆಚ್ಚು ತಲೆ ಕೆಡಿಸಿಕೊಳ್ಳದೆ ಅವರೊಂದಿಗೆ ಎಷ್ಟಿರಬೇಕೊ ಅಷ್ಟೇ ಇದ್ದು ತಮ್ಮ ಅಂತರ ಕಾಯ್ದುಕೊಂಡು ತಪ್ಪಿತಸ್ಥರೊಂದಿಗೆ ಒಳ್ಳೆಯವರೇ ಆಗುತ್ತಾರೆ. ಪರರ ಚಿಂತೆ ನಮಗೇಕಯ್ಯ ಎಂದು ಹೇಳುತ್ತ ತಮ್ಮತನ ಮರೆತು ದಾರ್ಷನಿಕರಾಗುತ್ತಾರೆ. ಇದರಿಂದ ತಪ್ಪು ಮಾಡಿದವರು ಇನ್ನೂ ಹೆಚ್ಚು ಹೆಚ್ಚು ತಪ್ಪುಗಳನ್ನು ಯಾರಿಗೂ ತಿಳಿಯದಂತೆ ಮಾಡಲು ಪ್ರೊತ್ಸಾಹಿಸಿದಂತಾಗುತ್ತದೆ.
    ಸಮಾಜ, ಮನೆ ಸುಧಾರಿಸುವ ನಿಜವಾದ ಕಳಕಳಿ ಉಳ್ಳವರು ಇಂಥಹ ಭಂಡತನಗಳಿಗೆ ಹೆದರದೆ ಬುದ್ದಿ ಹೇಳಿ ತಿದ್ದುವದು ಅವಶ್ಯವಾಗಿರುತ್ತದೆ. ಭಂಡರಿಗೂ ಸಕಾಲ ಬಂದಾಗ ತಿಳುವಳಿಕೆ ಉಂಟಾಗುತ್ತದೆ.ಆದರೆ ಕಾಲ ಗತಿಸಿ ಹೋಗಿರುತ್ತದೆ.ತಿದ್ದಿಕೊಳ್ಳಲಾರದಷ್ಟು ಅಧೋಗತಿಗೆ ತಲುಪಿಬಿಟ್ಟಿರುತ್ತಾರೆ.

Comments

Popular Posts