1.

ಮನಸಿನ  ಅನುಭವಗಳೆರಡವು ಸೋಲು-ಗೆಲುವು 
ಆತ್ಮ ಸಂತ್ರೃಪ್ತಿಯೇ ಅಲ್ಲವೇ ಎಲ್ಲಕ್ಕೂ  ಒಲವು,
 ಕೈಗೆಟುಕದ ಚಿತ್ತಾರದ  ಕನಸವು ಸಾವಿರಾರು
ನಿಖರವಾಗಿ ನನಸಾಗಿವೆಂದು ಹೇಳುವವರಾರು!
                                                                  - ಎಮ್ಮೆಚ್ಚೆ
ವಿಸ್ತೃತ
   ಮನುಷ್ಯ ಜೀವಿತದ ಹೋರಾಟದ ಪ್ರತಿ ಗಳಿಗೆಯ ಉದ್ದೇಶಗಳ ಅಂತಿಮತೆ  ಒಂದೊ ಅದರ ಈಡೇರಿಕೆ(ಸಫಲತೆ, ಗೆಲುವು) ಅಥವಾ ಇನ್ನೋಂದು ಈಡೇರದೇ ಇರುವಿಕೆ (ವಿಫಲತೆ, ಸೋಲು) ಗಳಾಗಿರುತ್ತವೆ. ಇವು ಬದುಕಿನ ಪ್ರತಿ ಹಂತದಲ್ಲೂ ಘಟಿಸುತ್ತಿರುತ್ತವೆ. ಎಲ್ಲ ಗೆಲುವುಗಳೂ ಸಂತಸದಾಯಕ ಆಗಿರುವದಿಲ್ಲ, ಎಲ್ಲ ಸೋಲುಗಳೂ ದುಃಖಕರವಾಗಿರುವದಿಲ್ಲ. ಸೋಲು ಗೆಲುವಿನ ಸಂಘರ್ಷವೇ ಬದುಕೆನ್ನುವುದು ನಿಜ. ಆದರೆ ಅವುಗಳ ಫಲಿತಾಂಶದ ಸಾರ ತೃಪ್ತಿದಾಯಕವಾಗಿರಬೇಕು. ತೃಪ್ತಿಯಿಂದ ಜೀವಿಸುವುದೇ ಬದುಕಿನ ಏಕೈಕ ಉದ್ದೇಶವಾಗಿರುತ್ತದೆ. ಆದ್ದರಿಂದ ಸೋಲು ಗೆಲುವುಗಳೆಂದು ವ್ಯರ್ಥವಾಗಿ ಹಳಹಳಿಸುವದಕ್ಕಿಂತ ಎಷ್ಟು ನೆಮ್ಮದಿದಾಯಕ ತೃಪ್ತಿ ಪಡೆದುಕೊಂಡು ಜೀವಿಸುತ್ತೇವೆನ್ನುವುದು ಮುಖ್ಯವಾದುದು.
  ಬದುಕಿನಲ್ಲಿ ಉನ್ನತತೆ ಪಡೆದುಕೊಳ್ಳುವುದು ಎಲ್ಲರ ಹೆಬ್ಬಯಕೆ. ಆದರೆ ಎಲ್ಲರೊಂದಿಗೆ ಸಾಮರಸ್ಯದಿಂದ ಸಂಘರ್ಷಮಯವಾಗಿ ಬದುಕಿ ಜೀವನಾಭಿವೃದ್ಧಿ ಮಾಡಿಕೊಳ್ಳುವುದು ಬಿಟ್ಟು ಕೇವಲ ಬಣ್ಣಬಣ್ಣದ ಕನಸುಗಳನ್ನು ಕಾಣುತ್ತ ಕುಳಿತರೆ ಅಭಿವೃದ್ದಿಯಾಗುವುದಿಲ್ಲ. ಕಂಡ ಕನಸುಗಳೆಲ್ಲ ನನಸಾಗುವದಿಲ್ಲ. ನಮ್ಮ ನಮ್ಮ ಜೀವನಾನುಭವಗಳೇ ನಮ್ಮ ತನದ ಆಭಿವ್ರೃದ್ದಿಗೆ ಪೂರಕತೆಯನ್ನು ಒದಗಿಸುತ್ತದೆ. ಆದ್ದರಿಂದ ಭ್ರಮಾ ಮನೋಲೋಕದಲ್ಲಿ ಬದುಕುವುದಕ್ಕಿಂತ ನೈಜತೆಯಿಂದ ಪ್ರಯತ್ನ ಪೂರಕವಾಗಿ ಬದುಕಿ ಅಭಿವೃದ್ಧಿ ಹೊಂದಬೇಕು.

2.

ವಿದ್ಯೆ ಬಯಸುವದಿಲ್ಲ ಆ ಕೂಡುವ  ಕೂಡಿಕೆ
ಬದುಕಿಗೆ ಸಾಕು ಜ್ಜಾನದ ಪಡಿಕೆ ದ್ಯಾನದ ತಡಿಕೆ,
ಸೋರಬಾರದದು ಸದ್ಗುಣ ಶೀಲದ ಮಡಿಕೆ
ತಿಳಿದು ಸಾಗಿಸಬೇಕು ಬದುಕ ಬಾಳ ತೀರಕೆ!
                                                                   - ಎಮ್ಮೆಚ್ಚೆ
ವಿಸ್ತೃತ
    ಮನುಷ್ಯ ಕುಲವನ್ನು ಅಭಿವ್ರೃದ್ದಿಗೊಳಿಸುವುದು ವಿಧ್ಯೆ ಮಾತ್ರ. ವಿದ್ಯೆ ಇಲ್ಲದವರು ಹದ್ದಿಗಿಂತ ಕಡೆ ಎಂದು ತಿಳಿದು  ಹಿರಿಯರು ಎಲ್ಲ ಸ್ಥರಗಳಲ್ಲಿಯೂ ವಿದ್ಯಾರ್ಹತೆಯನ್ನು ಮಾನದಂಡವಾಗಿಸಿದ್ದಾರೆ. ವಿದ್ಯೆ ಇದ್ದರೆ ಜಗತ್ತಿನ ಎಲ್ಲ ವಿಷಯಗಳನ್ನೂ ತಿಳಿದುಕೊಂಡು ಬದುಕ ಬಹುದು. ಅವಿದ್ಯಾವಂತನಾಗಿದ್ದರೆ ಜಗತ್ತಿನ ವಿದ್ಯುನ್ಮಾನ ತಿಳುವಳಿಕೆಗೆ  ಹಿನ್ನಡೆ ಉಂಟಾಗುತ್ತದೆ. ಆದರೆ ಗಂಡು ಹೆಣ್ಣುಗಳ ಲೈಂಗಿಕ ಸಂರ್ಪಕದ ವಿಷಯಕ್ಕೆ ಯಾವ ವಿದ್ಯೆಯ ಅವಶ್ಯಕತೆಯೂ ಬೇಕಾಗಿರುವದಿಲ್ಲ. ಬಹುಷ್ಯ ಈ ವಿಷಯ, ಹದಿವಯದಲ್ಲಿ ಪ್ರಕಟವಾಗುವ ನಿಬಂಧನೆಯೊಂದಿಗೆ ಹುಟ್ಟಿನೊಂದಿಗೇ ಬಂದಿರಬಹುದೇನೋ .ಇದನ್ನು ಸ್ವ ಕಲಿತಿರುವೆನೆಂದು ತಿಳಿದು ಬೇಕಾಬಿಟ್ಟಿ ಬಳಸುವಂತಿಲ್ಲ. ಸಾಮಾಜಿಕ ಕಟ್ಟುನಿಟ್ಟುಗಳ ಅಡಿಯಲ್ಲಿ ಜ್ಞಾನ ಹೊಂದಿ ಉದ್ರೇಪಿತ ಮನಸುಗಳನ್ನು ದ್ಯಾನ ಮಾಡುತ್ತ ನಿಯಂತ್ರಣದಲ್ಲಿ ಇಟ್ಟುಕೊಂಡರೆ ಸಮಾಜ ಸ್ವಸ್ಥವಾಗಿರುತ್ತದೆ. ತಳುವಳಿಕೆ ಎನ್ನುವುದು ಹಾಸಿಗೆ ಯಾದರೆ ತಿಳಿದುಕೊಂಡ ಮನಸ್ಸನ್ನು ನಿಯಂತ್ರಣದಲ್ಲಿಡಲು  ದ್ಯಾನ ಮಾರ್ಗವನ್ನು ಅನುಸರಿಸಬೇಕು. ಅಜ್ಞಾನದಿಂದ ತಮ್ಮ ಮನಸುಗಳನ್ನು ಹರಿಬಿಟ್ಟು ಮರಣಾಂತಿಕ ಕಾಯಿಲೆಗಳಿಗೆ ಒಳಗಾಗಿ ತಮ್ಮ ಭೌವ್ಯ ಬದುಕನ್ನು ಹಾಳುಮಾಡಿಕೊಳ್ಳಬಾರದು. ಆದ್ದರಿಂದ ಮನುಷ್ಯರಾದ ನಾವುಗಳು ಸಾಮಾಜಿಕ ಬದ್ದತೆಗಳೊಂದಿಗೆ ನಮ್ಮ ಮಾನ,ಮರ್ಯಾಧೆಗಳನ್ನಿಟ್ಟುಕೊಂಡು ಗೌರವಯುತವಾಗಿ ಬದುಕಿ ಸದ್ಗತಿ ಹೊಂದಬೇಕು.

Comments

Popular Posts