1.
ಸದ್ದಿಲ್ಲದೆ ತಿಂದಿರಬಹುದು ಲದ್ದಿ ಆ ಬುದ್ಧಿವಂತ
ಮದ್ದಿಲ್ಲದೆ ಸತ್ತಿರಬಹುದು ರೋಗಕ್ಕೆ ಮಹಾ ಶಕ್ತಿವಂತ
ರೋಧಕ್ಕೆ ಪ್ರತಿರೋಧವದು ನ್ಯೂಟನ್ ಮೂರನೇ ನಿಯಮ
ಸದ್ಯ ಉಳಿದಿರುವುದು ಪ್ರಜ್ಞಾವಂತಿಕೆ ಸಂಯಮ!
- ಎಮ್ಮೆಚ್ಚೆ
ವಿಸ್ತೃತ
ಮಾನವರ ಜ್ಞಾನದಿಂದ ಜಗತ್ತಿನ ಎಷ್ಟು ಪ್ರಗತಿ ಸಾಧ್ಯವೋ ಅದಕಿಂತಲೂ ಹೆಚ್ಚು ದುರ್ಗತಿಗಳೂ ಉಂಟಾಗಬಹುದು. ಮನುಷ್ಯ ಅಭಿವ್ರೃದ್ಧಿ ಹೊಂದಿದಂತೆಲ್ಲ ಭಾವನಾ ಶೂನ್ಯನಾಗುತ್ತಿದ್ದಾನೆ. ಮೊದಲು ಯುದ್ಧಗಳಾಗಬೇಕೆಂದರೆ ಕನಿಷ್ಟ ಆಯುಧಗಳನ್ನು ಉಪಯೋಗಿಸುತ್ತಿದ್ದರು. ಪ್ರಗತಿ ಹೊಂದಿದಂತೆಲ್ಲ ಹೊಸ ಹೊಸ ತಂತ್ರಜ್ಞಾನಗಳ ಬಳಕೆಯ ಆಯುಧಗಳು ಆಯುಷ್ಕಾರಗೊಂಡವು. ಈಗ ಮತ್ತೆ ಮುಂದುವರೆದು ಜೈವಿಕ ಯುದ್ದದ ಸಿದ್ದತೆ ಮಾಡಿಕೊಂಡಿದ್ದಾರೆ. ಈಗ ಹರಡುತ್ತಿರುವ ಮರಣಾಂತಿಕ ಜಾಢ್ಯ ಕರೋನಾ ಸಹ ಮಾನವ ನಿರ್ಮಿತ ವೈರಸ್ ಎಂದು ಎಲ್ಲಾದೇಶಗಳೂ ಬೊಬ್ಬೆ ಇಡುತ್ತಿವೆ. ಮಾನವ ಸಂಕುಲಕ್ಕೆ ಮಾರಕ ಉಂಟುಮಾಡುವ ಇಂಥಹ ಕೆಲಸವನ್ನು ಯಾವ ಬುದ್ದಿವಂತನೇ ಮಾಡಿರಲಿ ಅದು ಅಕ್ಷಮ್ಯ ಅಪರಾಧವಾಗಿರುತ್ತದೆ. ಇದರಿಂದ ತನ್ನ ಜನರಿಗೂ ಆಪತ್ತು ಕಾಯ್ದಿರುತ್ತದೆಂದು ತಿಳಿಯದ ಬುದ್ದಿಹೀನರಾಗಿರುತ್ತಾರೆ ಹಾಗೂ ಹುಂಬುತನದ ಮೌಢ್ಯತೆಯಿಂದ ಕೂಡಿದ ವಿಚಾರವಂತರಾಗಿರುತ್ತಾರೆ. ಈ ಹೇಯ ಕೃತ್ಯದಿಂದಾಗಿ ಜಗತ್ತಿನ ಎಲ್ಲಾ ದೇಶಗಳ ಲಕ್ಷಾಂತರ ಜನ ಅಮಾಯಕರು ತಮ್ಮ ಪ್ರಾಣ ಕಳೆದುಕೊಳ್ಳುವಂತಾಗಿದೆ. ದೊಡ್ಡ ಬಲಿಷ್ಟ ದೇಶಗಳೂ ನಲುಗಿ ಹೋಗಿವೆ. ವೈರಿ ಕ್ರೌರ್ಯದ ನಗೆಯಲ್ಲಿ ಬೀಗುತ್ತಿದ್ದಾನೆ. ಇದರ ಸತ್ಯ ಪರೀಸ್ಥಿತಿಗಳನ್ನರಿತ ಜಗತ್ತಿನ ರಾಷ್ಟ್ರಗಳೆಲ್ಲ ಕೋಪಗೊಂಡು ವಿಜ್ಞಾನಿ ನ್ಯೂಟನ್ (ಮೂರನೇ ನಿಯಮ) ಹೇಳಿದಂತೆ, ರೊಧ-ಪ್ರತಿರೋಧಗಳು ಪರಸ್ಪರ ಪೂರಕ ವಿರೋಧ ಶಕ್ತಿಯನ್ನು ಹೊಂದಿರುತ್ತದೆ. ಅಂದರೆ ನಮ್ಮ ಧರ್ಮ ಶಾಸ್ತ್ರದಂತೆ ಯಾರು ಪರರಿಗೆ ಏನು ಬಯಸುತ್ತಾರೆಯೋ ಅದು ಅವರಿಗೂ ಆಗಿಯೇತೀರುತ್ತದೆ. ವೈರಿಯ ಇಂಥಹ ದುರ್ಬುದ್ಧಿಯ ವೇಳೆಯಲ್ಲಿ ನಾವು ವಿಚಲಿತರಾಗಿ ನಮ್ಮ ಮನಸಿನ ಸ್ಥೀಮಿತತೆ ಕಳೆದುಕೊಳ್ಳದೆ ಪ್ರಜ್ಞಾವಂತಿಕೆಯಿಂದ ಬಲ್ಲವರು ಹೇಳಿದಂತೆ ತಾಳ್ಮೆಯಿಂದ ಆರೋಗ್ಯ ನಿಯಮ ಪಾಲಿಸಿ ರೋಗ ಮುಕ್ತರಾಗೋಣ. ಕರೋನಾ ರೋಗವನ್ನು ಬುದ್ದಿವಂತಿಕೆಯಿಂದ ಪ್ರಪಂಚದಿಂದಲೇ ಓಡಿಸೋಣ.
2.
ಮೂರ್ಖನ ಕರಿ ನೆರಳವನು
ಬಲು ಅಧಿಕ ಮಾತಗಾರನು,
ಮೌಢ್ಯತೆಯ ಭರ್ಜರಿ ಮೌನ
ಅದು ಸತಿಯೊಡನೆ ಸಹಗಮನ!
- ಎಮ್ಮೆಚ್ಚೆ
ವಿಸ್ತೃತ
ಮಾತು ಬಲ್ಲವನಿಗೆ ಜಗಳವಿಲ್ಲ ಎನ್ನುವಂತೆ ಮಾತಿನಲ್ಲಿ ಚಾಣಾಕ್ಷನಾದ, ಸಾಂಧರ್ಭಿಕವಾಗಿ ಮಾತನಾಡುವ ಕಲೆಯನ್ನು ಅರಗಿಸಿಕೊಂಡವರು ವಾಗ್ಮಿಗಳು ಅನಿಸಿಕೊಳ್ಳುತ್ತಾರೆ. ವಿಚಿತ್ರವೆಂದರೆ ಎಷ್ಟೋ ಜನ ಮಹಾನ್ ಬುದ್ದಿವಂತರುಗಳಿಗೆ ಸಾಂದರ್ಭಿಕವಾಗಿ ಮಾತನಾಡುವ ಶೈಲಿ ಗೊತ್ತಿರುವದಿಲ್ಲ. ಮತ್ತೆ ಇನ್ನೂ ಬಹಳ ಜನ ಅರೆಬರೆ ವಿದ್ಯಾವಂತರು ತಮ್ಮ ಒಣ ಹೆಮ್ಮಸುತನಕ್ಕೆ ತಾವು ತಿಳಿದುದಕಿಂತಲೂ ಹೆಚ್ಚಿಗೆ ವೈಭವೀಕರಿಸಿ ಹೇಳುತ್ತಿರುತ್ತಾರೆ. ಇಂಥಹವರಿಗೆ ವಾಚಾಳಿಗಳೆನ್ನುತ್ತಾರೆ. ಸಾಮಾನ್ಯವಾಗಿ ಮಾತುಗಾರರು ಬುದ್ದಿವಂತರಾಗಿರುತ್ತಾರೆ ಆದರೆ ಎಲ್ಲಾ ಬುದ್ದಿವಂತರೂ ಮಾತುಗಾರರಾಗಿರುವದಿಲ್ಲ ಇಂಥಹವರು ಮಾತಿನಲ್ಲಿ ಎಷ್ಟೇ ನಿಪುಣತೆಯನ್ನು ಹೊಂದಿದ್ದರೂ ಸಹ ತಮಗೆ ತಿಳಿಯದಂತೆಯೇ ತಪ್ಪಿನ ಸಾಕ್ಷಿಗಳನ್ನು ಉಳಿಸುತ್ತಲೇ ಹೋಗುತ್ತಾರೆ. ಹೀಗಾಗಿ ಕೇಳುಗರು ಇವರ ಸಾಮರ್ಥ್ಯ ಅಳೆದುಕೊಂಡು ವಾಚಾಳಿಯನ್ನು ಅಪ್ಪಟ ಮೂರ್ಖರನ್ನಾಗಿಸುತ್ತಾರೆ. ಅದಕ್ಕಾಗಿ ಹಿರಿಯರು ಮಾತಿಗಿಂತ ಮೌನಕ್ಕೇ ಹೆಚ್ಚಿನ ಬೆಲೆ ಕೊಟ್ಟಿದ್ದಾರೆ. ಮಾತು ಬೆಳ್ಳಿ, ಮೌನ ಬಂಗಾರ ಎಂದಿದ್ದಾರೆ. ಮೌನವೇ ತನ್ನನ್ನು ತಾನು ಆಂತರಿಕವಾಗಿ ತಿಳಿದುಕೊಳ್ಳಲು ಮಹಾದಾರಿಯಾಗಿರುತ್ತದೆ. ಆದರೆ ಮೌನದ ಬಗ್ಗೆ ಹಾಗೂ ಮೌನದ ಸದುಪಯೋಗದ ಬಗ್ಗೆ ಏನೇನೂ ಸರಿಯಾದ ತಳುವಳಿಕೆ ಇಲ್ಲದಂತಹ ದಡ್ಡರು ಮೌನವಾಗಿರುವುದು ಉಪಯೋಗವಾದುದೇನಲ್ಲ. ಮೌನವಾಗಿರುವವರೆಲ್ಲರೂ ಸಾಧಕರಾಗಿರಲು ಸಾಧ್ಯವಿಲ್ಲ. ಬುದ್ದಿಗೇಡಿಗಳು ತಮ್ಮ ಹೆಂಡತಿಯಂತೆ ಮೌನವನ್ನು ಎಷ್ಟೇ ಪ್ರೀತಿಸಿದರೂ ಕೊನೆಗೆ ಫಲಿತಾಂಶ ಅದರೊಂದಿಗೇ ಸಾಯಬಹುದಾಗಿರುತ್ತದೆ ಅಷ್ಟೆ. ಆದ್ದರಿಂದ ವಾಚಾಳಿಗಳಾಗದೆ ಮಾತಿನಲ್ಲಿ ಚಾಣಾಕ್ಷತೆ ಇಟ್ಟುಕೊಂಡು ಮುಖ್ಯವಾಗಿ ಅನಾವಶ್ಯಕವಾಗಿ ಮಾತನಾಡದೆ ಏಳ್ಗೆಯನ್ನು ಕಂಡುಕೊಳ್ಳಬೇಕು.
Comments
Post a Comment
Liked the post? Don't forget to tell us, do comment.